ಕಾನೂನು ಬಾಹಿರ ಚಟುವಟಿಕೆಗೆ ನಿರ್ದಾಕ್ಷಿಣ್ಯದ ಕ್ರಮ ಎಂದು ಸಚಿವ ಮಧು ಬಂಗಾರಪ್ಪ, ಕ್ರಮವಾಗದಿದ್ದರೆ ಪೊಲೀಸ್ ಇಲಾಖೆ ಬಂದ್ ಮಾಡ್ರಿ ಎಂದ ಶಾಸಕರು-MLAs say police department will be shut down if action is not taken

 SUDDILIVE || SHIVAMOGGA

ಕಾನೂನು ಬಾಹಿರ ಚಟುವಟಿಕೆಗೆ ನಿರ್ದಾಕ್ಷಿಣ್ಯದ ಕ್ರಮ ಎಂದು ಸಚಿವ ಮಧು ಬಂಗಾರಪ್ಪ, ಕ್ರಮವಾಗದಿದ್ದರೆ ಪೊಲೀಸ್ ಇಲಾಖೆ ಬಂದ್ ಮಾಡ್ರಿ ಎಂದ ಶಾಸಕರು-Minister Madhu Bangarappa says strict action will be taken against illegal activities, MLAs say police department will be shut down if action is not taken


MLA, police

ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಮತ್ತೆ ಗಾಂಜಾ ಮತ್ತು ಗ್ಯಾಬ್ಲಂಗ್ ಆಟಗಳ ಬಗ್ಗೆ ಚರ್ಚೆ ನಡೆದಿದೆ. ಜಿಲ್ಲೆಯಲ್ಲಿ ಗಾಂಜಾ ಹೆಚ್ಚಾಗಿದೆ. ನಿರ್ದಾಕ್ಷಿಣ ಆಕ್ಷನ್ ಆಗಬೇಕು ಎಂದು ಮಧು ಬಂಗಾರಪ್ಪ ಸೂಚಿಸಿದ್ದಾರೆ.  

ಇದಕ್ಕೆ ವಿಪಕ್ಷದವರ ಸಹಾಯಬೇಕಿದೆ. ಅಧಿಕಾರಿಗಳೆ ಸೇರಿಕೊಂಡಿರುವ ಬಗ್ಗೆ ಆರೋಪ ಕೇಳಿ ಬರುತ್ತಿದೆ. ಮಲೆನಾಡಿನಲ್ಲಿ ಅದರಲ್ಲೂ ಶಿವಮೊಗ್ಗದಲ್ಲಿ ಹೆಚ್ಚಾಗಿದೆ. ಅಕ್ರಮ ಲಿಕ್ಕರ್ ವಿಚಾರದಲ್ಲೂ ಅಬಕಾರಿ ಅಧಿಕಾರಿಗಳು ಅಕ್ರಮ‌ ಮದ್ಯ ಮಾರಾಟದವರ ಮೇಲೆ ದಾಳಿ ನಡೆಸಿ ದಂಡ ಹಾಕುವುದಲ್ಲ. ಬ್ಯಾಚ್ ನಂಬರ್ ನೋಡಿ ಅವರ ಮೇಲೂ  ಕ್ರಮ ಕೈಗೊಳ್ಳಲಿ. ಯಾವ ಮದ್ಯದಂಗಡಿಯವರು ಅಕ್ರಮ ಮದ್ಯ ಮಾರಾಟಗಾರರಿಗೆ ಹಂಚುತ್ತಾರೋ ಅವರ ಮೇಲೆ 50 ಸಾವಿರ ದಂಡವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು  ಹೇಳಿದರು. 

ಗ್ಯಾಂಬ್ಲಿಂಗ್ ನ್ನ ನಿಯಂತ್ರಿಸಿ ಎಂದು ಸಚಿವರು ಪೊಲೀಸ್ ಅಧಿಕಾರಿಗೆ ಹೇಳಿದಾಗ ಗರಂ ಆದ ಆರಗ ಜ್ಞಾನೇಂದ್ರ, ಪೊಲೀಸ್ ಗಮನಕ್ಕೆ ಬಾರದೆ ಯಾವುದೇ ನಡೆಯೊಲ್ಲ. ಅಪರಾಧಿಗಳ ಜೊತೆ ಅಧಿಕಾರಿಗಳೂ ಇದ್ದಾರೆ ಎಂದಿದ್ದಾರೆ.   ಬಾಲಬಿಚ್ಚಕ್ಕೆ ಬಿಡಬೇಡಿ ಎಂದು ಮಧು ಬಂಗಾರಪ್ಪ ಸೂಚನೆ ನೀಡಿ. ಮಕ್ಕಳ ಭವಿಷ್ಯವನ್ನ ರೂಪಿಸಬೇಕಿದೆ ಅದಕ್ಕೆ ಅಗತ್ಯ ಕ್ರಮ ನನ್ನಿಂದಲೇ ನಡೆಯಲಿದೆ ಎಂದು ಗುಡುಗಿದ್ದಾರೆ. 

