ad

ನವೆಂಬರ್ ಮಾಹೆಯ ಕನ್ನಡಿಗನಾಗದೆ ಪ್ರತಿನಿತ್ಯದ ಕನ್ನಡಿಗರಾಗಲು ಡಿಸಿ ಕರೆ-DC calls on people to become everyday Kannadigas, not just November Kannadigas

 SUDDILIVE || SHIVAMOGGA

ನವೆಂಬರ್ ಮಾಹೆಯ ಕನ್ನಡಿಗನಾಗದೆ ಪ್ರತಿನಿತ್ಯದ ಕನ್ನಡಿಗರಾಗಲು ಡಿಸಿ ಕರೆ-DC calls on people to become everyday Kannadigas, not just November Kannadigas    

Kannadiga, november


ನಗರದ ನೆಹರೂ ಕ್ರೀಡಾಂಗಣದಲ್ಲಿ 69 ನೇ ಕನ್ನಡ ರಾಜ್ಯೋತ್ಸವವನ್ನ ಜಿಲ್ಲಾಡಳಿತದ ವತಿಯಿಂದ ನಡೆದಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರ ವತಿಯಿಂದ ರಾಷ್ಟ್ರಧ್ವಜ ಹಾರೋಹಣ ಮಾಡುವ ಮೂಲಕ ರಾಜ್ಯದ ಏಕೀಕರಣ ಸಂಭ್ರಮಾಚರಿಸಲಾಯಿತು. 

ಧ್ವಜಾರೋಹಣ ನಡೆಸಿ ನಂತರ ನಾತನಾಡಿದ ಜಿಲ್ಲಾಧಿಕಾರಿಗಳು ನವೆಂಬರ್ ಮಾಹೆಯಲ್ಲಿ ಮಾತ್ರ ಭಾಷಾಭಿಮಾನದ ಮತ್ತು ರಾಜ್ಯೋತ್ಸವದ ಕನ್ನಡಿಗರಾಗದೆ ಪ್ರತಿನಿತ್ಯ ಕನ್ನಡಿಗರಾಗಬೇಕು. ರಾಜ್ಯೋತ್ಸವವು ಕೇವಲ ಘೋಷಣೆ-ಭಾಷಣಕ್ಕೆ ಸೀಮಿತವಾಗದೆ ಜಾಗೇತಿಯ ವೇದಿಕೆಯಾಗಬೇಕೆಂದು ಕರೆ ನೀಡಿದರು. 

1973 ರಲ್ಲಿ ದೇವರಾಜ್ ಅರಸ್ ಅವರು ಸಿಎಂ ಆಗಿದ್ದಾಗ ಕರ್ನಾಟಕ ಎಂದು ನಾಮಕರಣಗೊಂಡ ಕರ್ನಾಟಕ 1956 ರಲ್ಲಿ ಏಕೀಕರಣಗೊಂಡಿತ್ತು. ಜಾಗತೀಕರಣದ ಹಿನ್ನಲೆಯಲ್ಲಿ ಇಂಗ್ಲೀಷ್ ಜ್ಞಾನದ ಹಿನ್ನಲೆಯಲ್ಲಿ ಅವಶ್ಯಕವಾದರೂ ಮಾತೃಭಾಷೆ ಕನ್ನಡಕ್ಕೆ ಮೊದಲ ಆಧ್ಯತೆ ನೀಡಬೇಕು.ನಮ್ಮ ಶಿಕ್ಷಣದ ನೀತಿಯೂ ಮಾತೃಭಾಷೆ ಕನ್ನಡಕ್ಕೆ ಹೆಚ್ಚಿನ ಆಧ್ಯತೆ ನೀಡಿದೆ ಎಂದರು. 

ಈ ವೇಳೆ ಶಾಸಕರಾದ ಡಾ.ಧನಂಜಯ ಸರ್ಜಿ,  ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿಗಳು, ಗ್ಯಾರೆಂಟಿ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಹೆಚ್ ಸಿ ಯೋಗೇಶ್, ಹೆಚ್ಚುವರಿ ಜಿಲ್ಲಾರಕ್ಷಣಾಧಿಕಾರಿಗಳಾದ ಕಾರ್ಯಪ್ಪ ಮತ್ತು ರಂಗನಾಥ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳ ಭಾಷಣದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. 

DC calls on people to become everyday Kannadigas, not just November Kannadigas

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close