ಸಂಗೊಳ್ಳಿ ರಾಯಣ್ಣನ ವೃತ್ತದ ಬಳಿ ಕರಾಮತ್ ತೋರಿದ ಖಾಸಗಿ ಬಸ್, ಓರ್ವ ಸಾವು, ಮೂರು ಬೈಕ್ ಜಕಂ-Private bus overturns near Sangolli Rayanna Circle, one dead, three bikes damaged

 SUDDILIVE || SHIVAMOGGA

ಸಂಗೊಳ್ಳಿ ರಾಯಣ್ಣನ ವೃತ್ತದ ಬಳಿ ಕರಾಮತ್ ತೋರಿದ ಖಾಸಗಿ ಬಸ್, ಓರ್ವ ಸಾವು, ಮೂರು ಬೈಕ್ ಜಕಂ-Private bus overturns near Sangolli Rayanna Circle, one dead, three bikes damaged

Sangollirayanna, circle

ರಾಗಿಗುಡ್ಡದಿಂದ ಬಂದ ಸಿಟಿ ಬಸ್ ವೊಂದು ಸಂಗೊಳ್ಳಿ ರಾಯಣ್ಣನ ವೃತ್ತದ ಬಳಿ ಪಾರ್ಕ್ ಮಾಡಲಾಗಿದ್ದ ಮೂರು ಬೈಕ್ ಗೆ ಡಿಕ್ಕಿ ಹೊಡೆದಿದ್ದು ಅಲ್ಲೆ ಅಕ್ಕಪಕ್ಕದಲ್ಲಿ ನಿಂತಿದ್ದ ಜನರ ಮೇಲೂ ಹರಿದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ಇಂದು ರಾತ್ರಿ ಸುಮಾರು 7-30 ರಿಂದ 8 ಗಂಟೆಯ ಸಮಯದಲ್ಲಿ ನಡೆದಿದೆ. 

ರಾಗಿಗುಡ್ಡದಿಂದ ರೈಲ್ವೆ ಓವರ್ ಬ್ರಿಡ್ಜ್ ನ ಮೂಲಕ ಸಂಗೊಳ್ಳಿ ರಾಯಣ್ಣನ ವೃತ್ತಕ್ಕೆ ಬರುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಡಿಸಿ ಆದೇಶವಿದ್ದರೂ ಈ ರಸ್ತೆಯಲ್ಲಿ ಇನ್ನೂ ವಾಹನಗಳ ಸಂಚಾರ ಮುಂದುವರೆದಿದೆ. ಈ ಕುರಿತು ಸುದ್ದಿಲೈವ್ ಈ ಹಿಂದೆಯೇ ಡಿಸಿ ಆದೇಶಕ್ಕೆ ಕಿಮ್ಮತ್ತಿಲ್ಲ ಎಂದು ಸುದ್ದಿಮಾಡಲಾಗಿತ್ತು. 


ಇಂದು ರಾತ್ರಿ ರಾಗಿಗುಡ್ಡದ ಮೂಲಕ ಬಂದ ನಗರ ಸಾರಿಗೆ  ವೀರಭದ್ರೇಶ್ವರ ಖಾಸಗಿ ಬಸ್ ಚಾಲಕನ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸಂಗೊಳ್ಳಿ ರಾಯಣ್ಣನ ವೃತ್ತದ ಬಳಿ ಪಾರ್ಕ್ ಮಾಡಲಾದ ಬೈಕ್ ಗಳಿಗೆ ಗುದ್ದಿದ್ದಾನೆ. ಮೂರು ಬೈಕ್ ಗಳು ಜಕಂ ಆಗಿವೆ.  ಪಾರ್ಕಿಂಗ್ ಸ್ಥಳದಲ್ಲಿಯೇ ನಿಂತಿದ್ದ ಮೊಹಮದ್ ಅಹಮದ್ ಎಂಬ 31 ವರ್ಷದ ರಾಗಿಗುಡ್ಡದ ನಿವಾಸಿ ತೀವ್ರಗಾಯಗೊಂಡಿದ್ದರು. 

ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಹಮದ್ ಸಾವು ಕಂಡಿರುವುದಾಗಿ ತಿಳಿದುಬಂದಿದೆ. ಇನ್ನು ಸುರೇಶ್ ರಾವ್ (50) ಎಂಬ ಬಿಹಾರಿಯೊಬ್ಬರಿಗೆ ಗಾಯವಾಗಿದ್ದು ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಬಾಪೂಜಿ ನಗರದ ನಿವಾಸಿ ರೆಹಮಾನ್ ಎಂಬ 40 ವರ್ಷದ ವ್ಯಕ್ತಿಗೆ ಗಾಯಗಳಾಗಿದ್ದು, ಅವರನ್ನ ಮ್ಯಾಕ್ಸ್  ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. 

ಅಪಘಾತ ಪಡಿಸಿದ ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ. ಬಸ್ ನ್ನ‌ ಪೂರ್ವ ಸಂಚಾರಿ ಪೊಲೀಸ್ ಠಾಣೆಗೆ ತಂದಿರಿಸಲಾಗಿದೆ. ಪ್ರಕರಣ ಠಾಣೆಯಲ್ಲಿ ದೂರು ದಾಖಲಾಗಿದೆ. ಅಹಮದ್ ಸಹ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ಅವರನ್ನ ಕಳೆದುಕೊಂಡ ಕುಂಟುಂಬ ಕಣ್ಣೀರಿನಲ್ಲಿ ಮುಳುಗಿದೆ. 

Private bus overturns near Sangolli Rayanna Circle, one dead, three bikes damaged

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close