ವೀಲಿಂಗ್ ಮಾಡುದ್ರೆ ಹುಡ್ಗೀರು ಬೀಳಬೇಕಾ? ದಂಡ ಬೀಳಬೇಕಾ?Should two wheeler get a fine for wheeling

 SUDDILIVE || SHIVAMOGGA

ವೀಲಿಂಗ್ ಮಾಡುದ್ರೆ ಹುಡ್ಗೀರು ಬೀಳಬೇಕಾ? ದಂಡ ಬೀಳಬೇಕಾ?Should two wheeler get a fine for wheeling

Wheeling, fine


ಕಸ್ತೂರಬಾ ಕಾಲೇಜು ರಸ್ತೆಯಲ್ಲಿ ವೀಲಿಂಗ್ ಹುಚ್ಚಾಟ ಮುಂದು ವರೆದಿದೆ. ಹುಡುಗಿಯರನ್ನ ಮೆಚ್ಚಿಸಲಿಕ್ಕೆ ಈ ವೀಲಿಂಗ್ ಮಾಡಲಾಗಿದ್ದು ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಬೈಕ್ ವೀಲಿಂಗ್ ನ್ನ ಪದೇ ಪದೇ ಮಾಡಿದ್ದಾರೆ.

ಕಸ್ತೂರಬಾ ಕಾಲೇಜು, ಸಿಟಿ ಕ್ಲಬ್ ಮತ್ತು ಶಿವಪ್ಪ ನಾಯಕನ ವೃತ್ತದಿಂದ ವೀರಶೈವ ಕಲ್ಯಾಣ ಮಂದಿರ ಬಳಿ ಸೇರುವ ಮೂರು ಜಾಗದಲ್ಲಿ (ಪಾಲಿಕೆ ಮುಂಭಾಗ) ನಾಲ್ಕೈದು ಶಾಲಾ ಬಾಲಕಿಯರು ನಿಂತಿದ್ದರು.  ಬಾಲಕಿಯರ ಮುಂದೆ ಬೈಕ್ ನಲ್ಲಿ ವೀಲಿಂಗ್ ಮಾಡಿದವರೂ ಸಹ ಅಪ್ರಾಪ್ತರಿರಬಹುದು. ಒಂದು ವೇಳೆ ವೀಲಿಂಗ್ ಮಾಡಿದವರೂ ಅಪ್ರಾಪ್ತರಾಗಿದ್ದರೆ ಸಂಚಾರಿ ನಿಯಮದ ಪ್ರಕಾರ ಬೈಕ್ ಮಾಲೀಕರಿಗೆ ಡಬಲ್ ದಂಡ ಮತ್ತು ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ. 

ಪಾಲಿಕೆ ಮುಂಭಾಗಕ್ಕೆ  ಇಬ್ಬರು ದ್ವಿಚಕ್ರವಾಹನದಲ್ಲಿ ಬಂದು ಪದೇ ಪದೇ ವೀಲಿಂಗ್ ಮಾಡಿದ್ದಾರೆ. ವೀಲಿಂಗ್ ಗೆ ಹುಡುಗೀಯರು ಬೀಳ್ತಾರಾ ಅಥವಾ ದಂಡ ಬೀಳಿತ್ತೋ ಎಂಬುದೆ ಅರಿಯದಂತಾಗಿದೆ. ವೀಲಿಂಗ್ ಗೆ ದಂಡವಿದೆ ಎಂಬುದು ಗೊತ್ತಿದ್ದೂ ಹಾಗೆ ಮಾಡುದ್ರಾ ಅಥವಾ ಗೊತ್ತಿಲ್ಲದೆ ಚಮ್ಕಾಯಿಸಲು ಮಾಡುದ್ರಾ ಎಂಬುದು ಪ್ರಶ್ನೆಯಾಗಿ ಉಳಿದಿದೆ. 


ಈ ಹಿಂದೆಯಿದ್ದ ಪಿಎಸ್ಐ ಯೊಬ್ಬರು ವೀಲಿಂಗ್ ಮಾಡಿದವರ ದಂಡ ಪೀಕಿಸಿದ್ದೇ ದೊಡ್ಡ ಪ್ರಚಾರವನ್ನ ಗಿಟ್ಟಿಸಿಕೊಂಡಿದ್ದಿದೆ. ಈಗ ಆ ಪಿಎಸ್ಐ ಸಧ್ಯಕ್ಕೆ ಬೇರೆ ಠಾಣೆಗೆ ವರ್ಗವಾಗಿದ್ದಾರೆ. ಪುರುಸೋತ್ತು ಸಿಕ್ಕಾಗ ಆ ಠಾಣೆಯಲ್ಲಿ ಪಿಎಸ್ಐ ಮಾಡುವ ಅವಾಂತರದ ಬಗ್ಗೆಯೂ ಲೇಖನ ಬರೆಯಲಾಗುವುದು.  ಎನಿವೇ... ಪ್ರಚಾರದಲ್ಲಿ ಮುಳುಗುವ ಬದಲು ಪೊಲೀಸರು ಇಂತಹವರಿಗೆ ದಂಡ ಹಾಕಿಸಬೇಕು. ಸಾಧ್ಯವಾದರೆ ಬಿಗಿ ಕಾನೂನು ಕ್ರಮ ಜರುಗಿಸಬೇಕು. ಅಪ್ರಾಪ್ತರಾಗಿದ್ದರೆ ಬೈಕ್ ಮಾಲಿಕರೆ ನ್ಯೂಯಿರ್ ಗಿಫ್ಟ್ ನೀಡಬೇಕು. ಇದರಿಂದ ಇತರೆ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು. 

ಕಾಲೇಜು ಶಾಲೆ ಬಿಡುವ ವೇಳೆ ಪೊಲೀಸ್ ಬೀಟ್ ಹೆಚ್ಚಿಸಿದರೆ ಅದರಲ್ಲೂ, ಡಿವಿಎಸ್, ಕಸ್ತೂರಬಾ ಕಡೆ ಚೀತಾಗಳು ಓಡಾಡಿದರೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇಂತಹ ಪುಂಡಪೋಕರಿಗಳಿಂದ ಮುಕ್ತಿ ಸಿಗಬಹುದು. ದಕ್ಷ ಸಿಪಿಐ ದೇವರಾಜ್ ಸಾರ್ ಇತಂತಹ ಪುಂಡಪೋಕರಿಗಳನ್ನ ನಿಯಂತ್ರಿಸುತ್ತಾರೆ ಎಂಬ ಭರವಸೆಯೊಂದಿಗೆ ಈ ಸುದ್ದಿಗೆ ವಿರಾಮ ಇಡುತ್ತಿದ್ದೇವೆ. 

Should two wheeler get a fine for wheeling

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close