ad

ಯು.ಆರ್.ಡಬ್ಲ್ಯೂ ಮತ್ತು ವಿ.ಆರ್.ಡಬ್ಲ್ಯೂ ಹುದ್ದೆಗೆ ಅರ್ಜಿ ಆಹ್ವಾನ-Applications are invited for the post of U.R.W. and V.R.W.

SUDDILIVE ||

ಯು.ಆರ್.ಡಬ್ಲ್ಯೂ ಮತ್ತು ವಿ.ಆರ್.ಡಬ್ಲ್ಯೂ ಹುದ್ದೆಗೆ ಅರ್ಜಿ ಆಹ್ವಾನ-Applications are invited for the post of U.R.W. and V.R.W. 

Application, post

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಗ್ರಾಮೀಣ ಪುನರ್ವಸತಿ ಯೋಜನೆಯಡಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಯು.ಆರ್.ಡಬ್ಲ್ಯೂ ಹಾಗೂ ಹೊಸಹಳ್ಳಿಯಲ್ಲಿ ವಿ.ಆರ್.ಡಬ್ಲ್ಯೂ, ಭದ್ರಾವತಿ ತಾಲೂಕಿನ ಗುಡುಮಘಟ್ಟ, ಹನುಮಂತಾಪುರ, ತಡಸ, ಸನ್ಯಾಸಿಕೊಡಮಗ್ಗಿ, ಸಿಮಗನಮನೆ, ಕಲ್ಲಹಳ್ಳಿ, ನಾಗತಿಬೆಳಗಲು, ತೀರ್ಥಹಳ್ಳಿ ತಾಲ್ಲೂಕಿನ ನೊಣಬೂರು, ಹೆದ್ದೂರು, ಹಣಗೆರೆ, ಮೇಲಿನ ಕುರುವಳ್ಳಿ, ಬಾಂಡ್ಯ, ಕುಕ್ಕೆ, ತ್ರಯಂಬಕಪುರ ಮತ್ತು ಕನ್ನಂಗಿ, ಶಿಕಾರಿಪುರ ತಾಲೂಕಿನ ಹೋತನಕಟ್ಟೆ, ಮುಡುಬ ಸಿದ್ದಾಪುರ, ಸಾಗರ ತಾಲೂಕಿನ ಅರಳಗೋಡು, ಯಡೆಹಳ್ಳಿ, ಆಚಾಪುರ ಹಾಗೂ ಹೊಸನಗರ ತಾಲೂಕಿನ ಮೇಲಿನ ಬೇಸಿಗೆ, ಅರಮನೆಕೊಪ್ಪ ಗ್ರಾಮ ಪಂಚಾಯ್ತಿಗಳಲ್ಲಿ ವಿ.ಆರ್.ಡಬ್ಲ್ಯೂ ಹುದ್ದೆಯು ಖಾಲಿಯಿದ್ದು, ಆಯಾ ಗ್ರಾ.ಪಂ/ಹತ್ತಿರದ ಗ್ರಾಮ ಪಂಚಾಯ್ತಿಗಳಲ್ಲಿ ವಾಸವಿರುವ 18 ರಿಂದ 45 ವಯೋಮಿತಿಯೊಳಗಿನ 10 ತರಗತಿ ಪಾಸಾಗಿರುವ ಅರ್ಹ ವಿಕಲಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

 ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಎಂ.ಆರ್.ಡಬ್ಲ್ಯೂ ಗಳಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲಾತಿಗಳನ್ನು *ಲಗತ್ತಿಸಿ ಡಿ.05 ರೊಳಗೆ* ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

 ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಎಂ.ಆರ್. ಡಬ್ಲ್ಯೂ, ಮಲ್ಲಿಕಾರ್ಜುನ್ -9980150110, ಭದ್ರಾವತಿ -ದಿನೇಶ್-7899137243, ತೀರ್ಥಹಳ್ಳಿ-ದಿವಾಕರ್-9480767638, ಶಿಕಾರಿಪುರ-ಹುಚ್ಚರಾಯಪ್ಪ-9741161346, ರವಿಕುಮಾರ್-ಹೊಸನಗರ-9731922693, ಸಾಗರ-ಶ್ಯಾಮ್‌ಸುಂದರ್-9535247757 ಇವರುಗಳನ್ನು ಸಂಪರ್ಕಿಸುವುದು. 

Applications are invited for the post of U.R.W. and V.R.W. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close