ಕರಾವಳಿಯಲ್ಲಿ ಬಳಸಿ ಗುಜರಿಗೆ ಹಾಕಿದ ಬಸ್ ಗಳು ನಗರದಲ್ಲಿ ಸಿಟಿ ಬಸ್ಸಾಗಿದೆ-SDPI ಆಕ್ರೋಶ-Abandoned Buses used in the coastal area are now city buses in Shivamogga - SDPI outraged

SUDDILIVE || SHIVAMOGGA

ಕರಾವಳಿಯಲ್ಲಿ ಬಳಸಿ ಗುಜರಿಗೆ ಹಾಕಿದ ಬಸ್ ಗಳು ನಗರದಲ್ಲಿ ಸಿಟಿ ಬಸ್ಸಾಗಿದೆ-SDPI ಆಕ್ರೋಶ-Abandoned Buses used in the coastal area  are now city buses in Shivamogga - SDPI outraged

City, bus


ಶಿವಮೊಗ್ಗದಲ್ಲಿ ನಿನ್ನೆ ಸಂಜೆ ಸಿಟಿ ಬಸ್ ವೊಂದು ಸಂಗೊಳ್ಳಿ ರಾಯಣ್ಣನ ವೃತ್ತದ ಬಳಿ ನಡೆದ ಅಪಘಾತದಲ್ಲಿ ಯುವಕನೋರ್ವ ಬಲಿ ಪಡೆದಿದ್ದು ಈ ಘಟನೆಗೆ ಎಸ್ ಡಿಪಿಐ ಆಕ್ರೋಶ ವ್ಯಕ್ತಪಡಿಸಿದೆ. ಸಿಟಿ ಬಸ್ ಗಳ ಹಾವಳಿಗೆ ಕಡಿವಾಣ ಹಾಕುವಂತೆ ಸಂಘಟನೆಯ ಇಮ್ರಾನ್ ಆಗ್ರಹಿಸಿದ್ದಾರೆ. 

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು ಸಿಟಿ ಬಸ್ ಹಾವಳಿಯಿಂದಾಗಿ ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ರಸ್ತೆದಾಟುವಾಗ, ರಸ್ತೆ ಬಳಿ ನಿಂತಿರುವಾಗ ಸಿಟಿ ಬಸ್ ನವರು ಯಮಸ್ವರೂಪಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಿಟಿ ಬಸ್ ನವರು ರಸ್ತೆ ನಿಯಮಗಳನ್ನ ಪಾಲಿಸುತ್ತಿಲ್ಲ. ಸಂಚಾರಿ ಪೊಲೀಸರು ಇವರನ್ನ‌  ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಇದರ ಪರಿಣಾಮ ಸಿಟಿಬಸ್ ಗಳ ಹಾವಳಿ ಹೆಚ್ಚಾಗಿದೆ. ಉಡುಪಿ, ಮಂಗಳೂರಿನಲ್ಲಿ ಬಳಸಿ ಗುಜರಿಗೆ ಹಾಕುವ ಬಸ್ ಗಳನ್ನ ತಂದು ನಗರದಲ್ಲಿ ಚಲಾಯಿಸಲಾಗುತ್ತಿದೆ. ಇವುಗಳ ಸ್ಥಿತಿಗಳು ಆರ್ ಟಿಒ ವಾಹನ ಕಾಯ್ದೆಗಳ ಅಡಿಯಲ್ಲಿ ಇರುವುದಿಲ್ಲ. 

ದ್ವಿಚಕ್ರವಾಹನಗಳ ಸವಾರರು ಹೆಲ್ಮೆಟ್ ಧರಿಸದೆ, ವಾಹನ ಇನ್ಸುರೆನ್ಸ್ ಇಲ್ಲವೆಂದರೆ ಎದ್ದುಬಿದ್ದು ದಂಡ ವಸೂಲಿ ಮಾಡುವ ಪೊಲೀಸ್ ಇಲಾಖೆ ಇಂತಹ ಗುಜರಿಗೆ ಹೋಗುವ ಬಸ್ ಗಳನ್ನ ತಡೆದು ವಾಹನ ಕಾಯ್ದೆಗಳ ಅಡಿ ಬಸ್ ಇದೆಯೋ ಇಲ್ಲವೋ ಎಂಬುದನ್ನ ಪರಿಶೀಲಿಸುವುದಿಲ್ಲ ಏಕೆ ಎಂದು ಇಮ್ರಾನ್ ಪ್ರಶ್ನಿಸಿದ್ದಾರೆ. 

ಅಪಘಾತದಲ್ಲಿ ಮೃತರಾದ ನವವಿವಾಹಿತ ಅಹಮದ್ ಕುಟುಂಬಕ್ಕೆ ಬಸ್ ನವರಿಂದಲೇ ಸೂಕ್ತ ಪರಿಹಾರ ನೀಡಬೇಕು.‌ಸುವ್ಯವಸ್ಥೆಯಲ್ಲಿ ಇಲ್ಲದ ಸಿಟಿಬಸ್ ಗಳನ್ನ ರಸ್ತೆ ಮೇಲೆ ಚಲಿಸಲು ಬಿಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಇಮ್ರಾನ್ ಆಗ್ರಹಿಸಿದ್ದಾರೆ. ಮೃತರ ಕುಟುಂಬಕ್ಕೆ ದೇವರು ದುಖ ಭರಿಸುವ ಶಕ್ತಿನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು. 

Newlyweds killed in city bus in road accident - SDPI outraged

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close