ad

ಒಂದೇ ದೇವಸ್ಥಾನ‌ ಇಬ್ಬರು ನಾಯಕರಿಂದ ಉದ್ಘಾಟನೆ, ಯಾವುದದು? The same temple was inaugurated by two leaders, which one?

SUDDILIVE || SHIVAMOGGA

ಒಂದೇ ದೇವಸ್ಥಾನ‌ ಇಬ್ಬರು ನಾಯಕರಿಂದ ಉದ್ಘಾಟನೆ, ಯಾವುದದು?The same temple was inaugurated by two leaders, which one?

 

Temple, inaugurated


ಕಳೆದ ಜೂನ್ 5ರಂದು ಶಿವಮೊಗ್ಗ ನಗರದ ರಾಗಿ ಗುಡ್ಡದಲ್ಲಿ ಹಿಂದೂ ವಿಗ್ರಹಗಳ ಹಾನಿಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಇಂದು ರಾಷ್ಟ್ರಭಕ್ತರ ಬಳಗ ಮತ್ತು ಶಾಸಕ ಚೆನ್ನಬಸಪ್ಪ ದೇವಸ್ಥಾನವನ್ನ ಒಟ್ಟಿಗೆ ಉದ್ಘಾಟಿಸಿದ್ದಾರೆ. ಒಂದೇ ದೇವಸ್ಥಾನವನ್ನ ಇಬ್ವರು ನಾಯಕರು ಉದ್ಘಾಟಿಸಿದ್ದಾರೆ.  

ಜು.5 ರಂದು ಅನ್ಯಕೋಮಿನ ಯುವಕರಿಂದ ಹಿಂದೂ ದೇವರ ವಿಗ್ರಹಗಳನ್ನ ಹಾನಿಗೊಳಿಸಿದ ಘಟನೆ ರಾಗಿಗುಡ್ಡದಲ್ಲಿ ನಡೆದಿತ್ತು. ವಿಗ್ರಹಗಳನ್ನ ಹಾನಿಗೊಳಿಸಿದ ಸ್ಥಳದಲ್ಲಿಯೇ ಇಂದು ಶಾಸ್ತ್ರೋಕ್ತವಾಗಿ ದೇವಸ್ಥಾನವನ್ನ ಉದ್ಘಾಟಿಸಲಾಗಿದೆ. ಈ ಕುರಿತು ಇಬ್ವರೂ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 

ರಾಷ್ಟ್ರಭಕ್ತರ ಬಳಗದ ಕೆ.ಈ.ಕಾಂತೇಶ್  ಕಳೆದ ಜುಲೈ 5ರಂದು ಮತಾಂಧ ಮುಸಲ್ಮಾನನೊಬ್ಬ ಶಿವಮೊಗ್ಗದ ರಾಗಿಗುಡ್ಡದ ಬಳಿಯ ಬಂಗಾರಪ್ಪ ಬಡವಾಣೆಯಲ್ಲಿದ್ದ ಹಿಂದುಗಳು ಪೂಜಿಸುವ ವಿಗ್ರಹಗಳನ್ನು ಭಂಜಿಸಿದ್ದನು. ಈ ಕುಕೃತ್ಯದ ಬಗ್ಗೆ ರಾಜ್ಯಾದ್ಯಂತ ಚರ್ಚೆಗೆ ನಡೆದಿತ್ತು. ರಾಷ್ಟ್ರ ಭಕ್ತ ಬಳಗ ಯಾವ  ಸ್ಥಳದಲ್ಲಿ ವಿಗ್ರಹಗಳನ್ನು ಆ ಪುಂಡ ಭಗ್ನಗೊಳಿಸುವ ಯತ್ನ ಮಾಡಿದ್ದನೋ ಅಲ್ಲೇ ಒಂದು ಭವ್ಯ ಮಂದಿರ ನಿರ್ಮಿಸಿ ಶಾಸ್ತ್ರೋಕ್ತವಾಗಿ ಪ್ರಾಣ ಪ್ರತಿಷ್ಠಾಪನೆ ಮಾಡುವ  ಒಂದು ಸಂಕಲ್ಪವನ್ನು  ಅಂದು ಕೈಗೊಂಡಿತ್ತು. ಇಂದು ಆ ಕಾರ್ಯ ನೇರವೇರಿಸಿ  ಹಿಂದು ಧರ್ಮ ರಕ್ಷಣೆಯ ತನ್ನ ಧ್ಯೇಯವನ್ನು ಎತ್ತಿ ಹಿಡಿಯಲಾಗಿದೆ ಎಂದು ಕಾಂತೇಶ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. 

ಹಿಂದೂ ಸಮಾಜದ ಮೇಲೆ ನೂರಾರು ವರ್ಷಗಳಿಂದ ನಿರಂತರ ಆಕ್ರಮಣಗಳು ನಡೆಯುತ್ತಾ ಬಂದಿದ್ದರೂ, ಈ ಆಕ್ರಮಣಗಳನ್ನು ಎದುರಿಸಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದೇವೆ. ಇಂದು ದೇವಸ್ಥಾನದ ಆವರಣದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಸಕಲ ವಿಧಾನಗಳೊಂದಿಗೆ  ಶ್ರೀ ವಿಘ್ನೇಶ್ವರನ ಪ್ರತಿಷ್ಠಾಪನ ಮಹೋತ್ಸವವು ಅದ್ದೂರಿಯಾಗಿ ನೆರವೇರಿದೆ.

ಈ ವಿಜಯವು ಕೇವಲ ಒಂದು ದೇವಸ್ಥಾನದ ಪುನರ್ನಿರ್ಮಾಣವಲ್ಲ — ಇದು ಧರ್ಮದ ರಕ್ಷಣೆಗೆ, ನಂಬಿಕೆಯ ಗೌರವಕ್ಕೆ ಮತ್ತು ಹಿಂದೂ ಸಮಾಜದ ಅಸ್ತಿತ್ವದ ಉಳಿವಿಗೆ ನಡೆದ ಹೋರಾಟದ ಸಂಕೇತವಾಗಿದೆ. ಹಿಂದು ಧರ್ಮದ ಗೌರವ ಉಳಿಸುವುದು ನಮ್ಮ ಕರ್ತವ್ಯ, ಅದಕ್ಕಾಗಿ ಹೋರಾಡುವುದು ನಮ್ಮ ಧರ್ಮ ಎಂದು ಶಾಸಕ ಚೆನ್ನಬಸಪ್ಪ ಪೋಸ್ಟ್ ಹಾಕಿಕೊಂಡಿದ್ದಾರೆ. 

The same temple was inaugurated by two leaders, which one

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close