ಮತ್ತೆ ಬಂತು 50% ಟ್ರಾಫಿಕ್ ಫೈನ್ ಕಟ್ಟುವ ಅವಕಾಶ- 50% traffic fines are back

 SUDDILIVE|| SHIVAMOGGA

ಮತ್ತೆ ಬಂತು 50% ಟ್ರಾಫಿಕ್ ಫೈನ್ ಕಟ್ಟುವ ಅವಕಾಶ- 50% traffic fines are back        


Traffic, fine

ಆಗಸ್ಟ್ 21 ರಂದು ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಗೆ 50% ರಿಯಾತಿದರದಲ್ಲಿ ದಂಡ ಕಟ್ಟುವ  ಆದೇಶ ಮಾಡಿತ್ತು. ಈ ದಂಡ ವಸೂಲಿಯಿಂದ ಸರ್ಕಾರಕ್ಕೆ ಕೋಟ್ಯಾನುಗಟ್ಟಲೆ ಹಣ ವಸೂಲಿಯಾಗಿತ್ತು. ಶಿವಮೊಗ್ಗದಲ್ಲಿಯೇ  ಮೊದಲ ಮೂರು ನಾಲ್ಕು ದಿನಗಳಲ್ಲೇ ಸರಿಸುಮಾರು 24 ಕೋಟಿ ಹಣ ಸಂಗ್ರಹ ವಾಗಿತ್ತು. ಈಗ ಮತ್ತೆ ಮೂರು ತಿಂಗಳ ಅವಧಿಯಲ್ಲೇ ಸರ್ಕಾರ 50% ರಿಯಾತಿಯಲ್ಲಿ ದಂಡ ಪಾವತಿಸಲು ಮತ್ತೊಮ್ಮೆ ಅವಕಾಶ ಮಾಡಿದೆ. 

ಟ್ರಾಫಿಕ್‌ ಫೈನ್‌ ಕಟ್ಟಲು ಮತ್ತೆ ಶೇ.50ರ ರಿಯಾಯಿತಿ ದರ ಪ್ರಕಟಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್‌ ಇಲಾಖೆ ಪ್ರಕಟಣೆ ಹೊರಡಿಸಿದೆ.

ನ.21ರಿಂದ ಡಿಸೆಂಬರ್‌ 12ರವರೆಗೆ ಶೇ.50ರ ರಿಯಾಯಿತಿ ದರದಲ್ಲಿ ದಂಡ ಪಾವತಿಸಬಹುದಾಗಿದೆ. ಕರ್ನಾಟಕ ಸರ್ಕಾರದ ಆದೇಶದ ಹಿನ್ನೆಲೆ ಶಿವಮೊಗ್ಗದಲ್ಲಿಯು ರಿಯಾಯಿತಿ ದರದಲ್ಲಿ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ.

ಶಿವಮೊಗ್ಗದ ಪೂರ್ವ ಸಂಚಾರ ಠಾಣೆ, ಪಶ್ಚಿಮ ಸಂಚಾರ ಠಾಣೆ, ಟ್ರಾಫಿಕ್‌ ಪೊಲೀಸರ ಬಳಿ, ಭದ್ರಾವತಿ ಸಂಚಾರ ಠಾಣೆಯಲ್ಲಿ ದಂಡ ಕಟ್ಟಬಹುದಾಗಿದೆ ಎಂದು ತಿಳಿಸಲಾಗಿದೆ.

50% traffic fines are back

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close