ಕಾನೂನು ಬಾಹಿರ ಚಟುವಟಿಕೆಗೆ ಮೊದಲು ಕಡಿವಾಣಹಾಕಲು ಎಸ್ಪಿಗೆ ಡಾ.ನಾಗಲಕ್ಷ್ಮಿ ಚೌಧರಿ ಖಡಕ್ ಸೂಚನೆ-Dr. Nagalakshmi Chaudhary Khadak instructs SP to curb illegal activities first

 SUDDILIVE || SHIVAMOGGA

ಕಾನೂನು ಬಾಹಿರ ಚಟುವಟಿಕೆಗೆ ಮೊದಲು ಕಡಿವಾಣಹಾಕಲು ಎಸ್ಪಿಗೆ ಡಾ.ನಾಗಲಕ್ಷ್ಮಿ ಚೌಧರಿ ಖಡಕ್ ಸೂಚನೆ-Dr. Nagalakshmi Chaudhary Khadak instructs SP to curb illegal activities first

Sp, curb

ಹಳ್ಳಿಗಳಲ್ಲಿ ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಮದ್ಯ ಮಾರಾಟ, ಓಸಿ, ಗಾಂಜಾಗಳಿಗೆ ಕಡಿವಾಣ ಹಾಕಲು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಎಸ್ಪಿ ಮಿಥುನ್ ಕುಮಾರ್ ಗೆ ಸೂಚನೆ ನೀಡಿದರು. 

ಇಂದು ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳಾ ಸ್ಪಂದನಾ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಸ್ಪಿ ಅವರಿಗೆ ಖಡಕ್ ಸೂಚನೆ ನೀಡಿದರು.

ಪ್ರಮುಖವಾಗಿ ಈ ಮೂರು ಕಾನೂನು ಬಾಹಿರ ಚಟುವಟಿಕೆಗೆ ಸೂಕ್ತ ಕಡಿವಾಣ ಹಾಕುವಂತೆ ತಿಳಿಸಿದರು. ಇತ್ತೀಚೆಗೆ 9 ನೇ ತರಗತಿ ಯುವಕ ಮದ್ಯ ಸೇವಿಸಿ ಮನೆಯ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾನೆ. ಹಳ್ಳಿ ಹಳ್ಳಿಗಳಲ್ಲಿ ಲಿಕ್ಕರ್ ಹಾವಳಿ ಹೆಚ್ಚಾಗಿದೆ. ಟಾರ್ಗೆಟ್ ರೀಚ್ ಆಗಲು ಹಳ್ಳಿ ಹಳ್ಳಿಗಳಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. 

ಮೊದಲು ಊರ ಹೊರಗೆ ಇದ್ದ ಮದ್ಯದಂಗಡಿ ಈಗ ಊರನಡುವೆ ಇದೆ. ಹಾಗಾಗಿ ಸುಲಭವಾಗಿ ಮದ್ಯ ಸಿಗುತ್ತಿದೆ. ಮದ್ಯ ಸೇವಿಸಿ ಮಬೆಗೆ ಬಂದು ಹೆಂಡತಿ ಮತ್ತು ತಾಯಿಗೆ ಹೊಡೆಯುತ್ತಿದ್ದಾನೆ. ಇಂತಹ ಪ್ರಕರಣಗಳು ಹೆಚ್ಚಾಗಿದೆ. ಇವನ್ನ ಮಟ್ಟಹಾಕಲೇ ಬೇಕು. ಮಕ್ಕಳು ಕುಡಿತದ ಚಟಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿವೆ ಎಂದರು. 

ಕಾನೂನಿನ ಅರಿವು ಕಡಿಮೆಯಿದೆ. ಅವರಿಗೆ ಕಾನೂನಿನ ಅರಿವುಕೊಟ್ಟರೆ ಮಹಿಳೆ ಸಬಲೀಕರಣವಾಗಲಿದೆ. ಕಾನೂನು ಹೋರಾಟಕ್ಕೆ ಪ್ರಾಧಿಕಾರದ ವಕೀಲರು ಮತ್ತು‌ನ್ಯಾಯಾವಾದಿಗಳ‌ ಮೂಲಕ ರಕ್ಷಣೆ ಮಾಡಕೊಳ್ಳಬಹುದು ಎಂದು ಸಭೆಗೆ ತಿಳಿಸಿದರು.‌

Dr. Nagalakshmi Chaudhary Khadak instructs SP to curb illegal activities first

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close