ಅಜಿತ್ ಗೌಡರಿಂದ ಠಾಣೆಯ ಎದುರೇ ರಾತ್ರೋರಾತ್ರಿ ಧರಣಿ-Ajith Gowda holds a night-long sit-in in front of the police station

 SUDDILIVE|| BHADRAVATHI

ಅಜಿತ್ ಗೌಡರಿಂದ ಠಾಣೆಯ ಎದುರೇ ರಾತ್ರೋರಾತ್ರಿ ಧರಣಿ-Ajith Gowda holds a night-long sit-in in front of the police station

Ajithgowda, policestation


ಮೊನ್ನೆ ಸುರಗೀತೋಪಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನ ಬಂಧಿಸಿರುವ ವಿರುದ್ಧ ಅಪ್ಪಾಜಿ ಗೌಡರ ಪುತ್ರ ಅಜಿತ್ ಗೌಡ ತಿರುಗಿ ಬಿದ್ದಿದ್ದಾರೆ. ಬಂಧಿತ ಆರೋಪಿಗಳ ಕುಟುಂಬಸ್ಥರ ಜೊತೆ ಅಜಿತ್ ಗೌಡರವರು ಪೇಪರ್ ಟೌನ್ ಪೊಲೀಸ್ ಠಾಣೆಯ ಎದುರು ಅಹೋರಾತ್ರಿ ಧರಣಿ ನಡೆಸಿದ್ದಾರೆ. 

ಭದ್ರಾವತಿಯ ಸುರಗಿತೋಪಿನಲ್ಲಿ ಮೊನ್ನೆ ನಡೆದ ಗಣಪತಿ ವಿಸರ್ಜನ ಮೆರವಣಿಗೆಯಲ್ಲಿ ನಮ್ಮ ಏರಿಯಾಗೆ ನೀನು ಯಾಕೆ ಬಂದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿ ಪೊಲೀಸರ ಮೇಲೂ ಹಲ್ಲೆ ನಡೆದಿತ್ತು. ಈ ಗಲಾಟೆ ಎರಡೂ ಕಡೆ ಎಫ್ಐಆರ್ ಆಗಿತ್ತು. ಎರಡೂ ಕಡೆ ಎಫ್ಐಆರ್ ಆಗಿದ್ದರೂ ಪೊಲೀಸರು ಜೆಡಿಎಸ್ ನವರನ್ನ ಮಾತ್ರ ವಶಕ್ಕೆ ಪಡೆದಿದ್ದಾರೆ. ನಮ್ಮ ಕಡೆಯ ಹುಡುಗನ ಮೇಲೂ ಹಲ್ಲೆ ನಡೆಸಿದ ಆರೋಪಿಗಳನ್ನ ಬಂಧಿಸಿಲ್ಲ ಎಂದು ಆರೋಪಿಸಿ ಆಹೋರಾತ್ರಿ ಧರಣಿ ನಡೆಸಲಾಗಿದೆ. 


ಸುರಗೀತೋಪಿನಲ್ಲಿ ಅನ್ನಪೂರ್ಣೇಶ್ವರಿ ವಿದ್ಯಾಗಣಪತಿ ವಿಸರ್ಜನ ಮೆರವಣಿಗೆ ನ.5 ರಂದು ನಡೆದಿತ್ತು. ಈ ವೇಳೆ ಬೈಕ್ ನಲ್ಲಿ ಬಂದ ಮನು ಮತ್ತು ಯೋಗೀಶ್ ಗೆ ಜೀವನ್ ಎಂಬಾತ ನಮ್ಮ ಏರಿಯಾಗೆ ಯಾಕೆ ಬಂದ್ರಿ ಎಂಬ ವಿಷಯ ಗಲಾಟೆಗೆ ಕಾರಣವಾಗಿತ್ತು. ಈ ವಿಷಯದಲ್ಲಿ ಎಎಸ್ಐ ಕೃಷ್ಣಮೂರ್ತಿ ಮತ್ತು ಶೂಟಿಂಗ್ ನಡೆಸುತ್ತಿದ್ದ ಅಜಿತ್ ಎಂಬುವರ ಮೇಲೆ ಹಲ್ಲೆ ನಡೆದಿತ್ತು. ಈ ಗಲಾಟೆ ದೂರು ಮತ್ತು ಪ್ರತಿದೂರಿಗೆ ಕಾರಣವಾಗಿತ್ತು. 

ಹಲ್ಲೆಗೊಳಗಾದ ಜೀವನ್ ಮತ್ತು ಇತರೆ ಇಬ್ಬರನ್ನ ಪೇಪರ್ ಟೌನ್ ಪೊಲೀಸರು‌ ಬಂಧಿಸಿದ್ದರು. ಇದು  ರಾಜಕೀಯ ತಿರುವು ಪಡೆದಿದೆ. ಅಪ್ಪಾಜಿ ಗೌಡರು ಜೆಡಿಎಸ್ ಪಕ್ಷದ ಯುವಕರನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಕಾಂಗ್ರೆಸ್ ಕಡೆ ಯುವಕರ ವಿರುದ್ಧ ಎಫ್ಐಆರ್ ದಾಖಲಾದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಆರೋಪಿತ ಕುಟುಂಬಸ್ಥರ ಜೊತೆ ಅಜಿತ್ ಗೌಡರು ಪೇಪರ್ ಟೌನ್ ಪೊಲೀಸ್ ಠಾಣೆ ಎದುರು ರಾತ್ರಿಯಿಡಿ ಪ್ರತಿಭಟನೆಗೆ ಇಳಿದಿದ್ದಾರೆ. 

Ajith Gowda holds a night-long sit-in in front of the police station

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close