ದಾಂಡೇಲಿಗೆ ಸಕ್ರೆಬೈಲಿನಿಂದ ಮತ್ತೆರಡು ಆನೆ ರವಾನೆ, ಮಾವುತರ, ಕಾವಾಡಿಗಳ ಕಣ್ಣೀರಿಗೆ ಬೆಲೆ ಇಲ್ಲವೆ?- Two more elephants were sent from Sakrebail to Dubare

 SUDDILIVE || SHIVAMOGGA

ದಾಂಡೇಲಿಗೆ ಸಕ್ರೆಬೈಲಿನಿಂದ ಮತ್ತೆರಡು ಆನೆ ರವಾನೆ, ಮಾವುತರ, ಕಾವಾಡಿಗಳ ಕಣ್ಣೀರಿಗೆ ಬೆಲೆ ಇಲ್ಲವೆ?Two more elephants were sent from Sakrebail to Dubare, aren't the tears of the elephants and the Kavadis worth it?


Elephant, sakrebailu


ಸಕ್ರೆಬೈಲಿನ ಆನೆ ಬಿಡಾರದಲ್ಲಿ ಆನೆಗಳನ್ನ ಹೊರಗಡೆ ಕಳುಹಿಸುವುದರಲ್ಲೇ ಅಧಿಕಾರಿಗಳು ಕಾಲಕಳೆಯುತ್ತಿದ್ದಾರಾ? ಅಥವಾ ನಿರ್ವಹಣೆ ಮಾಡುವಲ್ಲಿ ಸಾಧ್ಯವಾಗುತ್ತಿಲ್ಲವಾ ಎಂಬ ಚರ್ಚೆಗಳು ಆರಂಭವಾಗಿದೆ. 

ಶಿವಮೊಗ್ಗದ ಆನೆ ಬಿಡಾರದಲ್ಲಿ ಆನೆಗಳ ನಿರ್ವಹಣೆ ಆಗುತ್ತಿಲ್ಲದ ಹಿನ್ನಲೆಯಲ್ಲಿ ಆನೆಗಳನ್ನ ಬೇರೆಡೆ ಕಳುಹಿಸಲಾಗುತ್ತಿದೆಯಾ ಎಂಬ ಅನುಮಾನ ಆರಂಭವಾಗಿದೆ. ಧನುಷ್ ಮತ್ತು ಆಲೆ ಎಂಬ ಎರಡು ಆನೆಗಳನ್ನ ದಾಂಡೇಲೆಗೆ ಕಳುಹಿಸಲಾಗಿದೆ. ಇದರಿಂದ ಮಾವುತ ಮತ್ತು ಕಾವಾಡಿಗರ ಕುಟುಂಬಸ್ಥರು ಕಣ್ಣೀರು ಹಾಕುತ್ತಿದೆ.


ಧನುಷ್ ಮತ್ತು ಆಲೆ ಆನೆಯನ್ನ ಬಾಲು ಮತ್ತು ಗೌಸ್ ಎಂಬುವರು ನೋಡಿಕೊಳ್ಳುತ್ತಿದ್ದರು. ದಾಂಡೇಲಿಗೆ ಹೋಗುತ್ತಿರುವ ಹಿನ್ನಲೆಯಲ್ಲಿ  ಮಾವುತ ಮತ್ತು ಅವರ ಕುಟುಂಬನೇ ಬೇಸರವಾಗಿದೆ. ಕಣ್ಣೀರು ಹಾಕಿದ್ದಾರೆ. ಆನೆಗಳಿಗೂ ಮತ್ತು ಮಾವುತರ ನಡುವಿನ ಸಂಬಂಧವೇ ಅಂತಹದ್ದು, ಸಾಕಾನೆ ಆಲೆಯನ್ನ  ಗೌಸ್ ಎಂಬುವರು 15-20 ವರ್ಷದಿಂದ ನೋಡಿಕೊಳ್ಳುತ್ತಿದ್ದರು. 

