ad

ಬೇರೆ ಹೆಣ್ಣಿನ ಸವಾಸ ಮಾಡಿ ಗರ್ಭಿಣಿ ಪತ್ನಿಗೆ ಬೆದರಿಕೆ ಹಾಕಿದ ಆರೋಪಿಗೆ ಶಿಕ್ಷೆ ನೀಡಿದ ನ್ಯಾಯಾಲಯ- Court sentences man who threatened pregnant wife by having relationship with another woman

SUDDILIVE || SHIVAMOGGA

ಬೇರೆ ಹೆಣ್ಣಿನ ಸವಾಸ ಮಾಡಿ ಗರ್ಭಿಣಿ ಪತ್ನಿಗೆ ಬೆದರಿಕೆ ಹಾಕಿದ ಆರೋಪಿಗೆ ಶಿಕ್ಷೆ ನೀಡಿದ ನ್ಯಾಯಾಲಯ-Court sentences man who threatened pregnant wife by having relationship with another woman

Court, sentences


ಅಕ್ರಮ ಸಂಬಧಹೊಂದಿ ಪತ್ನಿ ಗರ್ಭಿಣಯಾಗಿದ್ದಾಗ ಮನೆಯಿಂದ ಹೊರಹಾಕಿ ಮಗುವಿನಿಂದ ಬಂದ ಮನೆಗೆ ಪುನಃ ಬಂದವಳನ್ನ ಗಂಡ ಅತ್ತೆ ಮಾವ ಮತ್ತು ಮೈದುನರಿಂದ ಮತ್ತೊಮ್ಮೆ ಬಂದರೆ ಜೀವ ಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಕಾರಾವಾಸ ಮತ್ರು ದಂಡ ವಿಧಿಸಿ ತೀರ್ಪು ನೀಡಿದೆ. 

 22 ವರ್ಷದ ಮಹಿಳೆಯೊಬ್ಬರು ಮೂರು ವರ್ಷದ ಹಿಂದೆ ಹರೀಶ್‌ ಎಂಬುವವರನನ್ನು ಮದುವೆಯಾಗಿದ್ದು, ನಂತರದ ದಿನಗಳಲ್ಲಿ  ಗಂಡ ಹರೀಶ್ ನು ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಪರಿಣಾಮ ಪತ್ನಿಯೊಂದಿಗೆ ಗಲಾಟೆ ಮಾಡಿ 3 ತಿಂಗಳ ಗರ್ಭಿಣಿಯಾಗದ್ದಾಗ ಆಕೆಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದ.  

ಹಾಗೂ ಮಗು ಆದ ನಂತರ ಫಿರ್ಯಾದಿಯು ಹರೀಶನ ಮನೆಗೆ ಬಂದಾಗ, ಆಕೆಯನ್ನು ಮನೆಗೆ ಸೇರಿಸದೇ ಫಿರ್ಯಾದಿಯ ಗಂಡ, ಅತ್ತೆ , ಮಾವ ಹಾಗೂ ಮೈದುನ ಸೇರಿ ಗಲಾಟೆ ಮಾಡಿ ಇನ್ನೊಮ್ಮೆ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ.  ಈ ಬಗ್ಗೆ   ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ  ಪ್ರಕರಣದಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿಗಳಾದ  ಶ್ರೀಮತಿ  ಶರಾವತಿ ಎಮ್ ಪಿಎಸ್ಐ ಮಹಿಳಾ ಪೊಲೀಸ್ ಠಾಣೆ ರವರು ತನಿಖೆಯನ್ನು ಪೂರ್ಣಗೊಳಿಸಿ  ಘನ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಗಕ್ಕೆ ಆರೋಪಿತನ ವಿರುದ್ಧ ದೋಷರೋಪಣ ಪಟ್ಟಿಯನ್ನು ಸಲ್ಲಿಸಿರುತಾರೆ.  

ಘನ ಸರ್ಕಾರದ ಪರವಾಗಿ  ಕಿರಣ್ ಕುಮಾರ್ ಸರಕಾರಿ ಅಭಿಯೋಜಕರವರು ಪ್ರಕರಣದ ವಾದವನ್ನು ಮಂಡಿಸಿದ್ದು ಘನ 2ನೇ  ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿ ಹರೀಶ್, 25 ವರ್ಷ, ಗುಂಡೇರಿ ಕ್ಯಾಂಪ್, ಭದ್ರಾವತಿ, ಶಿವಮೊಗ್ಗ,   ಈತನ ವಿರುದ್ದ ಆರೋಪ ದೃಢಪಟ್ಟ ಹಿನ್ನಲೆಯಲ್ಲಿ ದಿನಾಂಕ 29-10-2025 ರಂದು ಮಾನ್ಯ ನ್ಯಾಯಾಧಿಶರಾದ ಶ್ರೀ ಸಿದ್ದರಾಜು ಎನ್. ಕೆ ರವರು  ಆರೋಪಿತನಿಗೆ  ಐಪಿಸಿ 498(A) ಕಲಂ ಅಡಿಯಲ್ಲಿ 1ವರ್ಷ   ಸಾದಾ ಕಾರವಾಸ 1000/- ದಂಡ, ದಂಡ  ಕಟ್ಟಲು ವಿಫಲನಾದರೆ 30 ದಿನಗಳ ಸಾದಾ ಕಾರವಾಸ  ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.

Court sentences man who threatened pregnant wife by having sex with another woman   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close