ad

ಕೃಷಿ ಲಾಭದಾಯಕವೇ ಆದರೆ ಮೋಜಿಗೆ ಬಳಕೆ ಮಾಡಲು ಆಗೊಲ್ಲ-ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ- Agriculture is profitable but not for fun - Religious-Dr. Virendra Hegde

 SUDDILIVE || SHIVAMOGGA

ಕೃಷಿ ಲಾಭದಾಯಕವೇ ಆದರೆ ಮೋಜಿಗೆ ಬಳಕೆ ಮಾಡಲು ಆಗೊಲ್ಲ-ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ-Agriculture is profitable but not for fun - Religious-Dr. Virendra Hegde

Agriculture, profit


ಲಾಭದಾಯಕ ಕ್ಷೇತ್ರವಾಗಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಕೃಷಿ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿದೆ. ಆದರೆ ಶೋಕಿ ಅಥವಾ ಮೋಜು-ಮಸ್ತಿ ಮಾಡುವುದಕ್ಕೆ ಕೃಷಿ ಸೀಮಿತವಾಗಬಾರದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಹಕಾರದಲ್ಲಿ ಶನಿವಾರ ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಆಳುಗಳಿಗೆ ಕಾಯುವ ಬದಲು ರೈತರು ಆಧುನಿಕ ಯುವಗದಲ್ಲಿ ಯಂತ್ರಗಳ ಮೂಲಕ ಕೃಷಿ ಮಾಡಿದಾಗ ಲಾಭವಿದೆ. ಧರ್ಮಸ್ಥಳದಲ್ಲಿ ಅಡಿಕೆಯನ್ನ‌ ಯಂತ್ರದಲ್ಲಿ ಸಿಪ್ಪೆತೆಗೆಯುವುದನ್ನ ಮೊದಲಬಾರಿಗೆ ಪ್ರಯೋಗಿಸಲಾಗಿತ್ತು. ಈಗ ಅಡಿಕೆ ಸಿಪ್ಪ ತೆಗೆಯುವ ಯಂತ್ರ ಬಹುತೇಕ ಕಡೆ ಬಳಕೆಯಾಗುತ್ತಿದೆ.  ಕೋಕಂ ಮತ್ತು ಕಾಳು‌ಮೆಣಸು ಸಹ ಲಾಭದಾಯಕ ಬೆಳೆಯಾಗಿ ಬೆಳೆಯ ಬಹುದಾಗಿದೆ. ಇಂತಹ ಕಾರ್ಯಕ್ರಮಕ್ಕೆ ಕೃಷಿಕರು ಹೆಚ್ಚು ಬಂದು ಪ್ರಶ್ನಿಸಬೇಕು. ಪರಿಹಾರ ಸಿಗಲಿದೆ. ಕೃಷಿ ಲಾಭದಾಯಕವೇ ಆದರೆ ಕೃಷಿಯಲ್ಲಿ ಮೋಜು ಮಾಡಲು ಸಾಧ್ಯವಿಲ್ಲ ಎಂದರು. 

ಕೃಷಿ ಲಾಭದಾಯಕ ಕ್ಷೇತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸಮಸ್ಯೆಗಳು, ಸವಾಲುಗಳು ಹೆಚ್ಚಾದಂತೆ ಕೃಷಿಕರು ಪರಿಹಾರ ಕಂಡುಕೊಳ್ಳುವ ಬದಲು ಸರ್ಕಾರದತ್ತ ಮುಖ ಮಾಡುತ್ತಾರೆ. ಅದರ ಬದಲು ಬೆಳೆಗಳಿಗೆ ರೋಗ ಬರುವುದಕ್ಕೂ ಮುನ್ನವೇ ಎಚ್ಚೆತ್ತು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಬೆಳೆಯನ್ನು ಕಾಪಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕಿದೆ ಎಂದು ಹೇಳಿದರು.

ಯಾವುದಕ್ಕೇ ದುರ್ಬಿಕ್ಷೆ ಬಂದೋದಗಿದರೂ ಕೃಷಿ ಮಾತ್ರ ದುರ್ಬಿಕ್ಷೆ ಎಂಬುದಿಲ್ಲ. ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಮೃದ್ಧ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಭತ್ತ, ಕಾಳುಮೆಣಸು, ತೆಂಗು, ಅಡಕೆ ಸೇರಿ ಸಮೃದ್ಧ ಕೃಷಿ ಮಾಡಲಾಗುತ್ತಿದೆ. ಕೃಷಿ ಮಾಡುವುದಕ್ಕೆ ಕೇವಲ ಆಸಕ್ತಿ ಇದ್ದರೆ ಸಾಲದು. ಕಾಲಮಾನಕ್ಕೆ ತಕ್ಕಂತೆ ಪರಿಣಿತಿಯೂ ಬೇಕಾಗುತ್ತದೆ ಎಂದರು.

Agriculture is profitable but not for fun - Religious-Dr. Virendra Hegde

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close