SUDDILIVE || SHIVAMOGGA
ಆಯನೂರಿನಲ್ಲಿ ಅಂಗನವಾಡಿಯ ಹೆಂಚು ತೆಗೆದು ಹಾವಳಿಯಿಟ್ಟ ಕುಡುಕರು-Drunkards vandalize Anganwadi by removing tiles in Ayanuru
ಅಂಗನವಾಡಿ ಹಾಗೂ ಮಹಿಳಾ ಒಕ್ಕೂಟದ ಕೊಠಡಿಗಳ ಹೆಂಚನ್ನು ತೆಗೆದು ಒಳನುಗ್ಗಿರುವ ಕುಡುಕರು ಪಾನಗೋಷ್ಠಿ ಮಾಡಿ, ಸಂಗ್ರಹಿಸಿದ ಆಹಾರ ಸಾಮಗ್ರಿ ಹಾಳು ಮಾಡಿರುವ ಘಟನೆ ವರದಿಯಾಗಿದೆ.
ಕುಂಸಿಯ ಅಂಗನವಾಡಿ ಕೊಠಡಿಯ ಒಳಗೆ ಇಳಿದಿರುವ ದುಷ್ಕರ್ಮಿಗಳು ಸರ್ಕಾರದಿಂದ ಅಂಗನವಾಡಿಗೆ ಕೊಟ್ಟಿದ್ದ ಆಹಾರ ಧಾನ್ಯಗಳನ್ನು ಹಾಳು ಮಾಡಿದ್ದಾರೆ. ಅಲ್ಲದೇ, ಟೇಬಲ್ ಸುತ್ತಲೂ ಚೇರ್ ಹಾಕಿಕೊಂಡು ಕುಳಿತು ಮದ್ಯಪಾನ ಮಾಡಿದ್ದಾರೆ. ಚೇರಿನ ಮೇಲೆ ಟವೆಲ್, ಮದ್ಯದ ಕವರ್ ಸಿಕ್ಕಿದೆ.
ಎರಡು ಟ್ರೇ ಮೊಟ್ಟೆ ಬೇಯಿಸಿ ತಿಂದಿರುವ ದುಷ್ಕರ್ಮಿಗಳು, ಆಹಾರ ಪದಾರ್ಥಗಳನ್ನು ತಿಂದು ಹಾಳು ಮಾಡಿದ್ದಾರೆ. ಅಡುಗೆ ಎಣ್ಣೆಯ ಕವರ್ ಕಿತ್ತು ಚೆಲ್ಲಿದ್ದಾರೆ. ಈ ಬಗ್ಗೆ ಅಂಗನವಾಡಿ ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಕುಂಸಿ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Drunkards vandalize Anganwadi by removing tiles in Ayanuru
