SUDDILIVE || SHIVAMOGGA
ಸಂಚಲನ ಮೂಡಿಸಿದ ಐಜಿಪಿ-The IGP who created a stir
ನಗರದಲ್ಲಿ ಡಿಜಿಪಿ & ಐಜಿಪಿ ಡಾ.ಎಂ.ಎ.ಸಲೀಂ ಭೇಟಿ ಸಂಚಲನ ಮೂಡಿಸಿದೆ. ಸಾಲು ಸಾಲು ಸಭೆ ಠಾಣೆಗೆ ಭೇಟಿ ಮಾಡಿ ಪರಿಶೀಲಿಸಿದ್ದಾರೆ. ಸ್ಥಳೀಯ ಠಾಣೆಗೆ ಭೇಟಿ ಮಾಡಬೇಕಿದ್ದ ಐಜಿಪಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ.
ಮಧ್ಯಾಹ್ನ 1-30 ಕ್ಕೆ ಬೆಂಗಳೂರಿನಿಂದ ಹೊರಟ ಡಿಜಿಪಿ ಶಿವಮೊಗ್ಗಕ್ಕೆ 2-40 ಕ್ಕೆ ತಲುಪಿದ್ದಾರೆ. ಮಧ್ಯಾಹ್ನ 3-30ಕ್ಕೆ ಡಿಎಆರ್ ನಲ್ಲಿ ರಿವ್ಯೂ ಮೀಟಿಂಗ್ ನಡೆದಿದೆ. ಇದಾದ ಮೇಲೆ ಕೆಎಸ್ಐಎಸ್ಎಫ್ ಮತ್ತು ಎಸ್ಎಫ್ಎಸ್ ಗೆ ಭೇಟಿ ಮಾಡಿದ್ದಾರೆ.
ಟಿಪಿಯಲ್ಲಿ ಸ್ಥಳೀಯ ಠಾಣಯೊಂದಕ್ಕೆ ಭೇಟಿ ನೀಡುವ ಸಮಯ ನಿಗದಿಯಾಗಿತ್ತು. ಆದರೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ಡಿಜಿಪಿ ಸಂಚಲನ ಮೂಡಿಸಿದ್ದಾರೆ. ಠಾಣೆಯಲ್ಲಿ ಪರಿಶೀಲಬೆ ನಡೆಸಿ ಕೊನೆಗೆ ಫೋಟೋ ಶೂಟ್ ಸಹ ಮಾಡಿಕೊಂಡಿದ್ದಾರೆ.
ಇಂದು ಸಹ ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಿರುವ ಡಾ.ಸಲೀಂ ನಾಳೆ ಸಹ ಅವರ ಭೇಟಿ, ಸಭೆ ಮುಂದುವರೆದಿದೆ. ಡಿಎಆರ್ ಪೊಲೀಸ್ ಲೈನ್ ಭೇಟಿ, ಜಯಂತಿ ನಗರದಲ್ಲಿರುವ ಕೆಎಸ್ಆರ್ ಪಿ 8 ನೇ ಭೇಟಿ ನಂತರ ರಾಗಿಗುಡ್ಡದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
The IGP who created a stir
