ರಾಜ್ಯದ ಐದು ಜಿಲ್ಲೆಗಳಲ್ಲಿ ಸ್ಟ್ಯೂಡಿಯೋ ನಿರ್ಮಾಣ-ಮಹಬೂಬ್ ಪಾಷ-Studios will be built in five districts of the state - Mahbub Pasha

SUDDILIVE || SHIVAMOGGA

ರಾಜ್ಯದ ಐದು ಜಿಲ್ಲೆಗಳಲ್ಲಿ ಸ್ಟ್ಯೂಡಿಯೋ ನಿರ್ಮಾಣ-ಮಹಬೂಬ್ ಪಾಷ-Studios will be built in five districts of the state - Mahbub Pasha      

Studios, pasha


2024 ರಲ್ಲಿ ಸರ್ಕಾರ ಕಂಠೀರವ ಸ್ಟ್ಯೂಡಿಯೋಗೆ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಜವಬ್ದಾರಿ ನೀಡಿದ ನಂತರ ನವಂಬರ್ ನಲ್ಲಿ ಒಟಿಟಿ ಬಿಡುಗಡೆಗೆ ಪತ್ರಬರೆದಿದ್ದೆ. ಈಗ ಅದುಸರ್ಕಾರದ ಕಾರ್ಯಕ್ರಮವಾಗಿದೆ ಎಂದು ಕಂಠೀರವ ಸ್ಟ್ಯೂಡಿಯೋದ ಅಧ್ಯಕ್ಷ ಮಹಬೂಬ್ ಪಾಷ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಮಿಟಿರಚನೆಯಾಗಿದೆ. ನಾನು ಸಮಿತಿಯ ಸದಸ್ಯನಾಗಿದ್ದೆ ಕನ್ನಡವನ್ನು ಉಳಿಸುವ ಕೆಲಸವಾಗಿದೆ. ಜಾಗತೀಕರಣದಲ್ಲಿ ಕನ್ನಡ ಕಂಟೆಂಟ್ ತೆರದುಕೊಂಡ ಪರಿಣಾಮ ಭಾಷೆ ಇಡಿ ಜಗತ್ತಿಗೆ ತೆರೆದುಕೊಂಡಿದೆ. ಕನ್ಬಡ ಕಂಟೆಂಟ್ ನ ಚಿ ಬೇಡಿಕೆಯಿದೆ. ಒಟಿಟಿಗೆ ಬಜೆಟ್ ನಲ್ಲಿ 5 ಕೋಟಿ ಹಣ ಬಿಡುಗಡೆಯಾಗಿದೆ ಎಂದರು.

ರಾಜ್ಯದ ಬೇರೆ ಬೇರೆ ಊರುಗಳಲ್ಲಿ ಸ್ಟ್ಯೂಡಿಯೋ ತೆರೆಯಲು ಯೋಜಿಸಲಾಗಿದೆ. ಸ್ಥಳೀಯ ಪ್ರತಿಭೆ ಇದ್ದರೂ ಅದಕ್ಕೆ ಸೂಕ್ತ ವೇದಿಕೆಯಿಲ್ಲವಾಗಿದೆ. 300 ಕಿಮಿ ದೂರ ಬೆಂಗಳೂರಿಗೆ ಬರಬೇಕಿದೆ. ಕಂಠೀರವ ಸ್ಟ್ಯೂಡಿಯೋ ವಿಸ್ತರಣಕ್ಕಾಗಿ ಐದು ಜಿಲ್ಲೆಯ ಡಿಸಿಗೆ ಅನುಪಯುಕ್ತ ಭೂಮಿಯನ್ನ 25 ಎಕರೆ ಜಾಗ ಕೊಡಲು ಪತ್ರಬರೆದಿರುವೆ. ಜಾಗ ಸಿಕ್ಕೆರೆ ಸ್ಥಳೀಯ ಪ್ರತಿಭೆಯ ಜೊತೆಗೆ ಸ್ಟೂಡಿಯೋ ವನ್ನ ಹೊರಂಗಣ ಚಿತ್ರೀಕರಣ ಮಾಡಲು ಅವಕಾಶವಾಗಲಿದೆ. 

ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ದಾವಣಗೆರೆ ಹೊಸಪೇಟೆ, ಸೇರಿ ಐದು ಕಡೆ ಜಾಗ ಕೇಳಿರುವೆ. ನ.12ಕ್ಕೆ ಡಿಸಿಗೆ ಪತ್ರಬರೆದಿರುವೆ. ಯಾವ ಜಿಲ್ಲೆಯವರು ಮುಂದೆ ಬರುತ್ತಾರೋ ಅಲ್ಲಿಸ್ಟೂಡಿಯೋ ಮಾಡಲಾಗುವುದು. ಮೈಸೂರಿನಲ್ಲಿ 160 ಎಕರೆ ಭೂಮಿಯಲ್ಲಿ ರಾಮೋಜಿ ಫಿಲಂಸಿಟಿ ಮಾದರಿಯಲ್ಲಿ ಫಿಲಂಸಿಟಿ ನಿರ್ಮಿಸಲಾಗುತ್ತಿದೆ ಎಂದರು.

Studios will be built in five districts of the state - Mahbub Pasha

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close