ಆತಂಕ ಮೂಡಿಸಿದ ಇಬ್ಬರ ಸಾವು, ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳನ್ನ ಕರೆಯಿಸಿದ ಗ್ರಾಮಸ್ಥರು-The deaths of two people caused concern, and villagers called health officials to the village

SUDDILIVE || HOLEHONNURU

ಆತಂಕ ಮೂಡಿಸಿದ ಇಬ್ಬರ ಸಾವು, ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳನ್ನ ಕರೆಯಿಸಿದ ಗ್ರಾಮಸ್ಥರು-The deaths of two people caused concern, and villagers called health officials to the village.

Health, villegers

ಸಮೀಪದ ಆದ್ರಿಹಳ್ಳಿಯಲ್ಲಿ ಶನಿವಾರ ಅನುಮಾನಸ್ಪದದಿಂದ ಇಬ್ಬರು ವೃತ್ತಪಟ್ಟಿದ್ದು, ಅವರ ಸಾವಿನ ಕುರಿತು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನ ಕರೆಯಿಸಿರುವ ಘಟನೆ ನಡೆದಿದೆ. 

ಭದ್ರಾವತಿ ತಾಲೂಕಿನ ಆದ್ರಿಹಳ್ಳಿಯಲ್ಲಿ ಚಿಕನ್‌ಗುನ್ಯದಿಂದ ಬಳಲುತ್ತಿದ ಭೋವಿ ಕಾಲೋನಿ ನಿವಾಸಿ ಆಂಜನಪ್ಪ (52) ಹಾಗೂ ಎ.ಕೆ ಕಾಲೋನಿ ನಿವಾಸಿ ರವಿ (46) ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆ ಅರ್ಧ ಗಂಟೆ ಅಂತರದಲ್ಲಿ ವ್ಯಕ್ತಿಗಳಬ್ಬರ ಸಾವಿನಿಂದ ಗ್ರಾಮದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು ಗ್ರಾಮಸ್ಥರು ಆರೋಗ್ಯ ಇಲಾಖೆಯ ವಿರುದ್ದ ಆರೋಪ ಮಾಡಿ ಚಿಕನ್‌ಗುನ್ಯದಿಂದಾಗಿ ಸಾವುಗಳಾಗಿವೆ ಎಂದು ಆರೋಪಿಸಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ಕೂಡಲೆ ಗ್ರಾಮಕ್ಕೆ ಬೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಅಶೋಕ್ ನೆತೃತ್ವದ ವೈದ್ಯಾಧಿಕಾರಿಗಳ ತಂಡ ಗ್ರಾಮಸ್ಥರೊಂದಿಗೆ ಮಾತನಾಡಿ ಚಿಕನ್‌ಗುನ್ಯ ಮಾರಾಣಾಂತಿಕ ಮತ್ತು ಸಾಂಕ್ರಮಿಕ ಕಾಯಿಲೆ ಅಲ್ಲ ಎಂಬುದುದನ್ನು ದೃಡಪಡಿಸಿದರು. ಚಿಕನ್ ಗುನ್ಯ ಪೀಡಿತರಿಗೆ ಕೀಲು ನೋವು, ಸುಸ್ತು ಸೇರಿದಂತೆ ಮಣ್ಣಿಕಟ್ಟುಗಳಲ್ಲಿ ಕೆಲ ದಿನಗಳ ವರೆಗೆ ನೋವು ಹಾಗೂ ಸ್ನಾಯು ಸೇಳೆತಗಳಿರುತ್ತವೆ. ಗ್ರಾಮದಲ್ಲಿ ಈಗಾಗಲೆ ಲಾರ್ವ ಸರ್ವೆ ಸೇರಿದಂತೆ ರೋಗ ಹತೋಟಿಗೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. 

ಗ್ರಾಮದಲ್ಲಿ ಚಿಕನ್‌ಗುನ್ಯ ಹತೋಟಿಯಲ್ಲಿದೆ ಯಾರೊಬ್ಬರು ಆತಂಕಕ್ಕೆ ಒಳಗಾಗಬಾರದು. ಸಾಮಾನ್ಯ ಶೀತ ಜ್ವರವನ್ನು ನಿರ್ಲಕ್ಷ ಮಾಡದೆ ಕೂಡಲೆ ಆಸ್ಪತ್ರೆಗೆ ಬೇಟಿ ನೀಡಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಗ್ರಾಮಸ್ಥರಿಗೆ ಕಾಯಿಲೆ ಮೇಲಿನ ಭಯವನ್ನು ಹೋಗಲಾಡಿಸಬೇಕಿದೆ ಗ್ರಾಮಸ್ಥರ ಬೇಡಿಕೆಯಂತೆ ಸದ್ಯದಲ್ಲೆ ಉಚಿತ ಆರೋಗ್ಯ ಶಿಭಿರ ಆಯೋಜಿಸುವುದು ಸೇರಿದಂತೆ ರೋಗ ಪೀಡಿತರ ಶುಶೃಷೆಗಾಗಿ ವಾರದಲ್ಲಿ ಕೆಲದಿನವರೆಗೆ ವೈದ್ಯಾಧಿಕಾರಿಗಳ ತಂಡ ನಿಯಮಿತಾಗಿ ಗ್ರಾಮಕ್ಕೆ ಬೇಟಿ ನೀಡಿ ಔಷದೋಪಚಾರ ಸೇರಿದಂತೆ ರೋಗದ ಹತೋಟಿಗೆ ಬೇಕಾದ ಕ್ರಮಗಳನ್ನು ಜರುಗಿಸುವಂತೆ ಸ್ಥಳದಲ್ಲಿದ ವೈದ್ಯ ಡಾ||ಜಗದೀಶ್ ಪಾಟೀಲ್‌ಗೆ ತಿಳಿಸಿದರು.

The deaths of two people caused concern, and villagers called health officials to the village.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close