SUDDILIVE || SHIVAMOGGA
ಎಂಇಎಸ್ ರನ್ನ ಗಡಿಪಾರು ಮಾಡುವಂತೆ ಕರವೇ ಸಿಂಹಸೇನೆ ಪ್ರತಿಭಟನೆ-Karave Simha Sena protests demanding MES' deportation
ನವಂಬರ್ 1 ಕನ್ನಡ ರಾಜ್ಯೋತ್ಸವವನ್ನು ಬೆಳಗಾವಿಯ ಎಂಇಎಸ್ ನವರು ಕರಾಳ ದಿನವನ್ನಾಗಿ ಆಚರಿಸುತ್ತಿದ್ದು ಮತ್ತು ಯಾರೆಲ್ಲಾ ಈ ಒಂದು ಕರಾಳ ದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೋ ಅವರೆಲ್ಲರನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆ ಸಿಂಹ ಸೇನೆ ಇಂದು ಗೋಪಿ ವೃತ್ತದಲ್ಲಿ ಪ್ರತಿಭಟಿಸಿದೆ.
ಪ್ರತಿ ವರ್ಷವೂ ಇದೇ ರೀತಿ ಆಗುತ್ತಿದ್ದರು ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕೂತಿರುವುದು ವಿಪರ್ಯಾಸ ಕರ್ನಾಟಕದಲ್ಲಿ ಎಂಇಎಸ್ ಬ್ಯಾನ್ ಮಾಡಬೇಕು ಮತ್ತು ಅವರ ಎಲ್ಲಾ ಕಾರ್ಯಕರ್ತರ ಮೇಲೆ ಮುಖದ್ದಮೆಗಳನ್ನು ದಾಖಲು ಮಾಡಿ ಗಡಿಪಾರು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯ ಜಿಲ್ಲಾಧ್ಯಕ್ಷ ಮಧುಸೂದನ್ ಎಸ್ ಎಂ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಅಭಿಜಿತ್ ನೌಲೆ ರವರು ನಗರ ಘಟಕದ ಅಧ್ಯಕ್ಷರು ಕಾರ್ತಿಕ್ ಪೂಜಾರಿಯವರು ಉಪಾಧ್ಯಕ್ಷರಾದ ನಯಾಜ್, ರಘುನಂದನ್, ಗೋಪಿ, ಲಿಂಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.
Karave Simha Sena protests demanding MES' deportation
