ಇನ್ಮುಂದೆ ಲಾರಿ ಲೋಡಿಂಗ್ ಗೆ ಕೂಲಿ ಇಲ್ಲ- No more lorry loading fees

 SUDDILIVE || SHIVAMOGGA

ಇನ್ಮುಂದೆ ಲಾರಿ ಲೋಡಿಂಗ್ ಗೆ ಕೂಲಿ ಇಲ್ಲ-  No more lorry loading fees   

Lorry, fees

ಲಾರಿ ಮಾಲೀಕರು ದುಸ್ಸಾಹಸದಲ್ಲಿದ್ದಾರೆ. ಮೊದಲು ಡೀಸೇಲ್ ಸಮಸ್ಯೆಯಿರುತ್ತಿತ್ತು. ಈಗ ಚಾಲಕರ ಮತ್ತು ಕ್ಲೀನರ್ ಸಮಸ್ಯೆ, ಟೋಲ್ ಟ್ಯಾಕ್ಸ್ಗಳು ಹೈರಾಣು ಮಾಡಿದೆ ಎಂದು ಜಿಲ್ಲಾ ಲಾರಿ ಮಾಲೀಕರ ಸಂಘ ಆರೋಪಿಸಿದೆ.

ಸುದ್ದಿಗೋಷ್ಠಿ ನಡೆಸಿದ ಗೌರವ ಅಧ್ಯಕ್ಷ ಎಸ್ ಎಸ್ ಜ್ಯೋತಿ ಪ್ರಕಾಶ್, ಟೋಲ್ ಬಗ್ಗೆ ದೇಶಾಧ್ಯಂತ ಪ್ರಯಿಭಟಿಸಲಾಗುತ್ತಿದೆ. ಶಿವಮೊಗ್ಗದಿಂದ ಬಾಂಬೆಗೆ ಹೋಗಿಬಂದರೆ 5000 ಟೋಲ್ ತೆರಿಗೆ ಕಟ್ಟಬೇಕಿದೆ. ಲಾರಿಗಳು ಸಾಗಣೆ ಮಾಡುವ ವೇಳೆ ಜೋಳ, ರಾಗಿ ಭತ್ತ, ಚೀಲಗಳನ್ನ ಲೋಡಿಂಗ್ ಮಾಡುವ ಸಂಧರ್ಭದಲ್ಲಿ ಲಾರಿ ಮಾಲೀಕರು ಯಾವುದೇ ರೀತಿಯ ಲೋಡಿಂಗ್ ಮಾಮೂಲು ಕೊಡುವುದಿಲ್ಲ ಎಂದು ದೂರಿದರು. 

ಎಂದಿನಂತೆ ಹಲಾಮರು ಲಾರಿಯಲ್ಲಿ ಮೂಟೆ ಜೋಡಿಸಿ, ಟರ್ಪಲ್ ಹಗ್ಗ ಹಾಕಿಕೊಡುವುದಕ್ಕೆ ಜಿಲ್ಲಾ ಲಾರಿ ಮಾಲೀಕರ ಸಂಘವು ನಿರ್ಣಯ ತೆಗೆದುಕೊಂಡಿದೆ. 6 ಚಕ್ರದ ವಾಹನಗಳಿಗೆ 400 ರೂ. 10 ಚಕ್ರದ ವಾಹನಗಳಿಗೆ 600 ರೂ. 12 ಚಕ್ರದ ವಾಹನಗಳಿಗೆ 800 ರೂ. 14 ಚಕ್ರದ ವಾಹನಗಳಿಗೆ 1000 ರೂ. 16 ಚಕ್ರ ವಾಹನಗಳಿಗೆ ರೂ.1200 ರೂ. ನಿಗದಿ ಪಡಿಸಲಾಗಿದೆ. ಇದನ್ನ ನ.21 ರಿಂದ ದರ ಜಾರಿಯಾಗಲಿದೆ. 

No more lorry loading fees   


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close