902 ವಿದ್ಯುತ್ ಕಂಬ ತೆರವಿಗೆ ಮುಂದಾದ ಮೆಸ್ಕಾಂ-MESCOM moves to remove 902 electricity poles ಕಂಬ ತೆರವಿಗೆ ಮುಂದಾದ ಮೆಸ್ಕಾಂ

 SUDDILIVE || SHIVAMOGGA

902 ವಿದ್ಯುತ್ ಕಂಬ ತೆರವಿಗೆ ಮುಂದಾದ ಮೆಸ್ಕಾಂ-MESCOM moves to remove 902 electricity poles

Electriccity, cable

ನಾಗರೀಕ ಹಿತರಕ್ಷಣೆ ವೇದಿಕೆಯ ಸತತ ಹೋರಾಟದ ಪ್ರಯತ್ನದಿಂದ ನಗರದಲ್ಲಿ ನಡೆದಿರುವ ಸ್ಮಾರ್ಟ್ ಸಿಟಿ ಯೋಜನೆಯ ಪ್ರದೇಶದಲ್ಲಿ ವಿದ್ಯುತ್ ಕಂಬಗಳನ್ನ ತೆಗೆಯಲು ಕೊನೆಗೂ ಮೆಸ್ಕಾಂ ಮುಂದಾಗಿದೆ. ಭೂಗತ ಕೇಬಲ್ ಅಳವಡಿಸಿ ಎರಡು ವರ್ಷ ಕಳೆದರೂ ನಗರದಲ್ಲಿ ವಿದ್ಯುತ್ ಕಂಬಗಳು ಹಾಗೆ ಉಳಿಸಿಕೊಳ್ಳಲಾಗಿತ್ತು. 

 ಭೂಗತ ಕೇಬಲ್ ಅಳವಡಿಕೆಯನ್ನ 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ನಿರ್ಮಿಸುವ ಆರಂಭದ ಹಂತದಲ್ಲೇ ಭೂಗತ ಕೇಬಲ್ ಗಳು ಸುಟ್ಟುಹೋಗಲು ಆರಂಭಿಸಿದ್ದವು. ಹಿಂದಿನ ಆಯುಕ್ತರ ಮನೆಯ ಮುಂದೆಯೇ ಭೂಮಿ ಒಳಗೆ ಅಳವಡಿಸಿದ್ದ ಕೇಬಲ್ ಗಳು ಸುಟ್ಟುಹೋಗಿದ್ದವು. ಈ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳನ್ನ ಹಾಗೆ ಉಳಿಸಿಕೊಂಡು ಜನರ ತೆರಿಗೆಹಣವನ್ನ ಪೋಲ್ ಮಾಡಲಾಗಿತ್ತು. 

ಈ ಎಲ್ಲಾ ಅವಾಂತರಕ್ಕೆ ಬಿಜೆಪಿಯ ದುರಾಡಳಿತವೂ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಆದರೆ ಆಗಿನ ಜನಪ್ರತಿನಿಧಿಗಳು ಮಾತ್ರ ಸ್ಮಾರ್ಟ್ ಸಿಟಿ ಕಾಮಗಾರಿ ವಂಡ್ರುಫುಲ್ ಆಗಿ ನಡೆದಿದೆ ಎಂದು ಹೇಳಿಕೊಂಡು ಓಡಾಡಿದ್ದರು. ಜನಗಳು ಮಾತ್ರ ನಮ್ಮ ಕರ್ಮ ಎಂದುಕೊಂಡೆ ಬಾಯಿಮುಚ್ಚಿಕೊಂಡಿದ್ದರು. 

ಆರಂಭದಲ್ಲಿ ಬಂದ ಕಾಂಗ್ರೆಸ್ ನ ನೂತನ ಸರ್ಕಾರ ಬಿಜೆಪಿ ಕಾಲದಲ್ಲಿ ನಡೆದ ಎಲ್ಲಾ ಕಾಮಗಾರಿಗಳನ್ನ ತನಿಖೆ ಮಾಡಿಸುವುದಾಗಿ ಬೊಬ್ಬರಿದಿತ್ತು. ಆದರೆ ನಂತರ ದಿನಗಳು ಕಳೆದಂತೆ ಯಾವ ತನಿಖೆನೂ ಆಗಲಿಲ್ಲ. ಯಾವೊಬ್ಬನ ತಲೆದಂಡವೂ ನಡೆಯಲಿಲ್ಲ. ಆದರೆ ಇದನ್ನೆಲ್ಲಾ ಗಮನಿಸಿದ್ದ ವೇದಿಕೆ ಸದಸ್ಯರು ಪ್ರತಿಭಟನೆ, ಮನವಿಗಳನ್ನ ನೀಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ದಕ್ಷ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಸಹ ವೇದಿಕೆಯ ಮನವಿಗೆ ಸ್ಪಂದಿಸಿದ ಪರಿಣಾಮ ಇವತ್ತು ವಿದ್ಯುತ್ ಕಂಬಗಳು ತೆರವಾಗಿದೆ. 

ಈ ವಿದ್ಯುತ್ ಕಂಬಗಳು ಸಧ್ಯಕ್ಕೆ ಉಷಾ ನರ್ಸಿಂಗ್ ಹೋಮ್ ನಿಂದ ಕರ್ನಾಟಕ ಬ್ಯಾಂಕ್ ವರೆಗಿನ ಸುಮಾರು 7-8 ಕಂಬಗಳನ್ನ ತೆಗೆಯಲಾಗಿದೆ. ಜೆಸಿಬಿಯನ್ನ ಇಳಿಸಿ ಮೆಸ್ಕಾಂ ವಿದ್ಯುತ್ ಕಂಬಗಳನ್ನ ತೆರವುಗೊಳಿಸಿದೆ. ಹಂತ ಹಂತವಾಗಿ ಕಂಬಗಳನ್ನ ತೆಗೆಯಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗಳು ನಡೆದಿರುವ ಬಡವಣೆಗಳಲ್ಲಿ ಕಂಬಗಳನ್ನ ತೆಗೆಯಲಾಗುತ್ತಿದೆ. 902 ವಿದ್ಯುತ್ ಕಂಬಗಳ ತೆರವು ಆಗಬೇಕಿದೆ. 

MESCOM moves to remove 902 electricity poles

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close