ಕೋಟೆಗಂಗೂರಿನ ಸಲಗ ಕಳುಹಿಸಿದ ಹುಡುಗರಿಂದ ಯುವಕನ ಮೇಲೆ ಹಲ್ಲೆ-A young man was attacked by boys sent by Kotegangur salaga

 SUDDILIVE || SHIVAMOGGA

ಕೋಟೆಗಂಗೂರಿನ ಸಲಗ ಕಳುಹಿಸಿದ ಹುಡುಗರಿಂದ ಯುವಕನ ಮೇಲೆ ಹಲ್ಲೆ-A young man was attacked by boys sent by Kotegangur salaga

Sakaga, kotegangoor

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಬಳಿ 22 ವರ್ಷದ ಯುವಕನ ಮೇಲೆ ಹಲ್ಲೆ ನಡೆದಿದೆ. ಜಗಳ ಬಿಡಿಸಲು ಹೋದ ಯುವಕನನ್ನ ತಪ್ಪಾಗಿತಿಳಿದು ಆತನ ಮೇಲೆ ಇಬ್ಬರು ಹಲ್ಲೆ ನಡೆಸಿದ್ದು ಈ ಹಲ್ಲೆಗೆ ಹುಡುಗರನ್ನ ಕಳುಹಿಸಿಕೊಟ್ಟ ಕೋಟೆಗಂಗೂರಿನ ಸಲಗ (ಗಗನ್) ಮೇಲು ಆರೋಪಿಸಲಾಗಿದೆ. 

ಸಹ್ಯಾದ್ರಿ ಕಾಲೇಜಿನ ಬಳಿ 22 ವರ್ಷದ ಯುವಕ ಚಹಕುಡಿಯುವಾಗ ಕೋಟೆಗಂಗೂರಿನ ಸಲಗ ಕರೆ ಮಾಡಿ ಕೌಶಿ ಮತ್ತು ಲಿಖತ್ ನಡುವೆ ನಡೆದ ಗಲಾಟೆ ಬಗ್ಗೆ ವಿಚಾರಿಸಿದ್ದಾನೆ. ನಂತರ ಬೈಕ್ ನಿಂದ ಹೊರಡುವಾಗ ಗೋಪಾಳದ ಮಂಜು ಚೇತು ಅಡ್ಡಹಾಕಿ ತಡೆದಿದ್ದಾರೆ. 

ಕೌಶಿಕ್ ಗೆ ಹೊಡೆದಿದ್ದೇಕೆ ಎಂದು ಯುವಕನನ್ನ ಪ್ರಶ್ನಿಸಿದ್ದಾರೆ. ಕೌಶಿಕ್ ಗೆ ಹೊಡೆದಿಲ್ಲ. ಜಗಳ ಬಿಡಿಸಿದ್ದು ಎಂದು ಯುವಕ ಹೇಳಿದರೂ ಆತನ ಮೇಲೆ ಚಾಕುವಿನಂತಹ ವಸ್ತುವಿನಿಂದ ಹಲ್ಲೆ ನಡೆಸಲಾಗಿದೆ. ನಂತರ ಆತನ ಮುಖಕ್ಕೆ ಹಲ್ಲೆ ನಡೆಸಲಾಗಿದೆ. ಅಲ್ಲಿಗೆ ಬಂದ ಸ್ನೇಹಿತ ಲಿಖಿತ್ ನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಆತ ತಪ್ಪಿಸಿಕೊಂಡಿದ್ದಾನೆ. 

ಓತಿಘಟ್ಟದ ಸಾಗರ್ ಬಂದು ಜಗಳ ಬಿಡಿಸಿದ್ದಾನೆ. ಈ ವೇಳೆ ಜನರು ಬರುವುದನ್ನ ಗೋಪಾಳದ ಮಂಜ ಮತ್ತು ಚೇತು ಬೆದರಿಕೆ ಹಾಕಿ ಹೋಗಿದ್ದಾರೆ. 22 ವರ್ಷದ ಯುವಕ ಮೆಗ್ಗಾನ್ ಗೆ ದಾಖಲಾಗಿದ್ದಾನೆ. ಗೋಪಾಳದ ಮಂಜ, ಚೇತು ಮತ್ತು ಕೋಟೆಗಂಗೂರಿನ ಸಲಗ (ಗಗನ್)  ನ ಮೇಲೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವಕ ಲಕ್ಕಿನ್ ಕೊಪ್ಪದ ನಿವಾಸಿಯಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಇಂಟರ್ವ್ಯೂ ಗೆ ಹೋಗಬೇಕಿದ್ದ ಯುವಕ ರಿಪ್ಪನ್ ಪೇಟೆಗೆ ಬರಲು ಹೇಳಲಾಗಿತ್ತು. 

ರಿಪ್ಪನ್ ಪೇಟೆಗೆ ಹೋಗಲು ನಿರಾಕರಿಸಿದ ಯುವಕನಿಗೆ ಸ್ನೇಹಿತ ಲಿಖಿತ್ ಮತ್ತೂರು ಮೋಟಾಳ್ ಚೌಡಮ್ಮ ದೇವಸ್ಥಾನದ ಬಳಿ ಬರಲು ಹೇಳಿದ್ದರಿಂದ ಅಲ್ಲಿಗೆ ಹೋದಾಗ ಕೌಶಿ ಮತ್ತು ಲಿಖಿತ್ ಗೆ ಮಾತಿಗೆ ಮಾತು ಜೋರಾಗಿ ನಡೆಯುತ್ತಿತ್ತು. ಇದನ್ನ ಬಿಡಿಸಿ ಸಹ್ಯಾದ್ರಿ ಕಾಲೇಜಿನ ಬಳಿ ಟೀ ಕುಡಿಯುವಾಗ ಈ ಘಟನೆ ನಡೆದಿದೆ. 

A young man was attacked by boys sent by Kotegangur salaga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close