ಮಗುವಿನಂತಹ ಆರೈಕೆಯನ್ನ ಮಾಡಿ ಹೆಣ್ಣು ಮಗಳನ್ನ ಗಂಡನ ಮನೆಗೆ ಬಿಟ್ಟಂತಹ ಅನುಭವ ಈಗ ಮಾವುತ ಮತ್ತು ಕಾವಾಡಿಗರಲ್ಲಿದೆ. ಇಂತಹ ನೋವುಗಳು ನಾಲ್ಕು ಗೋಡೆಗಳ ಮಧ್ಯೆ ಕಾನೂನು ರೂಲ್ಸ್ ಮಾಡುವ ಅಧಿಕಾರಿಗಳಿಗೆ ಆ ಸೂಕ್ಷ್ಮತೆಯಿಲ್ಲವಲ್ಲ ಎಂಬುದೆ ಸಾರ್ವಜನಿಕರ ಪ್ರಶ್ನೆಯಾಗಿದೆ. 

ಮಾವುತ ಕಾವಾಡಿಗರು ಎರಡು ತಿಂಗಳು ದಾಂಡೇಲಿಯಲ್ಲಿ ಇದ್ದು ಬೇರೆಯವರಿಗೆ ಹಸ್ತಾಂತರಿಸಿ ಬರುವುದರಿಂದ ಗಂಡನ ಮನೆಗೆ  ಮಗಳನ್ನ ಧಾರೆಯೆರೆದಿರುವ ಭಾವನೆ ಇಲ್ಲಿ ಭಾಸವಾಗುತ್ತದೆ ಎಂದು ಮಾವುತರು ಮತ್ತು ಕಾವಾಡಿಗರು ತಮ್ಮ‌ನೋವನ್ನ ತೋಡಿಕೊಂಡಿದ್ದಾರೆ. 


ಇದು ಮೊದಲಲ್ಲ


ಈ ಹಿನ್ನಲೆಯಲ್ಲಿ ಸಕ್ರೆಬೈಲಿನಲ್ಲಿ ಈ ಎರಡೂ ಆನೆಯನ್ನ‌ ಕಳುಹಿಸುವ ಮುಂಚೆ 25 ಸಾಕಾನೆಗಳಿದ್ದವು. ಈಗ 23ಕ್ಕೆ ಕುಸಿದಿದೆ. ಇದೇ ಮೊದಲ ಬಾರಿಗೆ ಈ ಆನೆಗಳನ್ನ ಕಳುಹಿಸಲಾಗುತ್ತಿಲ್ಲ. ಮೊನ್ನೆ, ಮೊನ್ನೆ ಅಭಿಮನ್ಯು ಮತ್ತು  ಕೃಷ್ಣ ಆನೆಯನ್ನ  ದುಬಾರೆ ಮತ್ತು  ಆಂದ್ರಕ್ಕೆ ಕಳುಹಿಸಲಾಗಿದೆ. 

2023-24 ರಲ್ಲಿ ಸೂರ್ಯ ಮತ್ತು ಶಿವ ಎಂಬ ಎರಡು ಆನೆಗಳನ್ನ ಹೊರರಾಜ್ಯಕ್ಕೆ ಬಿಟ್ಟು ಬರಲಾಯಿತು. ಅದರ ಬೆನ್ನಹಿಂದೆ  ಹೇಮಾವತಿ ಎಂಬ ಹೆಣ್ಣಾನೆಯನ್ನ  ದುಬಾರೆಗೆ ಕಳುಹಿಸಲಾಗಿದೆ. ದುಬಾರೆಯಲ್ಲಿ ಆನೆಗಳನ್ನ ಸಾಕಲು ಸಾಧ್ಯವಾದರೆ ಶಿವಮೊಗ್ಗದ ಸಕ್ರೆಬೈಲಿಗೆ ಏನು ಗರ ಬಡೆದಿದೆ ಎಂಬುದನ್ನ ಬೆನ್ನು ಹತ್ತಿ ಪರಿಶೀಲಿಸಿದರೆ ಸಕ್ರೆಬೈಲಿನಲ್ಲಿ  ನಿರ್ವಾಹಣೆ ಸಮಸ್ಯೆಯಿದೆಯಾ ಎಂಬ ಅನುಮಾನವೂ ಸಹ ಕಾಡಲಾರಂಭಿಸಿವೆ.‌ 


