ಊರು ಬಿಟ್ಟ ಟ್ರಾವೆಲ್ ಸ್ಪಾಟ್ ಹಾಲಿಡೇಸ್- Travel spot holidays locked down in shivamogga

 SUDDILIVE || SHIVAMOGGA

ಊರು ಬಿಟ್ಟ ಟ್ರಾವೆಲ್ ಸ್ಪಾಟ್ ಹಾಲಿಡೇಸ್- Travel spot holidays locked down in shivamogga

Holiday, travels

ಹೊಸಮನೆಯ ಜಂಬಣ್ಣ ರೈಸ್ ಮಿಲ್ ಕಾಂಪೌಂಡ್ ನಲ್ಲಿದ್ದ ಟ್ರಾವೆಲ್ ಸ್ಪಾಟ್ ಹಾಲಿಡೇಸ್ ನ ಕುಮಾರ್ ವಿದೇಶಕ್ಕೆ ಕಡಿಮೆ ವೆಚ್ಚದಲ್ಲಿ ಕಳುಹಿಸುವುದಾಗಿ ನಂಬಿಸಿ ಊರು ಬಿಟ್ಟು ಹೋಗಿರುವ ಘಟನೆ ವರದಿಯಾಗಿದೆ. 

ಟ್ರಾವೆಲ್ ಸ್ಪಾಟ್ ಹಾಲಿಡೇಸ್ ನ್ನ ಕಳೆದ ಒಂದು ವರ್ಷದಿಂದ ಜಂಬಣ್ಣ ರೈಸ್ ಮಿಲ್ ಬಳಿ ಆರಂಭವಾಗಿತ್ತು. 9 ತಿಂಗಳ ಹಿಂದೆ ಪರಿಚಯವಾದ ಕುಮಾರ್ ( ಶ್ರೀನಿವಾಸ ಶರದ್ ಕುಲಕರ್ಣಿ ಯಾನೆ ರಾಹುಲ್ ಉರ್ಫ್ ಕುಮಾರ್) ನಮ್ಮ ಕಡೆಯಿಂದ ಬಂದರೆ ಕಡಿಮೆ ದರದಲ್ಲಿ ವಿದೇಶಕ್ಕೆ ಕಳುಹಿಸುವುದಾಗಿ ಪ್ರಭುದಾಸ್ ಎಂಬುವರಿಗೆ ನಂಬಿಸಿದ್ದರು.

ಒಂದು ದಿನ ದಾಸ್ ರವರನ್ನ ಕೆನಾಡದಲ್ಲಿ ಕೆಲಸದ ಬಗ್ಗೆ ಮಾಹಿತಿ ಕೊಡಿಸುವುದಾಗಿ ನಂಬಿಸಿ ಕುಮಾರ್ ಟ್ರಾವೆಲ್ಸ್ ಕಚೇರಿಗೆ ಕರೆದುಕೊಂಡು ಬಂದಿದ್ದರು. ಅಲ್ಲಿ ಮೆಸೇಜರ್ ಮೇಘಾರವರ ಮೊಬೈಲ್ ನಂಬರ್ ಕೊಟ್ಟು ಸಂಬಳದ ಬಗ್ಗೆ ಪ್ರಭುದಾಸ್ ಗೆ ಮಾಹಿತಿ ಕೊಡಿಸಿದ್ದರು. ಅದರ ಜೊತೆಗೆ ಬೆಂಗಳೂರಿನಲ್ಲಿ ಕಿರಣ್ ಎಂಬುವರ ಪರಿಚಯವನ್ನೂ ಕುಮಾರ್ ಮಾಡಿಸಿಕೊಟ್ಟು, ಕಷ್ಟಪಟ್ಟು ಓದಿ ಕೆಲಸ ಹುಡುಕುತ್ತಿರುವ ಬಡವರು ಕೆನಾಡಾದಲ್ಲಿ ಕೆಲಸ ಮಾಡಲು ಬಯಸಿದರೆ ಅವರನ್ನ ಕಡಿಮೆದರದಲ್ಲಿ ಕೆನೆಡಾಗೆ ಕಳುಹಿಸುವುದಾಗಿ ಭರವಸೆ ನೀಡಿದ್ದರು. 

ಹಾಗಾಗಿ ದಾಸ್ ತನಗೆ ಪರಿಚಯರಿದ್ದ ಸಲೀಂರವರ ಮಾವ ಸಾದಿಕ್ ಮತ್ತು ರಂಜಿತ್ ರನ್ನ ಪರಿಚಯಿಸಿಕೊಟ್ಟಿದ್ದರು. ಇವರಿಬ್ವರಿಂದ  ತಲಾ 5 ಲಕ್ಷ ರೂ. ಹಣ ಪಡೆದು ಮೂರು ತಿಂಗಳಲ್ಲಿ ಕೆನಾಡಾಗೆ ಕಳುಹಿಸುವುದಾಗಿ ಟ್ರಾವೆಲ್ಸ್ ನ ಕುಮಾರ್ ಭರವಸೆ ನೀಡಿದ್ದರು. ನಂತರ ಕ್ಯಾತೆ ತೆಗೆದ ಕುಮಾರ್ 25 ಜನರಿಗೆ ಕೆನೆಡಾಗೆ ಕಳುಹಿಸಲು ಹಣ ಸಾಕಾಗುತ್ತಿಲ್ಲ‌ ನೀವುಗಳು 15 ಲಕ್ಷ ರೂ. ಕೊಟ್ಟರೆ ಎಲ್ಲರ ಹಣ ಬಂದ ಮೇಲೆ ವಾಪಾಸ್ ಕೊಡುವುದಾಗಿ ಭರವಸೆ ನೀಡಿದ್ದರು.

ಭರವಸೆಯನ್ನೇ ನಂಬಿ ದಾಸ್ 10.5 ಲಕ್ಷ ರೂ.ಗಳನ್ನ ಹೊಂದಿಸಿ ಕುಮಾರ್ ಗೆ ಹೆಚ್ಚುವರಿ ಹಣ ಕೊಟ್ಟಿದ್ದರು. ಇದಕ್ಕಾಗಿ ಖಾಲಿ ಚೆಕ್ ನ್ನ ಪಡೆಯಲಾಗಿತ್ತು. ಇದಕ್ಕೆ 2 ತಿಂಗಳ ನಂತರೂ ಕುಮಾರ್ ಕಡೆಯಿಂದ ರೆಸ್ಪಾನ್ಸ್ ಬರಲಿಲ್ಲ.  ನ.8 ರಂದು ಬೆಂಗಳೂರಿನಲ್ಲಿ ಮೀಟಿಂಗ್ ಇದೆ ನಾನು ಹೋಗಿ ಬರುವುದಾಗಿ ಹೇಳಿ ಹೋದ ಕುಮಾರ್ ನಂತರ ದಾಸ್ ನ ಸಂಪರ್ಕಕ್ಕೆ ಬರಲಿಲ್ಲ. ಟ್ರಾವೆಲ್ ಸ್ಪಾಟ್ ಹಾಲಿಡೇಸ್ ನ ಕುಮಾರ್ ಊರುಬಿಟ್ಟುಹೋಗಿದ್ದಾರೆ. ಪರಿಶೀಲನೆ ನಡೆಸಿ ನ್ಯಾಯಕೊಡಿಸುವಂತೆ  ದಾಸ್ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

Travel spot holidays locked in shivamogga  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close