ಅವಿವಾಹಿತ ಆತ್ಮಹತ್ಯೆ-Unmarried suicide

 SUDDILIVE || RIPPENPETE

ಅವಿವಾಹಿತ ಆತ್ಮಹತ್ಯೆ-Unmarried suicide

Unmarried, Suicide

ಹಲವಾರು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಚನಾಲ ಗ್ರಾಮದಲ್ಲಿ ನಡೆದಿದೆ.

ಕೆಂಚನಾಲ ಗ್ರಾಮದ ಕಿರಣ (26) ಮೃತಪಟ್ಟ ವ್ಯಕ್ತಿಯಾಗಿದ್ದಾನೆ.ಕಿರಣ್ ಮಧ್ಯಪಾನದ ಚಟ ಹೊಂದಿದ್ದು, ಹಲವಾರು ದಿನಗಳಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಕುಟುಂಬದವರು ಹಲವು ಬಾರಿ ಚಿಕಿತ್ಸೆ ಮಾಡಿಸಿದರೂ ನೋವು ಕಡಿಮೆಯಾಗಿರಲಿಲ್ಲ.

ನವೆಂಬರ್ 19ರ ರಾತ್ರಿ ಊಟದ ನಂತರ ಕಿರಣ್ ಔಷಧಿ ಕುಡಿದು ಮಲಗಿದ್ದ. ನವೆಂಬರ್ 20ರ ಬೆಳಗ್ಗೆ ಕುಟುಂಬದವರು ತಮ್ಮ ಕೆಲಸಗಳಲ್ಲಿ ತೊಡಗಿದ್ದಾಗ, ಕಿರಣ ಮನೆಯ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳನ್ನು ಒಳಗಿನಿಂದ ಹಾಕಿಕೊಂಡಿರುವುದು ಗಮನಕ್ಕೆ ಬಂದಿದೆ. ಬಾಗಿಲು ತೆರೆಯದೇ ಇರುವುದರಿಂದ ಕುಟುಂಬಸ್ಥರು ಮನೆಯ ಅಂಚು ತೆಗೆದು ಒಳಗೆ ನೋಡಿದಾಗ, ಕಿರಣ ಕೊಠಡಿಯ ಮೇಲ್ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ.

ಕಿರಣನು ಹೊಟ್ಟೆ ನೋವಿನಿಂದ ಬೇಸತ್ತು “ಸಾಯುವುದು ಒಳ್ಳೆಯದು” ಎಂದು ಪದೇಪದೇ ಹೇಳುತ್ತಿದ್ದನು ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಬೇರೆ ಯಾವುದೇ ವೈಮನಸ್ಯ ಅಥವಾ ಸಮಸ್ಯೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ.ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Unmarried suicide

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close