SUDDILIVE || SHIVAMOGGA
ತರಾತುರಿಯಲ್ಲೇ ಶಿವಮೊಗ್ಗಕ್ಕೆ ಬಂದುಹೋದ ಅಣ್ಣಮಲೈ-Annamalai, who arrived in Shimoga in a hurry
ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿದ್ದ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರಿಗೆ ವಿಮಾನ ಕ್ಯಾನ್ಸಲ್ ಬಿಸಿ ತಟ್ಟಿದೆ. ಹಾಗಾಗಿ ತರಾತುರಿಯಲ್ಲಿ ಕಲ್ಯಾಣ ಮಂಟಪಕ್ಕೆ ಆಗಮಿಸಿ ಮರಳಿದರು.
ಅಣ್ಣಾಮಲೈ ಅವರು ಚೆನ್ನೈನಿಂದ ಶಿವಮೊಗ್ಗಕ್ಕೆ ನೇರವಾಗಿ ವಿಮಾನದಲ್ಲಿ ಆಗಮಿಸಬೇಕಿತ್ತು. ಆದರೆ ಸ್ಪೈಸ್ ಜೆಟ್ ವಿಮಾನ ರದ್ದಾಗಿದ್ದರಿಂದ ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಅದೇ ವಿಮಾನದಲ್ಲಿ ಪುನಃ ಬೆಂಗಳೂರಿಗೆ ಮರಳಬೇಕಾದ್ದರಿಂದ ತರಾತುರಿಯಲ್ಲಿ ಆಗಮಿಸಿ ಮರಳಿದರು.
ಶಿವಮೊಗ್ಗದ ಒಡ್ಡಿನಕೊಪ್ಪದಲ್ಲಿರುವ ಮಲ್ಲೇಶ್ ಕನ್ವೆನ್ಷನ್ ಹಾಲ್ ನಲ್ಲಿ ಕುಮಾರೇಶ್ ಮೊದಲಿಯರ್ ಅವರ ಮಗಳಾದ ಚೈತ್ರ ಮತ್ತು ಸಾಯಿ ಪ್ರವೀಣ್ ಅವರ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು. ಇದೇ ವೇಳೆ ಎಂ ಎಲ್ ಸಿ ಡಾ.ಧನಂಜಯ ಸರ್ಜಿ ಸಹ ವಧುವರರನ್ನ ಆಶೀರ್ವದಿಸಿದರು. ಆಗಮಿಸುತ್ತಿದ್ದ ಡಾ.ಸರ್ಜಿಯನ್ನ ಅಣ್ಣಮಲೈ ಹೆಗಲಮೇಲೆ ಕೈಹಾಕಿ ಮಾತನಾಡಿಸಿರುವ ದೃಶ್ಯ ಲಭ್ಯವಾಗಿದೆ.
ತಮಿಳುನಾಡು ಬಿಜೆಪಿಯೊಳಗಿನ ಸಂಘರ್ಷ, ಇತ್ತೀಚೆಗೆ ಅಣ್ಣಾಮಲೈ ನೀಡಿದ್ದ ಹೇಳಿಕೆ ಸಂಬಂಧ ಮಾಧ್ಯಮಗಳು ಪ್ರಶ್ನಿಸಿದಾಗ, ‘10ನೇ ತಾರೀಖಿನ ನಂತರ ಪುನಃ ಬರುತ್ತೇನೆ. ಆಗ ಮಾತನಾಡುತ್ತೇನೆ’ ಎಂದು ತಿಳಿಸಿದರು.
Annamalai, who arrived in Shimoga in a hurry


