ಶಾಸಕರು ರಾಜಕೀಯ ಲಾಭ ಮಾಡುವುದನ್ನ‌ ಬಿಡಬೇಕು-SDPI ಕಿವಿ ಮಾತು- MLAs should stop making political gains - SDPI says

SUDDILIVE || SHIVAMOGGA

ಶಾಸಕರು ರಾಜಕೀಯ ಲಾಭ ಮಾಡುವುದನ್ನ‌ ಬಿಡಬೇಕು-SDPI ಕಿವಿ ಮಾತು- MLAs should stop making political gains - SDPI says   

MLA, SDPI

ಶಿವಮೊಗ್ಗ ನಗರದ ಶಾಂತಿ ಕದಡಿ ಹಿಂದೂ ಮುಸ್ಲಿಂ ನಡುವೆ ದ್ವೇಷ ಹರಡುವಂತೆ ಶಾಸಕರು ಯತ್ನಿಸಬಾರದು ಎಂದು ಎಸ್ ಡಿ ಪಿಐ ಕಿವಿಮಾತು ಹೇಳಿದೆ. ಕೋಮು ದ್ವೇಷದ ಮೂಲಕ ಶಾಸಕರು ರಾಜಕೀಯ ಲಾಭ ಪಡೆಯುವುದನ್ನ ಬಿಡಬೇಕೆಂದು ಎಸ್.ಡಿ.ಪಿ.ಐ ಪಕ್ಷದ ನಾಯಕರು ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ. 

ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತಂದ ಶಿವಮೊಗ್ಗದ ಪೊಲೀಸ್ ಇಲಾಖೆಯ ಕಾರ್ಯವನ್ನ ಶ್ಲಾಘಿಸಿದ ಎಸ್ಡಿಪಿಐ ನಾಯಕರು ನಗರದಲ್ಲಿ ಶಾಂತಿ ಕಾಪಾಡಿಕೊಂಡು ಹೋಗುವಂತೆ ನಾಗರಿಕರಲ್ಲಿ ಸಂಘಟನೆ ಮನವಿ ಮಾಡಿದೆ. 

ಆರ್ ಎಂ ಎಲ್ ನಗರದಲ್ಲಿ ಮೊನ್ನೆ ಹರೀಶ್ ಎಂಬಾತನ ಮೇಲೆ ನಡೆದ ಹಲ್ಲೆಗೆ ಅವರ ವೈಯುಕ್ತಿಕ ಕಾರಣದಿಂದ ಗಲಾಟೆಯಾಗಿದ್ದು, ಅದನ್ನ‌ ಪೊಲೀಸ್ ಇಲಾಖೆ ನೋಡಿಕೊಳ್ಳುವುದನ್ನ ಶಾಸಕರು ಹೋಗಿ ದೂರು ದಾಖಲಿಸುವಂತೆ ಮಾಡಿರುವುದು ರಾಜಕೀಯ ಲಾಭಕ್ಕಾಗಿ ವಿನಃ ಇತರೆ ಲಾಭಕ್ಕಲ್ಲ ಎಂದು ಸಂಘಟನೆ ಆರೋಪಿಸಿದೆ. 

ಪ್ರತಿಕಾ ಪ್ರಕಟಣೆಯಲ್ಲಿ ಜಿಲ್ಲಾಧ್ಯಕ್ಷರಾದ ಜೀಲಾನ್ ಖಾನ್, ಪ್ರಧಾನ ಕಾರ್ಯದರ್ಶಿ ಇಮ್ರಾನ್, ಖಜಾಂಚಿ ರಹೀಂ, ಜಿಲ್ಲಾ ಸಮಿತಿ ಸದಸ್ಯರಾದ ಇಸಾಕ್ ರವರು ಉಪಸ್ಥಿತರಿದ್ದರು.

MLAs should stop making political gains - SDPI says

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close