ಸಂಖ್ಯೆಗಳು ಕುಸಿತ


ಕಿವಿ ಕತ್ತರಿಸಿದ ಬಾಲಣ್ಣ ಇನ್ನೂ ಹುಷಾರಾಗಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಬಂದ ಹಿನ್ನಲೆಯಲ್ಲಿ ಬಾಲಣ್ಣ ಇದುವರೆಗೆ ಬದುಕಿದ್ದಾನೆ ಎಂದರೆ ಅಚ್ಚರಿ ಪಡುವಂತಿಲ್ಲ. ಈ ಆರೋಪ ಎಲ್ಲೋ ಒಂದು ಕಡೆ ಸತ್ಯನೂ ಇರಬಹುದೆ ಎನಿಸುತ್ತದೆ.  ಆರಂಭದಲ್ಲಿ ಸಕ್ರೆಬೈಲಿನಲ್ಲಿ 52 ಸಾಕಾನೆಗಳಿದ್ದವು. ಒಂದಿಷ್ಟು ಆನೆಗಳು ಬಾಲಣ್ಣನ ರೀತಿಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದರೆ ಒಂದಿಷ್ಟು ಆನೆಗಳನ್ನ ದುಬಾರೆ, ಪಬಾರೆಗಳಿಗೆ ಕಳುಹಿಸಿ ಬಿಡಾರದಲ್ಲಿ ಆನೆಗಳ ಸಂಖ್ಯೆಯನ್ನ ಕಡಿಮೆ ಮಾಡಲಾಗಿದೆ. 

ಹಣವಿಲ್ಲವೆಂದು ಸರ್ಕಾರ ಘೋಷಿಸಲಿ

ಒಂದು ನೆನಪಿರಲಿ, ಸಕ್ರೆಬೈಲಿನಲ್ಲಿ ಪ್ರವಾಸಿಗರಿಂದ ಅದೂ ಭಾನುವಾರ ಒಂದೇ ದಿನ ಆನೆ ಬಿಡಾರೆಕ್ಕೆ ಬಂದು ಹೋಗುವ ಪ್ರವಾಸಿಗರಿಂದ ಒಂದು ವರೆಯಿಂದ 2 ಲಕ್ಷ  ಹಣ ಸಂಗ್ರಹವಾಗಲಿದೆ. ಈ ಹಿಂದೆ ಇದ್ದ ಆರ್ಎಫ್ ಒ ಒಬ್ಬನ ಕಳ್ಳಾಟದಿಂದ ನಕಲಿ ಟಿಕೆಟ್ ಹಂಚಿ ಹಣದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಏನಾಯಿತು ಎನ್ನುವಷ್ಟರಲ್ಲೇ ಆತನನ್ನ ಲಯನ್ ಸಫಾರಿಗೆ ಎತ್ತಂಗಡಿ ಮಾಡಲಾಯಿತು. ಈಗ ಸಫಾರಿಯಲ್ಲೂ ನಿರ್ವಾಹಣೆಯನ್ನ ಆತನ ಕೈಗೆ ಕೊಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. 

ಸರ್ಕಾರಕ್ಕೆ ಅದರಲ್ಲೂ ಅರಣ್ಯ ಇಲಾಖೆಗೆ ಸಕ್ರೆಬೈಲಿನಲ್ಲಿ ನಿರ್ವಾಹಣೆ ಮಾಡಲು ಹಣವಿಲ್ಲವೆಂದು ಘೋಷಿಸದರೆ ಸಾಕು ಸಾರ್ವಜನಿಕರೆ ಮುಂದು ಬಂದು ದಾನ ಧರ್ಮ ಮಾಡಿ ಬದುಕಿಸುತ್ತಾರೆ. ಲಜ್ಜಗೆಟ್ಟ ಇಲಾಖೆಯ ಇಂತಹ ತಿಮಿಂಗಳದಂತಹ ಅಧಿಕಾರಿಗಳು ಇನ್ನೂ ಎಷ್ಟು ಆನೆಗಳ ಹೆಸರಿನಲ್ಲಿ ತಿಂದು ತೇಗಬೇಕೋ, ಅದೆಷ್ಟು ಮಾವುತ ಮತ್ತು ಕಾವಾಡಿಗರ ಕಣ್ಣೀರು ಸುರಿಸಬೇಕೋ ಕಾದುನೋಡೋಣ

Two more elephants were sent from Sakrebail to Dubare

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close