ad

ರೈಲ್ವೆ ಪಾರ್ಕಿಂಗ್ ನಲ್ಲಿ ಪ್ರಯಾಣಿಕರ ಜೇಬಿಗೆ ಬೀಳುತ್ತಿದೆಯಾ ಕತ್ತರಿ? Are scissors falling into the pockets of passengers at the Shivamogga railway parking lot?

 SUDDILIVE || SHIVAMOGGA

ರೈಲ್ವೆ ಪಾರ್ಕಿಂಗ್ ನಲ್ಲಿ ಪ್ರಯಾಣಿಕರ ಜೇಬಿಗೆ ಬೀಳುತ್ತಿದೆಯಾ ಕತ್ತರಿ?Are scissors falling into the pockets of passengers at the Shivamogga railway parking lot?

Railwaystaion, shivamogga


ರೈಲ್ವೆ ಪಾರ್ಕಿಂಗ್ ನಲ್ಲಿ ಪ್ರಯಾಣಿಕರಿಂದ ಅಧಿಕ ಲೂಟಿ ಮಾಡಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಗಂಭೀರವಾಗಿ ಆರೋಪಿಸಿದ್ದು, ಈ ಕುರಿತು ಮಾಹಿತಿ ಹುಡುಕಲು ಹೋದಾಗ ಪಾರ್ಕಿಂಗ್ ನಲ್ಲಿ ಅಧಿಕ ಹಣ ಪಡೆದಿರುವುದು ಬೆಳಕಿಗೆ ಬಂದಿದೆ.  

ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿರುವ ಪಾರ್ಕಿಂಗ್ ಇತ್ತೀಚೆಗೆ ಟೆಂಡರ್ ನಡೆದಿದೆ. ಹಳೆಯ ಟೆಂಡರ್ ದಾರ 14 ಲಕ್ಷ ರೂ ವರ್ಷಕ್ಕೆ ಕಟ್ಟುತ್ತಿದ್ದ. ಈ ಬಾರಿಯ ಟೆಂಡರ್ ಬೆಂಗಳೂರಿನ ಮಾರುತಿ ಎಂಟರ್ ಪ್ರೈಸಸ್ ನವರಿಗೆ ಪ್ರತಿ ವರ್ಷಕ್ಕೆ 37 ಲಕ್ಷಕ್ಕೆ  ಹಿಡಿದಿದ್ದಾರೆ.  ನ.03 ರಂದು ಈ ಟೆಂಡರ್ ಮಾರುತಿ ಎಂಟರ್ ಪ್ರೈಸಸ್ ಗೆ ಅಲಟ್ ಮಾಡಲಾಗಿದೆ. ಆದರೆ ಶಿವಮೊಗ್ಗ ಕಾರು ಪಾರ್ಕಿಂಗ್ ನಲ್ಲಿ ಶಿವಮೊಗ್ಗದ ಗ್ರಾಹಕರೊಬ್ಬರು ನ.4 ಕ್ಕೆ ಬಂದು ಪಾರ್ಕ ಮಾಡಿದವರಿಗೆ 40 ರೂ 24 ಗಂಟೆಗೆ ಚಾರ್ಚ್ ಮಾಡಿ ಟೆಂಡರ್ ಅಮೌಂಟ್ ಗಿಂತ ಹೆಚ್ಚಿಗೆ ಪಡೆದಿರುವುದು ಬೆಳಕಿಗೆ ಬಂದಿದೆ. 

