SUDDILIVE || SHIVAMOGGA
ಡಿಕೆಶಿಯನ್ನ ಮುಂದಿನ ಎರಡು ವರೆ ವರ್ಷದವರೆಗೆ ಸಿಎಂ ಮಾಡುವಂತೆ ಪ್ಲಕಾರ್ಡ್ ಪ್ರದರ್ಶನ-Placards displayed demanding that DK be made CM for the next two and a half years
ಕರ್ನಾಟಕದಲ್ಲಿ ಮುಂದಿನ ಎರಡುವರೆ ವರ್ಷದ ಅವಧಿಗೆ.. ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಡಿ. ಕೆ ಶಿವಕುಮಾರ್..ರವರನ್ನು ರಾಜ್ಯದ ಮುಖ್ಯಮಂತ್ರಿ ಆಗಲ್ಲಿ ಎಂದು ಇಂದು ಬೆಳಗ್ಗೆ ಶಿವಮೊಗ್ಗ ನಗರದ ಕೇಂದ್ರಬಿಂದುವಾದ ಗೋಪಿ ಸರ್ಕಲ್ ನಲ್ಲಿ.. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕರೆದಶಿ ಕೆ ದೇವೇಂದ್ರಪ್ಪನವರ ನೇತೃತ್ವದಲ್ಲಿ ಪ್ಲಕಾರ್ಡ್ ಪ್ರದರ್ಶನ ನಡೆಸಲಾಯಿತು.
ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿ ಡಿಕೆ ಶಿವಕುಮಾರ್. ದೇಶದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟ ಬಂದಾಗ.. ಸಂಕಷ್ಟವನ್ನು ತಮ್ಮದೇ ರೀತಿಯಲ್ಲಿ ನಿಬಾಯಿಸಿ ಟ್ರಬಲ್ ಶೂಟರ್ ಎಂದೆ ಹೆಸರು ಮಾಡಿರುವ ಡಿಕೆ ಶಿವಕುಮಾರ್ ಅವರು ವಿದ್ಯಾರ್ಥಿ ಕಾಂಗ್ರೆಸ್ ಯುವ ಕಾಂಗ್ರೆಸ್ ವಿವಿಧ ಕಾಂಗ್ರೆಸ್ ಗಳಲ್ಲಿ ಕೆಲಸ ಮಾಡಿ ಹಾಗೂ ಆ ವಿವಿಧ ಘಟಕಗಳನ್ನು.. ಬೆಳೆಸಿ ವಿದ್ಯಾರ್ಥಿ ಮತ್ತು ಯುವಕರನ್ನು ಹೋರಾಟಗಾರರಾಗಿ ರೂಪಿಸಿ ಸಮಾಜಕ್ಕೆ ಒಂದು ಕೊಡುಗೆಯಾಗಿ ಕೊಟ್ಟಿರುವ ಕೀರ್ತಿ ಅವರಿಗೆ ಸಲ್ಲುತ್ತದೆ.
ಡಿಕೆ ಶಿವಕುಮಾರ್ ಅವರು.. ಕಳೆದ 30 ವರ್ಷಗಳಿಂದ ಹಲವರು ಹೋರಾಟ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ನಡೆ ಬಲಿಷ್ಠವಾಗಿ ಕಟ್ಟಿರುವಂತಹ ನಾಯಕ ಡಿಕೆ ಶಿವಕುಮಾರ್ ಅವರ ಶ್ರಮ ಅತ್ಯಂತ.. ಕಳೆದ ಹತ್ತು ವರ್ಷಗಳಿಂದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು.. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಹಿಂದುಳಿದ ವರ್ಗದ ನಾಯಕರು ಆದಂತಹ ಸನ್ಮಾನ್ಯ ಸಿದ್ದರಾಮಯ್ಯನವರನ್ನು ಈಗಾಗಲೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಯನ್ನಾಗಿ ಮಾಡಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಸಮರ್ಥ ಆಡಳಿತವನ್ನು ಕೊಟ್ಟು ಬಡವರ ದಲಿತರ ಕಾರ್ಮಿಕರ ಕಾರ್ಯಕ್ರಮಗಳನ್ನು ರೂಪಿಸಿ ಅನ್ನ ರಾಮಯ್ಯ ಎಂದು ಪ್ರಸಿದ್ಧಿಯಾಗಿ ಸಮರ್ಥ ಆಡಳಿತ ಮಾಡಿದ್ದಾರೆ.
