ಸಿಎಂ ಬದಲಾವಣೆ ಮಾಧ್ಯಮಗಳ ಸೃಷ್ಠಿ-ಮಧು ಬಂಗಾರಪ್ಪ, ಗೊಂದ ಬಗೆಹರಿಯದಿದ್ದರೆ ಪಕ್ಷಕ್ಕೆ ಹೊಡೆತ-ಬೇಳೂರು-CM change is a creation of the media

 SUDDILIVE || SHIVAMOGGA

ಸಿಎಂ ಬದಲಾವಣೆ ಮಾಧ್ಯಮಗಳ ಸೃಷ್ಠಿ-ಮಧು ಬಂಗಾರಪ್ಪ, ಗೊಂದ ಬಗೆಹರಿಯದಿದ್ದರೆ ಪಕ್ಷಕ್ಕೆ ಹೊಡೆತ-ಬೇಳೂರು-CM change is a creation of the media- Madhu Bangarappa, if the issue is not resolved, it will be a blow to the party- Belur

CM, change


ಸಿಎಂ ಬದಲಾವಣೆ ಎಲ್ಲವೂ ಮಾಧ್ಯಮದ ಸೃಷ್ಠಿ ಎಂದು ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ. 

ಕೆಡಿಪಿ ಸಭೆಗೂ ಮೊದಲೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ವಿಪಕ್ಷಗಳ ಮಾತಿಗೆ ಪ್ರತಿಕ್ರಿಯಿಸಿಲ್ಲ. ಸಂಪುಟ ವಿಸ್ತರಣೆ ಮತ್ತು ಸಿಎಂ ಬದಲಾವಣೆ ಎಲ್ಲವೂ ಹೈಕಮಾಂಡ್ ಗೆ ಬಿಟ್ಟಿದ್ದು, ಹೈಕಮಾಂಡ್ ಬಾಯಿಮುಚ್ಚಿಕೊಂಡು ಇರು ಎಂದಿದ್ದಾರೆ. ನಾನು ಯಾವುದಕ್ಕೂ ಪ್ರತಿಕ್ರಿಯಿಸೊಲ್ಲ ಎಂದರು. 

ಸದಾನಂದ ಗೌಡರು ಸಿಎಂ ಬದಲಾವಣೆ ವಿಚಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂಬ ಹೇಳಿಕೆಗೆ ಪ್ರತಿಕ್ರಿಯಸಲು ಒಪ್ಪದ ಸಚಿವರು, ವಿಪಕ್ಷಗಳಿಗೆ  ಕಿಟಕಿ ಗಳೆಲ್ಲಾ ಬಾಗಿಲುಗಳು ಆಗಿವೆ. ಕನ್ನಡ ಮೀಡಿಂ ಶಾಲೆ 1995 ರಲ್ಲಿ ನೇಮಕಗೊಂಡ ಶಿಕ್ಷಕರನ್ನ ಬಜೆಟ್ ಅಲೋಕೇಷನ್ ಮಾಡಲಾಗುವುದು. ನನಗೂ ಅವರಿಗೆ ನೇಮಕಾತಿ ನೀಡಲು ಆಸೆ ಇದೆ. ನನಗೆ ಗೊತ್ತಿದೆ ಅವರ ಪ್ರತಿಔಟನೆಯಾಕೆ ಎಂಬುದನ್ನ ಎಂದು ಗದರಿಸಿದರು. 

ದುರ್ಗಿಗುಡಿ ಶಾಲೆಗೆ ದೈಹಿಕ ಶಿಕ್ಷಕರ ನೇಮಕಾತಿ ಸಂಬಂಧ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು,   ವರ್ಗಾವಣೆ ಮತ್ತು  ಶಿಕ್ಷಕರ ನೇಮಕಾತಿಯಲ್ಲಿ ಗೊಂದಲವಿದೆ. ಒಂದು ವರ್ಷದಿಂದ  ಶಿಕ್ಷಕರ ಕೊರತೆಯಿದೆ. ಡೆಪ್ಯೂಟೇಷನ್ ಆದರೂ ಬರುತ್ತಿಲ್ಲ.. ದುರ್ಗಿಗುಡಿ ಶಾಲೆಯ ಮಕ್ಕಳಿಗೆ ಒಂದು ತೀರ್ಮಾನ ತೆಗೆದುಕೊಳ್ಳಲಾಗುವುದು. ಶಿಕ್ಷಣ ಇಲಾಖೆಯ ಆಸ್ತಿಗಳ ಸಂರಕ್ಷಣೆ ಮಾಡಲಾಗುವ ಬಿಲ್ ಈ ಬಾರಿ ಅಧಿವೇಶನದಲ್ಲಿ ಪಾಸ್ ಮಾಡಲಾಗುವುದು ಎಂದರು. 

ಗೋಪಾಲ ಕೃಷ್ಣ ಬೇಳೂರು ಮಾತು

ಸಿಎಂ ಕದನದ ಗೊಂದಲಕ್ಕೆ ರಾಹುಲ್ ಗಾಂಧಿ ಬಗೆಹರಿಸಲಿದ್ದಾರೆ. ಬಗೆಹರಿಸದಿದ್ದರೆ ಪಕ್ಷಕ್ಕೆ ಹೊಡೆತಬೀಳಲಿದೆ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.  

ಸಚಿವ ಸಂಪುಟ ವಿಸ್ತರಣೆ ನೂ ಆಗಲಿ ಪುನರ್ ರಚನೆನೂ ಆಗಲಿ ಏನೇ ಆದರೂ ಬೇಗ ಆಗಲಿ ಎಂದ ಅವರು ಮಂತ್ರಿ ಲಾಭಿ ಮಾಡಿಯಾಗಿದೆ ಇನ್ನು ಎಷ್ಟು ಜನರ  ಕೈಕಾಲು ಹಿಡಿಯೋದು. ನಾನು ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಆದಷ್ಟು ಬೇಗ ಬಗೆಹರಿಸಿ. ನಾಯಕರಿಗೂ ಅವಕಾಶಕೊಡುವ ಆಸೆಯಲ್ಲಿದೆ. ಮಧು ಬಂಗಾರಪ್ಪನವರೆ ನನಗೆ ಮಂತ್ರಿ ಸ್ಥಾನಕೊಡಲಿ ಎಂದಿದ್ದಾರೆ ಎಂದರು. 

CM change is a creation of the media

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close