ನೇತಾಜಿ ಸರ್ಕಲ್ ಬಳಿ ಅದ್ದೂರಿ ಕನ್ನಡ ರಾಜ್ಯೋತ್ಸವ- A grand Kannada Rajyotsava near Netaji Circle

SUDDILIVE || SHIVAMOGGA

ನೇತಾಜಿ ಸರ್ಕಲ್ ಬಳಿ ಅದ್ದೂರಿ ಕನ್ನಡ ರಾಜ್ಯೋತ್ಸವ-A grand Kannada Rajyotsava near Netaji Circle

Kannada, Rajyothsava



ಪ್ರತಿವರ್ಷದಂತೆ ಈ ವರ್ಷವೂ ಸಹ 70ನೇ ಕನ್ನಡ ರಾಜ್ಯೋತ್ಸವವನ್ನು ತಾಯಿ ಶ್ರೀಭುವನೇಶ್ವರಿ ಭಾವಚಿತ್ರದೊಂದಿಗೆ  ಜಾತಿ ಭೇದ ಭಾವ ಎಂಬುದನ್ನು ಮರೆತು ಈ ದಿನ ನೇತಾಜಿ ಸರ್ಕಲ್ ನಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಅನನ್ಯ ಆಂಗ್ಲ ಮಾಧ್ಯಮ ಪ್ರೌಢಶಾಲಾ ಸಂಸ್ಥಾಪಕ ಅಧ್ಯಕ್ಷರಾದ ಗಿರೀಶ್ ಸರ್ ಹಾಗೂ ತುಂಗಾ ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ಗುರುರಾಜ್ ಸರ್( ಸಿ ಪಿ ಐ) ಅವರು ಕೆಲಸದ ಒತ್ತಡ ಇದ್ದರೂ ಸಹ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಗಣ್ಯದೊಂದಿಗೆ ಪ್ರಾರಂಭವಾದ ಈ ಒಂದು ರಾಜ್ಯೋತ್ಸವಕ್ಕೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪ್ರಮುಖರಾದ ಪ್ರಫುಲ್ಲ ಚಂದ್ರ.ಎಚ್ (ಅಧ್ಯಕ್ಷರು ಎಪಿಎಂಸಿ ಆಟೋ ಚಾಲಕರ ಸಂಘ) ಹಾಗೂ ಸ್ಥಳೀಯರಾದ ಫಾರೂಕ್ ( ಸೇವಕರು ಸೇವಕರು ) ಅಮ್ಜದ್ ಖಾನ್ (ಲಾರಿ ಮಾಲೀಕರು) ವಿನೋದ ಅನಿಫಾ.ರಾಘು. ವಾಸು ಜಯರಾಮ (ಸೌಂಡ್ ಸಿಸ್ಟಮ್ ಮಾಲೀಕರು )ವಿನಾಯಕ (ಗುಜರಿ ಅಂಗಡಿ ಮಾಲೀಕರು ) ಹಾಗೂ ಆನಂದ್ ಅಣ್ಣ (ಡಿಎಸ್ಎಸ್ ನಗರ ಸಂಚಾಲಕರು )ಇನ್ನಿತರ ಪ್ರಮುಖರು ಈ ಒಂದು ಕಾರ್ಯಕ್ರಮದಲ್ಲಿ ನೇತಾಜಿ ಆಟೋ ನಿಲ್ದಾಣದ ಚಾಲಕರು  ಭಾಗವಹಿಸಿದರು. 

ಈ ರಾಜ್ಯೋತ್ಸವ ಕ್ಕೆ ಸಂಬಂಧಪಟ್ಟಂತೆ ಗಿರೀಶ್ ಸರ್ ಅವರು ಧ್ವಜಾರೋಹಣ ಮಾಡುವುದರ ಮೂಲಕ ಕನ್ನಡ ಭಾಷೆಗೆ ಸಂಬಂಧಪಟ್ಟಂತೆ ಮಹತ್ವದ ಮಾಹಿತಿಯನ್ನು ಉದ್ದೇಶಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಕನ್ನಡ ರಾಜ್ಯೋತ್ಸವ ನವೆಂಬರ್ ಒಂದಕ್ಕೆ ಸೀಮಿತವಾಗಿರಬಾರದು , ನಂಬರ್ ಒನ್ ಗೆ ಸೀಮಿತವನ್ನಾಗಿಸಬೇಕೆಂದು ಮಾಹಿತಿ ನೀಡಿದರು.  ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹಾಗೂ ಸ್ಥಳೀಯರಿಗೆ ಸಿಹಿ ಹಂಚುವುದರ ಮೂಲಕ ಅದ್ದೂರಿ  ಆಚರಣೆ ಮಾಡಲಾಯಿತು.

A grand Kannada Rajyotsava near Netaji Circle

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close