ಶಾಸಕ ಚೆನ್ನಿ ಮಾತನಾಡಿ ಬಸವನಗುಡಿ ಕೃಷಿ ನಗರದಲ್ಲಿ ಹೆಣ್ಣು ಮಗಳೊಬ್ಬಳು ಡ್ರಗ್ ಮಾಫೀಯಾದಲ್ಲಿ ಸಿಕ್ಕಿಕೊಂಡಿದ್ದಳು. ಕಂಪ್ಲೆಂಟ್ ನೀಡಲುಹೋದ ತಂದೆ ಮತ್ತು ತಾಯಿಯನ್ನೇ ಅಡ್ಡಕಟ್ಟಿದ್ದಳು. ನಂತರ ಹೆಣ್ಣುಮಗಳ ಮೊಬೈಲ್ ತಪಾಸಣೆ ನಡೆಸಿದಾಗ ಮೈಬೈಲ್ ನಲ್ಲಿನ ಕಾಲ್ ರೆಕಾರ್ಡ್ ಗಳು ಭಯವನ್ನ ಹುಟ್ಟಿಸುತ್ತದೆ ಎಂದು ಸಭೆಗೆ ತಿಳಿಸಿದರು. 

ಗಾಂಜಾ ವಿಚಾರದಲ್ಲಿ ದೂರು ನೀಡಲು ಹೋದರೆ ದೂರು ನೀಡಿದವರ ಮೇಲೂ ಹಲ್ಲೆ ನಡೆಯುತ್ತಿದೆ ಎಂದ ಶಾಸಕರಿಗೆ ಸಭೆಯಲ್ಲಿದ್ದ ಹೆಚ್ಚುವರಿ ರಕ್ಷಣಾಧಿಕಾರಿ ಇಲ್ಲ ಕಳೆದ ವರ್ಷ 431 ಗಾಂಜಾ ಪ್ರಕರಣಗಳಿದ್ದರೆ ಈ ಬಾರಿ 231 ಪ್ರಕರಣ ದಾಖಲಿಸಿಕೊಂಡಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ಕಡಿಮೆಯಿದೆ ಎಂದು ಹೇಳಿದಾಗ ಮತ್ತೆ ಗರಂ ಆದ ಶಾಸಕ ಚೆನ್ನಿ ಈ ಪ್ರಕರಣ ಪತ್ತೆಯಾಗದಂತೆ ತಡೆಯಬೇಕು. ಇದು ಪೊಲೀಸ್ ಇಲಾಖೆಗೆ ಸಾಧ್ಯವಾಗದಿದ್ದರೆ ಇಲಾಖೆ ಏಕೆ ಬೇಕು ಮುಚ್ಚಿಬಿಡಿ ಎಂದು ವೀರಾವೇಶದ ಮಾತುಗಳನ್ನಾಡಿದ್ದಾರೆ.

ಗಾಂಜಾ ಎಲ್ಲಿಸಿಗ್ತಾಯಿದೆ ಎಂದರೆ ಲಷ್ಕರ್ ಮೊಹಲ್ಲ, ಬಾಪೂಜಿ ನಗರ ಗಾಂಧಿಬಜಾರ್ ನಲ್ಲೂ ಸಿಗ್ತಾಯಿದೆ. ಕೇಸ್ ಜಾಸ್ತಿ ಆಗ್ತಾಯಿದೆ ಎನ್ನುವುದಾದರೆ ಇಲಾಖೆಯಾಕೆ ಬೇಕು. ದೂರುದಾರರ ಹೆಸರನ್ನ ಗೌಪ್ಯವಾಗಿಡುವುದಾಗಿ ಇಲಾಖೆ ಹೇಳುತ್ತೆ. ಆದರೆ ಅವರ ಮೇಲೆ ಹಲ್ಲೆಯಾಗುತ್ತೆ. ನಾನು ಅದಕ್ಕೆ ಗೃಹಸಚಿವ, ಡಿಜಿ ಮತ್ತು ಎಡಿಜಿಪಿಯವರನ್ನ ಭೇಟಿ ಮಾಡಿದ್ದು ಎಂದರು. 

ರಾಜ್ಯ ಮಹಿಳ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮೊನ್ನೆ ಇದೇ ಸಭೆಯಲ್ಲಿ ಎಸ್ಪಿಯವರಿಗೆ ಖಡಕ್ ಆದೇಶ ನೀಡಿದ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪ ಸಹ ಇಲಾಖೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಾಗೂ ಸಭೆಯಲ್ಲಿದ್ದ ಜನಪ್ರತಿನಿಧಿಗಳಿಗೂ ಜಿಲ್ಲೆಯಲ್ಲಿ ಗಾಂಜಾ ಹಾವಳಿ ಬಗ್ಗೆ ಗಮನಕ್ಕೆ ತರುವಂತೆ ಕೋರಿದರು. 

MLAs say police department will be shut down if action is not taken

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close