ರಂಗಮಂದಿರದಲ್ಲಿ ನಡೆದ ಕಲಾ ಪ್ರತಿಭೋತ್ಸವ

 SUDDILIVE || SHIVAMOGGA

ರಂಗಮಂದಿರದಲ್ಲಿ ನಡೆದ ಕಲಾ ಪ್ರತಿಭೋತ್ಸವ-Art festival held at the Kuvempu Rangamandira

Kuvempu, festival


ಜಿಲ್ಲೆಯಲ್ಲಿನ ಮಕ್ಕಳಿಂದ ಹಿಡಿದು ಯುವಕರವರೆಗೆ ವಿವಿಧ ವಯೋಮಾನದವರಲ್ಲಿ ಅಡಗಿರುವ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಕ್ಟೋಬರ್ ೩೧ರ ವರೆಗೆ ಕಲಾ ಪ್ರತಿಭೋತ್ಸವಕ್ಕೆ ಅರ್ಜಿ ಆಹ್ವಾನಿಸಿ, ನೋಂದಣಿ ಮಾಡಿಕೊಳ್ಳಲಾಗಿತ್ತು. ಒಟ್ಟು ೧೫೦ ಜನ ನೋಂದಣಿ ಮಾಡಿಕೊಂಡಿದ್ದರು.

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಲಾ ಪ್ರತಿಭೋತ್ಸವಕ್ಕೆ ನ್ಯಾಯಾಧೀಶ ಎಂ.ಎಸ್.ಸಂತೋಷ್ ಚಾಲನೆ ನೀಡಿ, ಸ್ಪರ್ಧಿಗಳಿಗೆ ಶುಭ ಕೋರಿದರು.

ಸ್ಪರ್ಧೆಯನ್ನು ಬಾಲ ಪ್ರತಿಭೆ, ಯುವ ಪ್ರತಿಭೆ, ಕಿಶೋರ ಪ್ರತಿಭೆ ಎಂದು ವಿಂಗಡಿಸಿ ೬-೧೩, ೧೪-೧೮, ೧೮-೩೦ ವಯೋಮಾ ನದವರ ಪ್ರತಿಭೆಗೆ ವೇದಿಕೆ ಕಲ್ಪಿಸಲಾಗಿತ್ತು. ವೈಯಕ್ತಿಕ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಪರ್ಧಾರ್ಥಿಗಳು ನೃತ್ಯ, ಹಾಡುಗಾರಿಕೆ, ಸುಗಮ ಸಂಗೀತ, ಹಿಂದುಸ್ತಾನಿ, ಕರ್ನಾಟಿಕ್, ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಆಶುಭಾಷಣ, ಶಾಸ್ತ್ರೀಯ ನೃತ್ಯ, ಸಮೂಹ ಸ್ಪರ್ಧೆಯಲ್ಲಿ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಈ ಕಲಾ ಪ್ರತಿಭೋತ್ಸವದಲ್ಲಿ ಆಯ್ಕೆಯಾದ ಮೊದಲ ಎರಡು ಸ್ಥಾನದ ವಿಜೇತರು ವಲಯ ಮಟ್ಟದಲ್ಲಿ ತಮ್ಮ ಪ್ರತಿಭೆ ಅ ನಾವರಣ ಮಾಡಲಿದ್ದಾರೆ. ಹೀಗೆ ಉತ್ತಮ ಪ್ರದರ್ಶನ ನೀಡುತ್ತಾ ಸಾಗಿದವರು ವಿವಿಧ ಹಂತಗಳನ್ನು ದಾಟಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ರಾಜ್ಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದವರು ನಗದು ಬಹುಮಾನವನ್ನು ಪಡೆಯಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಅಭಿಷೇಕ್, ಡಿಡಿಪಿಐ ಚಂದ್ರಪ್ಪ, ಯುವಸಬಲೀಕರಣದ ರೇಖ್ಯನಾಯ್ಕ ಮೊದಲಾದವರು ಉಪಸ್ಥಿತರಿದ್ದರು. 150 ಕಲಾಪ್ರತಿಭೆಗಳು ಭಾಗಿಯಾಗಿದ್ದರು. 

Art festival held at the Kuvempu Rangamandira

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close