ದೆಹಲಿಯಲ್ಲಿ ಕಾಂಗ್ರೆಸ್ ದೇಗುಲವಿದೆ-ಹೆಚ್ ಆಂಜನೇಯ- There is a Congress temple in Delhi - H Anjaneya

 SUDDILIVE || SHIVAMOGGA

ದೆಹಲಿಯಲ್ಲಿ ಕಾಂಗ್ರೆಸ್ ದೇಗುಲವಿದೆ-ಹೆಚ್ ಆಂಜನೇಯ-  There is a Congress temple in Delhi - H Anjaneya  

Anjeneya, congress


MBBS, MD, ಆಯ್ಕೆ ಪ್ರಕ್ರಿಯೆಯಲ್ಲಿ ಒಳಮೀಸಲಾತಿ ಫಲಾನುಭವಿಗಳು ಗೊತ್ತಾಗಲಿದೆ ಎಂದು ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮಾದಿಗ ಮಹಾಸಭಾವನ್ನ ರಚಿಸಲು ತೀರ್ಮಾನಿಸಲಾಗಿದ್ದು, ಅದರ ಸದಸ್ಯತ್ವ ನೋಂದಾಣಿಗಾಗಿ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 50 ಸಾವಿರ ಮಾದಿಗ ಮಹಾಸಭಾದಲ್ಲಿ ನೋಂದಣಿ ಮಾಡಿಕೊಳ್ಳಲು ನಿರ್ಧರಿಸಿದ್ದು ಶಿವಮೊಗ್ಗಕ್ಕೆ ಬಂದಿರುವುದಾಗಿ ತಿಳಿಸಿದರು. 

ರಾಜ್ಯದಲ್ಲಿ ಸಮುದಾಯ ಸಂಘಟನೆಯಿದೆ. ನಮ್ಮದು ಸಂಘವಿರಲಿಲ್ಲ ಕರ್ನಾಟಕ ಮಾದರ ಮಹಾಸಭಾ ಮುನಿಯಪ್ಪನವರ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ಬಂದಿದೆ.

ಹಣಕೊಟ್ಟು ಹೆಸರು‌ನೋಂದಣಿ ಮಾಡಕೊಳ್ಳಬೇಕು. ಬೆಂಗಳೂರಿನಲ್ಲಿ 25 ಎಕರೆ ಜಾಗ ಕೇಳಿದ್ದೇವೆ. ಇದಕ್ಕೆ ಹಾಸ್ಟೆಲ್ ನತ್ತು ಇತರೆ ಸವಲತ್ತು ಕೇಳಲಾಗಿದೆ. ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರಿಕ್ಷೆಗೆ ಮಹಾಸಭ ತರಬೇತಿ ನೀಡಲಿದೆ ಎಂದರು. 

ರಾಜ್ಯದಲ್ಲಿ ಶೆಡ್ಯೂಲ್ ಕಾಸ್ಟ್ ನಲ್ಲಿ 101 ಜಾತಿಯಲ್ಲಿ ಮಾದಿಗರು 40  ಲಕ್ಷ ಜನಸಂಖ್ಯೆಯಿದೆ. ಇವರೆ ಅತ್ಯಂತ ಹಿಂದುಳಿದಿದ್ದಾರೆ. ಇವರಿಗಿಂತ ಅಲೆಮಾರಿ ಜಾತಿಗಳು ಅತ್ಯಂತ ಹಿಂದುಳಿದಿದ್ದಾರೆ. ಒಳ ಮೀಸಲಾತಿ ಲಾಭವನ್ನ ಆರಂಭದಲ್ಲಿ ಶೈಕ್ಷಣಿಕವಾಗಿ ಲಾಭಪಡೆಯಲಾಗುತ್ತದೆ. ಶಿಕ್ಷಣ ಬಿಟ್ಟು ಬೇರೆಯಾವುದೇ ಹುದ್ದೆಗಳ ಲಾಭವಿರುವುದಿಲ್ಲ. ಪ್ರಪ್ರಥಮವಾಗಿ ಒಳಮೀಸಲಾತಿ ಜಾರಿಗೊಳಿಸಿದ ಪರಿಣಾಮ ಮೊದಲು ಎಂಬಿಬಿಎಸ್ ಮತ್ತು ಎಂಡಿ ಸೀಟಿಗೆ 120 ಸ್ಥಾನ ಸಿಗಬೇಕಿದೆ. ಇಷ್ಟು ಜನರ ಲಾಭವನ್ನ ಒಳಪಂಗಡಗಳು ಲಾಭಪಡೆಯಲಿದೆಯಾ ಕಾದು ನೋಡಬೇಕಿದೆ ಎಂದು ಸ್ಪಷ್ಟಪಡಿಸಿದರು. 


ದೆಹಲಿಯಲ್ಲಿದೆ ದೇಗುಲ


ಸಿಎಂ ಬದಲಾವಣೆಗೆ ಹೈಕಮಾಂಡ್ ಉತ್ತರಿಸಬೇಕು. ಗೊಂದಲ ಯಾಕೆ ಬಂದಿದೆ ಗೊತ್ತಿಲ್ಲ. ಒಬ್ಬ ಸದಸ್ಯರನ್ನ ಆಯ್ಕೆ ಮಾಡುವ ಅವಧಿ 5 ವರ್ಷ ಇರುತ್ತದೆ. ಹಾಗಾಗಿ ಸಿಎಂ ಆಯ್ಕೆನೂ 5 ವರ್ಷಯಿದೆ. ಹೈಕಮಾಂಡ್ ವೀಕ್ ಆಗಿರುವುದರಿಂದ ಗೊಂದಲವಹೆಚ್ಚಾಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಆಂಜನೇಯ ಗೊಂದಲವಿಲ್ಲ. ದೆಹಲಿಯಲ್ಲಿಯೇ ಕಾಂಗ್ರೆಸ್ ದೇಗುಲವಿದೆ ಹಾಗಾಗಿ ಹೋಗಿದ್ದಾರೆ‌.  

ದೇವನಹಳ್ಳಿ ಏರ್ ಪೋರ್ಟ್ ನಲ್ಲಿ‌ ಸಾಮೂಹಿಕ ನಮಾಜ್ ಮಾಡಿರುವ ಬಗ್ಗೆ ಸಮುದಾಯದ ಉಲ್ಲಂಘನೆಯಾಗಿರುವುದನ್ನ ಸಮರ್ಥಿಸಿಕೊಂಡಿರುವ ಆಂಜನೇಯ ಸಂವಿಧಾನದಲ್ಲಿ ಅಭಿವ್ಯಕ್ತಿ ಮತ್ತು ಪೂಜಾ ಹಕ್ಕಿದೆ. ಎಲ್ಲೂ ಉಲ್ಲಂಘನೆಯಾಗಿಲ್ಲ ಎಂದರು. 

ಸದಾಶಿವ ಆಯೋಗ, ನಾಗಮೋಹನ್ ದಾಸ್ ಆಯೋಗವನ್ನ ಕೊರಚ ಮಂತ್ತು ಲಮಾಣಿ ಸಮುದಾಯ ಒಪ್ಪಲಿಲ್ಲ.ಹಾಗಾಗಿ ಅವರ ಹೋರಾಟ ಅವರಿಗೆ ನಮ್ಮ ಹೋರಾಟ ನಮಗೆ ಎಂದು ಸ್ಪಷ್ಟಪಡಿಸಿದರು. 

There is a Congress temple in Delhi - H Anjaneya

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close