ಪೊಲೀಸ್ ಮಕ್ಕಳ ಕ್ರೀಡಾಕೂಟ-Police Children's Games

SUDDILIVE || SHIVAMOGGA

ಪೊಲೀಸ್ ಮಕ್ಕಳ ಕ್ರೀಡಾಕೂಟ-Police Children's Games  

Police, Games

ದಿನಾಂಕ: 23-11-2025 ರಂದು ಬೆಳಿಗ್ಗೆ  ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ  “ಪೊಲೀಸ್ ಮಕ್ಕಳ ಕ್ರೀಡಾಕೂಟ” ದ ಉದ್ಘಾಟನಾ ಸಮಾರಂಭವನ್ನು ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು. 

ಮಿಥುನ್ ಕುಮಾರ್ ಜಿ ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಸದರಿ ಕ್ರೀಡಾಕೂಟವನ್ನು ಉದ್ಘಾಟಿಸಿರುತ್ತಾರೆ, ನಂತರ ಕ್ರೀಡಾಕೂಟದಲ್ಲಿ ಭಾಗವಹಿಸಲು ಉತ್ಸಕರಾದ ಮಕ್ಕಳನ್ನುದ್ದೇಶಿಸಿ ಮಾತನಾಡಿದ್ದು, ಮಕ್ಕಳಿಗೆ ಸಿಹಿಯನ್ನು ಹಂಚುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿರುತ್ತಾರೆ.


ಸದರಿ ಪೊಲೀಸ್ ಮಕ್ಕಳ ಕ್ರೀಡಾಕೂಟದಲ್ಲಿ ಕಪ್ಪೆ ಜಿಗಿತಸ್ಪರ್ಧೆ , ಓಟದ ಸ್ಪರ್ಧೆ, ಬಕೆಟ್ ಗೆ ಬಾಲ್ ಎಸೆಯುವ ಸ್ಪರ್ಧೆ, ಹಿಟ್ ದಿ ವಿಕೆಟ್ ಸ್ಪರ್ಧೆ, ಗುಂಡು ಎಸೆತ ಸ್ಪರ್ಧೆ ಹಾಗೂ ಸ್ಲೋ ಸೈಕಲ್ ರೇಸ್ ಸ್ಪರ್ಧೆಗಳನ್ನೂ ಮಕ್ಕಳ ವಯೋಮಿತಿಯಂತೆ ನಡೆಸಲಾಯಿತು. ಪ್ರತಿಯೊಂದು ಸ್ಪರ್ಧೆಯಲ್ಲಿ  ಭಾಗವಹಿಸಿ ವಿಜೇತರಾದ ಮಕ್ಕಳಿಗೆಲ್ಲಾ ವಿಶೇಷ ಬಹುಮಾನಗಳ ನೀಡಿ ಪ್ರೋತ್ಸಾಹಿಸಲಾಯಿತು.

 ಈ ಸಂದರ್ಭದಲ್ಲಿ  ಹೆಚ್ಚುವರಿ ಪೊಲೀಸ್ ಅಧಿಕಾರಿ ರಮೇಶ್ ಕುಮಾರ್,  ದಿಲೀಪ್, ಪೊಲೀಸ್ ಉಪಾಧೀಕ್ಷಕರು, ಡಿಎಆರ್ , ಸೋಮಶೇಖರ್, ಆರ್ ಪಿಐ , ಇತರೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು  ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close