ಪ್ರಸ್ತುತ ರಾಜ್ಯ ರಾಜಕಾರಣವನ್ನ ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ-ಬಿಎಸ್ ವೈ-BJP is closely monitoring current state politics - BSY

 SUDDILIVE || SHIVAMOGGA

ಪ್ರಸ್ತುತ ರಾಜ್ಯ ರಾಜಕಾರಣವನ್ನ ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ-ಬಿಎಸ್ ವೈ-BJP is closely monitoring current state politics - BSY


Bjp, monitoring

ಸಿಎಂ ಕುರ್ಚಿ ಗಲಾಟೆಯ ನಡುವೆ ನಗರದಲ್ಲಿ ಮಾಜಿ ಸಿಎಂ‌ ಬಿಎಸ್ ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ರಾಜ್ಯ ರಾಜಕಾರಣವನ್ನ ಸೂಕ್ಷ್ಮವಾಗಿ ಬಿಜೆಪಿ ಗಮನಿಸುತ್ತಿದೆ ಎಂದು ಹೇಳಿದ್ದಾರೆ.

ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುರ್ಚಿ ಕಿತ್ತಾಟ ಕಾಂಗ್ರೆಸ್ ನ ಸಮಸ್ಯೆಯಾಗಿದೆ. ಈ ಕುರ್ಚಿ ಕಿತ್ತಾಟದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಜನರ ಆಶೀರ್ವಾದಕ್ಕೆ ಕಾಂಗ್ರೆಸ್ ಸರಿಯಾಗಿ ಆಡಳಿತ ನೀಡುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಜನಪಾಠ ಕಲಿಸುತ್ತಾರೆ ಎಂದರು.

ಸರ್ಕಾರ ಸಧ್ಯಕ್ಕೆ ಪಥನವಾಗುವಂತೆ ಕಾಣಿಸುತ್ತಿಲ್ಲ. ಮಾಜಿ ಸಿಎಂ ಸದಾನಂದ ಗೌಡರು ಸರ್ಕಾರ ಪಥನವಾಗಲಿದೆ ಬಿಜೆಪಿ ಅಧಿಕಾರಕ್ಕೆ ಬಂದರೂ ಬರಬಹುದು ಎಂದು ಹೇಳಿರುವ ಹೇಳಿಕೆಗೆ ನನ್ನ ಸಹಮತವಿಲ್ಲ. ಆದರೆ ರಾಜ್ಯ ರಾಜಕಾರಣ ಗೊಂದಲದಲ್ಲಿರುವುದಂತೂ ಸತ್ಯ ಯಾವುದಕ್ಕೂ ಕಾದು ನೋಡೋಣ ಎಂದರು.

ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀಗಳು ಸಹ ಡಿಕೆಶಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯಕ್ಕೆ ನನ್ನ ಯಾವುದೇ ಆಕ್ಷೇಪಣೆ ಇಲ್ಲ. ಅವರ ಅದು ಸ್ವಂತ ಅಭಿಪ್ರಾಯವಾಗಿದೆ ಎಂದರು. ಕಾಂಗ್ರೆಸ್ ನಲ್ಲಿದ್ದ ಡಿಕೆಶಿಗೆ ನೀವೇ ಒಮ್ಮೆ ಅಧಿವೇಶನದಲ್ಲಿ ಸಿಎಂ ಆಗೊಲ್ಲ ಎಂದು ಹೇಳಿದ್ರಿ ಎಂಬ ಮಾಧ್ಯಮಗಳ ಪ್ರಶ್ನಗೆ ನಗುಮುಖದಿಂದ ಪ್ರತಿಕ್ರಿಯಿಸದೆ ಬಿಎಸ್ ವೈ ಹೊರ ನಡೆದಿದ್ದಾರೆ.

ಬೆಳಗಾವಿಯಲ್ಲಿ ಅಧಿವೇಶನ ಆರಂಭವಾಗಲಿದೆ. ಬಿಜೆಪಿಯ ಶಾಸಕರೆಲ್ಲಾ ಭಾಗಿಯಾಗಲಿದ್ದಾರೆ. ರೈತರ ಸಮಸ್ಯೆ ಮಾತ್ರವಲ್ಲ ಎಲ್ಲಾ ಸಮಸ್ಯೆ ಬಗೆಹರಿಸಲು ರಾಜ್ಯ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಪುನರುಚ್ಚರಿಸಿದ್ದಾರೆ. 

BJP is closely monitoring current state politics - BSY


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close