SUDDILIVE || SHIVAMOGGA
ಜಿಲ್ಲಾಧಿಕಾರಿಗೆ ಹಮಾಲರಿಂದ ಮನವಿ-Appeal from porters to the District Collector
ಸಾಗರ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸಮೀಪ ಹಮಾಲರ ವಸತಿ ನಿವೇಶನಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು' ಎಂದು ಒತ್ತಾಯಿಸಿ ಹಮಾಲರ ಪರವಾಗಿ ಪಿ.ಕೆ. ಪಾಂಡುರಂಗನ್ ಅವರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಅದೇ ರೀತಿ, ಹಮಾಲರ ಮನೆಗಳಿಗೆ ಹಾದು ಹೋಗುವ ರಸ್ತೆಯಲ್ಲಿ ಮೆಕ್ಕೆಜೋಳ ವರ್ತಕರಿಗೆ ನಿವೇಶನ ಮಂಜೂರು ಮಾಡಲಾಗಿದೆ. ಇದು ಅವೈಜ್ಞಾನಿಕವಾಗಿದ್ದು, ಸರಿಯಾದ ಕ್ರಮವಲ್ಲ ಎಂದು ದೂರಿದರು.
ಇಲ್ಲಿ ಕುಡಿಯುವ ನೀರು, ವಿದ್ಯುತ್, ಯುಜಿಡಿ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ಉದ್ದೇಶ ಪೂರ್ವಕವಾಗಿ ಮೆಕ್ಕೆಜೋಳ ವರ್ತಕರಿಗೆ ಈ ಜಾಗವನ್ನು ಮಂಜೂರು ಮಾಡಲಾಗಿದ್ದು, ಆದ್ದರಿಂದ, ಇದನ್ನು ತಡೆ ಹಿಡಿದು ಬಡಹಮಾಲರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇಲ್ಲಿ ಹಮಾಲರಿಗೆ 1996ರಲ್ಲಿ ಮನೆ ಮಂಜೂರಾಗಿದ್ದು,ಎಪಿಎಂಸಿಯಿಂದಲೇ ಮನೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಹಮಾಲರು ಎಪಿಎಂಸಿಗೆ ಹಣ ಪಾವತಿ ಮಾಡಿದ್ದಾರೆ. 2015ರಲ್ಲಿ ಸರ್ಕಾರದ ಆದೇಶವಿದ್ದರೂ ಕೂಡ ಬಡಹಮಾನರಿಗೆ ಮನೆ ನೋಂದಣಿ ಮಾಡಿಕೊಟ್ಟಿಲ್ಲ. ಆದ್ದರಿಂದ, ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು ಎಂದು ಒತ್ತಾಯಿಸಿದರು.ಪ್ರಮುಖರಾದ ಗಂಗಮ್ಮ, ಶಫಿ, ಸುಬ್ರಮಣಿ, ಶೇಖರ್, ಪರಮೇಶ್ವರಿ, ಆಶಾ ಇದ್ದರು.
Appeal from porters to the District Collector
