ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು- Biker dies in collision between bus and bike

 SUDDILIVE || SHIVAMOGGA

ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು- Biker dies in collision between bus and bike   

Bus, bike

ಶಿವಮೊಗ್ಗ - ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯ ಕೆರೆಬೀರನಹಳ್ಳಿ ಜಂಬರಘಟ್ಟೆ ಮಧ್ಯೆ ಭಾನುವಾರ ಸಂಜೆ ಸರ್ಕಾರಿ ಬಸ್ ಹಾಗೂ ಬೈಕ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಜಂಬರಘಟ್ಟೆ ನಿವಾಸಿ ಸೈಯದ್ ಆಹಮ್ಮದ್ (65) ಮೃತ ದುರ್ದೈವಿಯಾಗಿದ್ದಾರೆ. 

ಶಿವಮೊಗ್ಗದಿಂದ ಚಿತ್ರದುರ್ಗ ಹೋಗುತ್ತಿದ್ದ ಸರ್ಕಾರಿ ಬಸ್ ಜಮೀನಿನಿಂದ ಮನೆಗೆ ತೆರಳುತ್ತಿದ್ದ ಸೈಯದ್ ಆಹಮ್ಮದ್ ಹಾಗೂ ಆಯಾನ್ ಅವರ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಸೈಯದ್ ಆಹಮ್ಮದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬಂದಿ ಸವಾರ ಆಯಾನ್ ರವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ.  ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ವಾಹನ ಜಮಾವಣೆಯಾಗಿ ಸಂಚಾರ ಅಸ್ಥವ್ಯಸ್ಥವಾಯಿತ್ತು. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Biker dies in collision between bus and bike

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close