ad

ಮಲ್ನಾಡ್ ಅಲಾಯ್ ಫ್ಯಾಕ್ಟರಿಯ ಮಾಲೀಕರು ಮತ್ತು ಸಿಬ್ಬಂದಿಯವರ ನಿರ್ಲಕ್ಷಕ್ಕೆ ಬಲಿಯಾದ್ನಾ ಕಾರ್ಮಿಕ?Are workers victims of the negligence of the owners and staff of Malnad Alloy?

SUDDILIVE || SHIVAMOGGA

ಮಲ್ನಾಡ್ ಅಲಾಯ್ ಫ್ಯಾಕ್ಟರಿಯ ಮಾಲೀಕರು ಮತ್ತು ಸಿಬ್ಬಂದಿಯವರ ನಿರ್ಲಕ್ಷಕ್ಕೆ ಬಲಿಯಾದ್ನಾ ಕಾರ್ಮಿಕ?Are workers victims of the negligence of the owners and staff of Malnad Alloy?

Malnad, alloy

ಅವಳಿ ನಗರ ಶಿವಮೊಗ್ಗ-ಭದ್ರಾವತಿ ನಡುವೆ ಬರುವ ಮಾಚೇನಹಳ್ಳಿಯ ಕೈಗಾರಿಕೆಯಲ್ಲಿರುವ ಫ್ಯಾಕ್ಟರಿಯೊಂದಲ್ಲಿ ನಡೆದ ಘಟನೆಯೊಂದು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಆಗಿ ದಾಖಲಾಗಿದೆ.‌ ಅಸ್ವಭಾವಿಕ ಸಾವೊಂದು (ಯುಡಿಆರ್) ಫ್ಯಾಕ್ಟರಿ ಮಾಲೀಕರ ನಿರ್ಲಕ್ಷಕ್ಕೆ ಕಾರ್ಮಿಕ ಬಲಿಯಾಗಿರುವುದಾಗಿ ಆರೋಪಿಸಿ ದೂರು ದಾಖಲಿಸಲಾಗಿದೆ. 

ಮೊದಲು ಎದೆ ನೋವು ಎಂದು ಮಂಜುನಾಥ್ ಎಂಬ 47 ವರ್ಷದ ಕಾರ್ಮಿಕ ಮಲ್ನಾಡ್ ಅಲಾಯ್ ಫ್ಯಾಕ್ಟರಿಯಲ್ಲಿ ಕಳೆದ 20 ವರ್ಷದಿಂದ ಮೈಂಟನನ್ಸ್ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದರು. ಅ.22 ರಂದು ಶಿವಮೊಗ್ಗದ ಬುದ್ದನಗರದಲ್ಲಿದ್ದ ಮನೆಯಿಂದ ಕೆಲಸಕ್ಕೆ ಫ್ಯಾಕ್ಡರಿಗೆ ಹೋಗಿದ್ದು ಅಲ್ಲಿ ಮೊದಲು ಮಂಜುನಾಥ್ ಕುಸಿದು ಬಿದ್ದು ಅಲ್ಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದಾಗ ವೈದ್ಯರು ಕಾರ್ಮಿಕರ ಸಾವನ್ನ ಖಚಿತಪಡಿಸಿದ್ದಾರೆ.‌   

ಈ ಪ್ರಕರಣ ಭದ್ರಾವತಿ ನ್ಯೂಟೌನ್ ನಲ್ಲಿ ಮೊದಲು ಯುಡಿಆರ್ ಆಗಿ ದಾಖಲಾಗಿತ್ತು. ಮಂಜುನಾಥ ಅವರ ಪತ್ನಿ ಅವರು ಮರಣೋತ್ತರ ದಾಖಲಾತಿಗೆ ಫ್ಯಾಕ್ಟರಿಗೆ ಹೋದಾಗ ಫ್ಯಾಕ್ಟರಿಯವರಿಗೆ ಸಿಸಿ ಟಿವಿ ಫೂಟೇಜ್ ಕೇಳಿದ್ದಾರೆ. ಸಿಸಿ ಟಿವಿ ಫ್ಯೂಟೇಜ್ ನ್ನ ನೀಡಲು ಫ್ಯಾಕ್ಟರಿಯವರು ನಿರಾಕರಿಸಿದ್ದಾರೆ. ಮರಣ ಪ್ರಮಾಣಪತ್ರ ಪಡೆಯಲು ದಾಖಲಾತಿ ಪಡೆದಾಗ ಅದರಲ್ಲಿ ಕರೆಂಟ್ ಶಾಕ್ ಹೊಡೆದು ಸತ್ತಿದ್ದಾರೆ ಎಂದು ದಾಖಲಾತಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ. 

ಇದರಿಂದ ತಕ್ಷಣವೇ ಎಚ್ಚತ್ತುಕೊಂಡ ಮೃತ ಮಂಜುನಾಥ್ ಅವರ ಪತ್ನಿ ಮಲ್ನಾಡ್ ಅಲಾಯ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮಧುಕರ್ ಜೋಯಿಸ್, ಕಾರ್ಯನಿರ್ವಾಹಕ ನಿರ್ದೇಶಕ, ಸಿಇಒ, ನಿರ್ದೇಶಕ, ಮೈನ್ಟೆನನ್ಸ್ ನ ಮ್ಯಾನೇಜರ್ CPTರಕ್ಷಾಧಿಕಾರಿ, ಸೂಪರ್ ವೈಸರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಫ್ಯಾಕ್ಟರಿಯಲ್ಲಿ ಮಂಜುನಾಥ್ ಗೆ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ ವಹಿಸಿದ ಕಾರಣ ಸಾವಾಗಿದೆ ಮೋಟಾರ್ ರಿಪೇರಿ ವೇಳೆ ಕರೆಂಟ್ ಹೊಡೆದು ಸಾವಾಗಿದೆ ಎಂದು 7 ಜನರ ವಿರುದ್ಧ ದೂರು ದಾಖಲಾಗಿದೆ. 

ಮೃತ ಮಂಜುನಾಥ ಕರೆಂಟ್ ಶಾಕ್ ನಿಂದ ಸಾವನ್ನಪ್ಪಿದರೂ ಎದೆನೋವಿನಿಂದ ಸಾವಾಗಿದೆ ಎಂದು ಫ್ಯಾಕ್ಟರಿಯವರು ಸುಳ್ಳು ಹೇಳಿದ್ದಾರೆ. ಸಿಸಿಟಿವಿ ಫೂಟೇಜ್ ಕೇಳಿದರೂ ಕೊಡಲು ನಿರಾಕರಿಸಿದ್ದಾರೆ. ನನ್ನ ಮನೆಯ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಮೃತ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.‌

Are workers victims of the negligence of the owners and staff of Malnad Alloy?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close