ಶಿವಮೊಗ್ಗದ ರೈಲ್ವೆ ನಿಲ್ದಾಣದ ಕಮರ್ಷಿಯಲ್ ಅಧಿಕಾರಿಗೆ ವಿಚಾರಿಸಿದಾಗ ಪಾರ್ಕಿಂಗ್ ಪಡೆದ ಗುತ್ತಿಗೆದಾರ  10 ರೂ. ಅಧಿಕ ಚಾರ್ಚ್ ಮಾಡಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗದ ಮ.ಸ ಷರೀಪ್ ಎಂಬುವರು ನ.4 ರಂದು ರೈಲ್ವೆ ನಿಲ್ದಾಣದ ಪಾರ್ಕಿಂಗ್ ನಲ್ಲಿ ಕಾರನ್ನ ತಂದು ಪಾರ್ಕ್ ಮಾಡಿ ನ.7 ನೇ ತಾರೀಕು ವಾಪಾಸ್ ಬಂದಿದ್ದಾರೆ. 

ಒಟ್ಟು ರೈಲ್ವೆ ನಿಲ್ದಾಣದ ಪಾರ್ಕ್ ನಲ್ಲಿ 3 ದಿನ 10 ನಿಮಿಷ ಪಾರ್ಕ್ ಮಾಡಿದ್ದಕ್ಕೆ ಜಿಎಸ್ ಟಿ ಮತ್ತು ಇತರೆ ಎಲ್ಲಾ ಚಾರ್ಜ್ ಸೇರಿಸಿ 160 ರೂ. ಹಾಕಿದ್ದಾರೆ. 10 ನಿಮಿಷ ತಡವಾಗಿ ಬಂದಿದ್ದಾರೆ ಕಡಿಮೆ ಮಾಡಿ ಎಂದು ಷರೀಫ್ ಕೇಳಿಕೊಂಡರು ಪಾರ್ಕ್ ನವರು ಕೇಳದೆ 4 ದಿನಗಳ ಲೆಕ್ಕದಂತೆ 160 ಚಾರ್ಜ್ ಮಾಡಿದ್ದಾನೆ. 160 ರೂಗೆ ಪ್ರತಿದಿನ 33.84 ರೂ. 18% ಜಿಎಸ್ ಟಿ ಹಾಕಿ 160 ರೂ. ಪಡೆದು ಕಳುಹಿಸಿದ್ದಾನೆ. 

ಇದರ ಬೆನ್ನುಹತ್ತಿದ ಸುದ್ದಿಲೈವ್ ಟೆಂಡರ್ ದಾರ  ಪ್ರತಿದಿನ ನಿಗದಿತ ಟೆಂಡರ್ ಗಿಂತ ಕಾರು ಪಾರ್ಕಿಂಗ್ ಗೆ 10 ರೂ ಹೆಚ್ಚಿನ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಕಮರ್ಷಿಯಲ್ ಅಧಿಕಾರಿಗಳನ್ನ ವಿಚಾರಿಸಿದಾಗ ಕಾರಿಗೆ ಪ್ರತಿದಿನ 30 ರೂ. ಮತ್ತು ದ್ವಿಚಕ್ರ ವಾಹನಕ್ಕೆ 20 ರೂ. ಹಣ ನಿಗದಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಟೆಂಡರ್ ದಾರ ನಿಗದಿತ ಹಣಕ್ಕಿಂತ ಹೆಚ್ಚಿನ ಹಣಪಡೆದು ಗ್ರಾಹಕರಿಗೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 

ಕೇಂದ್ರ ಸರ್ಕಾರದ ಅಡಿ ಬರುವ ರೈಲ್ವೆ ನಿಲ್ದಾಣದಲ್ಲಿ ಲೂಟಿ ಹೊಡೆಯಲಾಗುತ್ತಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ಇದೆ. ತಕ್ಷಣಕ್ಕೆ ಈ ಕ್ರಮ ನಂತರದ ದಿನಗಳಲ್ಲಿ ಮರೆಯಾಗದಿರಲಿ. ರೈಲ್ವೆ ಪ್ರಯಾಣಿಕರಿಗೆ ಮೋಸವಾಗದಿರಲಿ ಎಂಬುದೆ ಸುದ್ದಿಲೈವ್ ನ ಆಶಯವಾಗಿದೆ.  

Are scissors falling into the pockets of passengers at the Shivamogga railway parking lot

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close