SUDDILIVE || SHIVAMOGGA
ಬದಲೀ ಮಾರ್ಗದಲ್ಲಿ ಚಲಿಸದ ವಾಹನಸವಾರರು, ಡಿಸಿ ಆದೇಶಕ್ಕೆ ಕಿಮ್ಮತ್ತಿಲ್ಲ-Motorists who do not use alternate routes are not amenable to DC's order
ಶಿವಮೊಗ್ಗದಲ್ಲಿ ಡಿಸಿ ಆದೇಶಕ್ಕೇ ಕಿಮ್ಮತ್ತು ಇಲ್ಲದಂತಾಗಿದೆ. ಹೊನ್ನಾಳಿ ಫ್ಲೈ ಓವರ್ ಬಳಿ ರಸ್ತೆ ಬಂದ್ ಮಾಡಿ ಬದಲೀ ಮಾರ್ಗಕ್ಕೆ ಆದೇಶಿಸಿದರೂ ಈ ರಸ್ತೆಯಲ್ಲಿ ಟ್ರಾಫಿಕ್ ಜ್ಯಾಮ್ ಆಗುವಂತೆ ದ್ವಿಚಕ್ರವಾಹನ, ಬಸ್ ಗಳು ಲಾರಿಗಳು ಓಡಾಡುತ್ತಿವೆ.
ಶಿವಮೊಗ್ಗದ ಹೊನ್ನಾಳಿ ರಸ್ತೆಯ ಚೌಡಮ್ಮ ದೇವಸ್ಥಾನದ ಮುಂಭಾಗದಲ್ಲಿ ರಸ್ತೆಗಳು ಅಧಿಕ ಗುಂಡಿ ಬಿದ್ದು ಅಧಿಕ ಧೂಳು ಉಂಟಾಗುತ್ತಿದ್ದರಿಂದ ಸ್ಥಳೀಯರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತ ಪೆಇಸಿದ ಪರಿಣಾಮ ಇಲ್ಲಿ ರಸ್ತೆಗೆ ಟಾರ್ ಹಾಕಲು ಪಿಡಬ್ಲೂಡಿ ಮುಂದಾಗಿದೆ.
ಈಗ ಈ ರಸ್ತೆಗೆ ಬದಲೀ ಮಾರ್ಗ ಸೂಚಿಸಿ ಡಿಸಿ ಆದೇಶಿಸಿದ್ದಾರೆ. ಆದರೆ ಈ ಆದೇಶಕ್ಕೆ ಕಿಮ್ಮತ್ತಿಲ್ಲದಂತಾಗಿದೆ. ಎಲ್ಲಾ ವಾಹನಗಳು ರಿಪೇರಿ ಮಾಡುತ್ತಿರುವ ಪಕ್ಕದಲ್ಲಿಯೇ ಸಣ್ಣ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಸಿಬ್ಬಂದಿಗಳನ್ನ ನಿಲ್ಲಿಸಿ ಬದಲೀ ಮಾರ್ಗಕ್ಕೆ ವಾಹನಗಳು ಹೋಗಲು ಸೂಚಿಸಬೇಕು. ಆ ಕೆಲಸಗಳು ಆದಗೆ ಇರುವ ಹಿನ್ನಲೆಯಲ್ಲಿ ಇದೇ ಮಾರ್ಗದಲ್ಲಿ ಜನನೂಕು ನುಗ್ಗಲಿಗೆ ಇಳಿದಿದ್ದಾರೆ.
Motorists who do not use alternate routes are not amenable to DC's order
