ಸಂಭ್ರಮದ ಕಡೆ ಕಾರ್ತಿಕೋತ್ಸವ-Kartik festival is a celebration

SUDDILIVE || SHIVAMOGGA

ಸಂಭ್ರಮದ ಕಡೆ ಕಾರ್ತಿಕೋತ್ಸವ-Kartik festival is a celebration    

Karthik, celebration

ಕಡೆ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಸಾಗರ ರಸ್ತೆ ಎಪಿಎಂಸಿ ಮುಂಭಾಗದಲ್ಲಿರುವ ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನಡೆದ ಅದ್ದೂರಿ ಪೂಜೆ ಕಾರ್ಯಕ್ರಮದಲ್ಲಿ ಚಾಲಕರೆಲ್ಲರೂ ಸೇರಿ ದೀಪ ಹಚ್ಚುವ ಮೂಲಕ ಸ್ವಾಮಿಗೆ ಪೂಜೆ ಅಭಿಷೇಕ ಪಂಚಾಮೃತ ಹಾಗೂ ಸಾರ್ವಜನಿಕರಿಗೆ  ಭಕ್ತಾದಿಗಳಿಗೆ ಪ್ರಸಾದ ಹಂಚಲಾಯಿತು. 

ಈ ವರ್ಷ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಕಾರ್ಯಕ್ರಮದ ವಿಶೇಷವೇನೆಂದರೆ ಗೋಪಾಲಗೌಡ ಬಡಾವಣೆಯವರಾದ ರಂಗನಾಥ್ ಹಾಗೂ ತಂಡದವರಿಂದ ಭಜನಾ ಕಾರ್ಯಕ್ರಮ ವಿಶೇಷ ಮೆರುಗು ಕೊಡುವುದರ ಮೂಲಕ ಜನರಲ್ಲಿ ಭಕ್ತಿ ಬಾವಕ್ಕೆ ಸಾಕ್ಷಿಯಾಯಿತು. 

ಈ ಒಂದು ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರಫುಲ್ಲ ಚಂದ್ರ. ಹೆಚ್( ಅಧ್ಯಕ್ಷರು ಎಪಿಎಂಸಿ ಆಟೋ ಚಾಲಕರ ಸಂಘ. ಹಾಗೂ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು.) ಹಾಗೂ ಚಂದ್ರಪ್ಪ (ಗೌರವಾಧ್ಯಕ್ಷರು ) ಪ್ರಕಾಶ್ ಟಿ (ಪ್ರಧಾನ ಕಾರ್ಯದರ್ಶಿ) ನಾಗೇಶ್. ಪ್ರವೀಣ್ ಕುಮಾರ್. ಯತೀಶ. ಹೊನ್ನಪ್ಪ. ಪರಶುರಾಮ್. ಕುಮಾರ. ವಸಂತಣ್ಣ (ಮಂಜುನಾಥ ಬಸ್ ಮಾಲೀಕರು ) ಹಾಗೂ ಇನ್ನಿತರ ಸದಸ್ಯರು ಪ್ರಮುಖರು ಪಾಲ್ಗೊಂಡು 

ಈ ಒಂದು ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಒಂದು ದೇವಸ್ಥಾನದ ಅಭಿವೃದ್ಧಿಗೆ ಸ್ಥಳೀಯರ ಸಹಕಾರ ಅತ್ಯಮೂಲ್ಯವಾಗಿದ್ದು ತಾವುಗಳೆಲ್ಲರೂ ಕೈಜೋಡಿಸಬೇಕಾಗಿ ತಮ್ಮಲ್ಲಿ ವಿನಂತಿ.

Kartik festival is a celebration  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close