ad

ಜಾತಿ ನಿಂದನೆ ಆರೋಪಿಗಳಿಗೆ ಸಜೆ- Caste abuse accused sentenced

SUDDILIVE || SHIVAMOGGA

ಜಾತಿ ನಿಂದನೆ ಆರೋಪಿಗಳಿಗೆ ಸಜೆ- Caste abuse accused sentenced    

Caste, abuse


2022 ರಲ್ಲಿ ಭದ್ರಾವತಿಯ ಆನವೇರಿ ಗ್ರಾಮದ ತಿಮ್ಮಪ್ಪ ರವರಿಗೆ  ಅದೇ ಗ್ರಾಮದ ರಾಜಪ್ಪ, ಭರತ, ರಂಗನಾಥ ಹಾಗೂ ಹನುಮಂತಪ್ಪ ರವರು ಆಸ್ತಿಯ ವಿಚಾರವಾಗ ಜಗಳ ತೆಗೆದು, ಜಾತಿಯ ಹೆಸರು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು  ಜಾತಿ ನಿಂದನೆ ಮಾಡಿದ್ದು, ನಂತರ  ಅವರನ್ನು ಮನೆಯಿಂದ ಹೊರಗೆ ಎಳೆದು ಹಾಕಿ, ನಮ್ಮ ಮನೆಯನ್ನೇ ತೆಗೆದುಕೊಳ್ಳುತ್ತಿಯಾ ಎಂದು ಖಾರದ ಪುಡಿ ಎರಚಿ ಹೊಡೆದಿದ್ದು, ಕಾಲಿನಿಂದ ಒದ್ದು ಹಲ್ಲೆ ಮಾಡಿ ಹಾಗೂ ಜೀವ ಬೆದರಿಕೆ ಹಾಕಿದ್ದು, ಸದರಿಯವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಹೊಳೆಹೊನ್ನುರು ಪೊಲೀಸ್ ಠಾಣೆ ಗುನ್ನೆ ನಂ 320/2022 ಕಲಂ 143, 147, 148, 504, 323, 324, 506, 149 ಐಪಿಸಿ ಮತ್ತು  ಎಸ್.ಸಿ/ಎಸ್.ಟಿ ಕಾಯಿದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀ ಜಿತೇಂದ್ರ ಕುಮಾರ ದಯಾಮ ಐಪಿಎಸ್ ಎ ಎಸ್ ಪಿ ಭದ್ರಾವತಿ ಉಪ ವಿಭಾಗ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ: 30-10-2025 ರಂದು  ಆರೋಪಿತರಾದ 1) ರಾಜಪ್ಪ ಈ.ಬಿ, 51 ವರ್ಷ, ವಾಸ ಕುರುಬರ ಬೀದಿ, ಆನವೇರಿ ಗ್ರಾಮ ಭದ್ರಾವತಿ ತಾ||, ಶಿವಮೊಗ್ಗ ಜಿಲ್ಲೆ. 2) ಭರತ್ ಈ ಆರ್, 20 ವರ್ಷ ವಾಸ ಕುರುಬರ ಬೀದಿ, ಆನವೇರಿ ಗ್ರಾಮ ಭದ್ರಾವತಿ ತಾ||, ಶಿವಮೊಗ್ಗ ಜಿಲ್ಲೆ, 3) ರಂಗನಾಥ್ @ ರಂಗೇಶ್, 34 ವರ್ಷ ವಾಸ ಕುರುಬರ ಬೀದಿ, ಆನವೇರಿ ಗ್ರಾಮ ಭದ್ರಾವತಿ ತಾ||  ಶಿವಮೊಗ್ಗ ಜಿಲ್ಲೆ ಮತ್ತು 4) ಹನುಮಂತಪ್ಪ ಈ.ಬಿ ಬಿನ್ ಲೇಟ್ ಬಸಪ್ಪ, 53 ವರ್ಷ ವಾಸ ವಾಸ ಕುರುಬರ ಬೀದಿ, ಆನವೇರಿ ಗ್ರಾಮ ಭದ್ರಾವತಿ ತಾ|| ಶಿವಮೊಗ್ಗ ಜಿಲ್ಲೆ. ರವರಿಗೆ 2 ವರ್ಷ ಕಠಿಣ ಕಾರಾವಾಸ & ತಲಾ 77,000/- ರೂ ದಂಡವನ್ನು, ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆಯನ್ನು, ಅನುಭವಿಸತಕ್ಕದ್ದು ಎಂದು ಆದೇಶಿಸಿರುತ್ತದೆ. ಒಟ್ಟು ದಂಡದ ಹಣ 3,08,000/- ರೂ ಗಳಲ್ಲಿ ನೊಂದವರಿಗೆ 2,00,000/- ರೂಗಳನ್ನು ಪರಿಹಾರ ನೀಡುವಂತೆ* ಆದೇಶಿಸಿರುತ್ತದೆ.

Caste abuse accused sentenced

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close