ಅಕ್ಕ ಪಡೆ ತಂಡ‌‌ ರಚನೆಗೆ ಮಹಿಳೆಯರಿಂದ ಅರ್ಜಿ‌ಆಹ್ವಾನ-Akka Pade team

SUDDILIVE || SHIVAMOGGA

ಅಕ್ಕ ಪಡೆ ತಂಡ‌‌ ರಚನೆಗೆ ಮಹಿಳೆಯರಿಂದ ಅರ್ಜಿ‌ಆಹ್ವಾನ-Applications are invited from women for the formation of Akka Pade team

Akka, pade


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಅಕ್ಕ ಪಡೆ ತಂಡ ರಚನೆ ಮಾಡಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಈ ತಂಡಕ್ಕೆ ಎನ್ ಸಿ ಸಿ 'ಸಿ' ಪ್ರಮಾಣ ಪತ್ರ ಹೊಂದಿರುವ 5 ಮಹಿಳಾ ಅಭ್ಯರ್ಥಿಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು 35 ರಿಂದ 45 ವರ್ಷದೊಳಗಿನವರಾಗಿದ್ದು, ದೈಹಿಕ ಸದೃಢತೆ ಮತ್ತು ಸ್ಥಳೀಯ ನಿವಾಸಿ ಯಾಗಿರಬೇಕು. ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ 2 ಪಾಳಿ ಆಧಾರದಲ್ಲಿ ಕೆಲಸ ನಿರ್ವಹಿಸಲು ಬದ್ಧರಿರಬೇಕು.    

ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 100 ಅಡಿ ರಸ್ತೆ, ಆಲ್ಕೊಳ ಶಿವಮೊಗ್ಗ ಇವರಿಗೆ ದಿನಾಂಕ:13.11.2025 ರೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08182-295514 ಅಥವಾ  ddwcdshimoga@gmail.com ಸಂಪರ್ಕಿಸಬಹುದಾಗಿದೆ ಎಂದು ಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಭಾರತಿ‌ ಬಣಕಾರ್ ತಿಳಿಸಿದ್ದಾರೆ.

Akka Pade team

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close