ಮತ್ತೆ ಚುನಾವಣೆ ಬಂದು ಕಳೆದ ಎರಡು ವರ್ಷಗಳಿಂದ ಪಂಚ ಗ್ಯಾರಂಟಿಗಳಿಂದ ರಾಜ್ಯದ ಮುಖ್ಯಮಂತ್ರಿ ಆಗಿ ಸನ್ಮಾನ್ಯ ಸಿದ್ದರಾಮಯ್ಯನವರು ಈಗಾಗಲೇ ರಾಜ್ಯದಲ್ಲಿ ಸಮರ್ಥ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸಮರ್ಥ ಸರ್ಕಾರವನ್ನು ನಿಭಾಯಿಸುವಲ್ಲಿ ಹೆಸರಾಗಿದ್ದಾರೆ.. ಕಳೆದ ಏಳು ವರೆ ವರ್ಷಗಳ ಕಾಲ.. ರಾಜ್ಯದ ಮುಖ್ಯಮಂತ್ರಿ ಆಗಿರೋದು ನಮ್ಮೆಲ್ಲರ ಭಾಗ್ಯ.. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನ ಬಲಿಷ್ಠವಾಗಿ ಕಟ್ಟಿ ಆದಿಯಲ್ಲಿ ಕಾಂಗ್ರೆಸ್ ಪಕ್ಷವನ್ನ ಸಮರ್ಥವಾಗಿ ನಿಭಾಯಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ನಿಭಾಯಿಸಿರುವಂತಹ ಡಿ ಕೆ ಶಿವಕುಮಾರ್ ಅವರನ್ನು ಮುಂದಿನ ಎರಡುವರೆ ವರ್ಷದ ಅವಧಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯನ್ನಾಗಿ ನೇಮಕ ಮಾಡಬೇಕೆಂದು ದೇವೇಂದ್ರಪ್ಪ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ.. ರಾಜ್ಯದ ಜನರ ಸೇವೆ ಮಾಡಲು ಹಾಗೂ ಮುಂದಿನ ದೀರ್ಘ ವಾದಂತಹ ಕಾಂಗ್ರೆಸ್ ಪಕ್ಷವನ್ನು ಕಟ್ಟಲು. ಇನ್ನೂ ಹೆಚ್ಚಿನ ಅವರ ಸೇವೆ ಅನಿವಾರ್ಯವಾಗಿದ್ದು ಆದ್ದರಿಂದ ಕೂಡಲೇ ಅವರಿಗೆ ಮುಂದಿನ ಎರಡು ವರ್ಷದ ಅವಧಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು.. ಕೇಂದ್ರದ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ರಾಹುಲ್ ಮಲ್ಲಿಕಾರ್ಜುನ ಖರ್ಗೆ ಗಾಂಧಿ ವೇಣುಗೋಪಾಲ್. ಸುರ್ಜೆ ವಲ್ಲ ಹರವಾರ ಗಮನ ಹರಿಸುವಂತೆ ಕೋರಿದ್ದಾರೆ.
ಇಂದು ಶಿವಮೊಗ್ಗ ನಗರದ ಗೋಪಿ ಸರ್ಕಲ್ ನಲ್ಲಿ ಪ್ಲೇ ಕಾರ್ಡ್ ಮೂಲಕ ಕೇಂದ್ರ ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಲಾಯಿತು.. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಐಎನ್ಟಿಯು ಸಿ ಅಧ್ಯಕ್ಷ ಯಾದ ಕವಿತಾ ರಾಘವೇಂದ್ರ.. ಎಂ ಮಕ್ಬುಲ್ ಅಹಮದ್ ಹಿಂದುಳಿದ ವರ್ಗಗಳ ಮುಖಂಡರಾದ ಹರ್ಷ... ಫ್ಲವರ್ ಕುಮಾರ್. ಕೆಪಿಸಿಸಿ ಸಂಯೋಜಕೀ ಹಾಗೂ ಮರಾಠ ಸಮಾಜ ಕವಿತಾ . ಮಾಜಿ ಕಾರ್ಪೊರೇಟರ್ ಹಾಗೂ ಅಲ್ಪಸಂಖ್ಯಾತ ಮುಖಂಡರು. ಜಿಲ್ಲಾ ಕಾಂಗ್ರೆಸ್ ಮುಖಂಡರಾದ ನಿಸಾರ್ ಅಹಮದ್.. ಶಮೀಮ್ ಬಾನು... ಲೇಬರ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ರಮೇಶ್.. ಶ್ರೀನಿವಾಸ್. ಸಾಮಾಜಿಕ ತಲ್ಲಣ ಮುಖಂಡ . ಜಮಿಲ್ ಅಹಮದ್ ಬೊಮ್ಮನಕಟ್ಟೆ ಅನಂತು... ನವಿಲೇ ಸಂತೋಷ್ ಪ್ರೇಮ್ ಕುಮಾರ್ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದರು.
Placards displayed demanding that DK be made CM for the next two and a half years
