ad

ಗಾಂಧಿ ಪಾರ್ಕ್ ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ದಟ್ಟಹೊಗೆ ಪ್ರಯಾಣಿಕರು ಗಾಬರಿ, ಚಾಲನೆ ಬಿಟ್ಟು ಪರಾರಿಯಾದ ಚಾಲಕ-Thick smoke suddenly appeared on the children's train

 SUDDILIVE || SHIVAMOGGA

ಗಾಂಧಿ ಪಾರ್ಕ್ ನಲ್ಲಿ ಚಲಿಸುತ್ತಿದ್ದ ಮಕ್ಕಳ ರೈಲಿನಲ್ಲಿ ದಿಡೀರ್ ಎಂದು ಕಾಣಿಸಿಕೊಂಡ ದಟ್ಟಹೊಗೆ, ಪ್ರಯಾಣಿಕರು ಗಾಬರಿ, ಇಂಜಿನ್ ಬಿಟ್ಟು ಪರಾರಿಯಾದ ಚಾಲಕ-Thick smoke suddenly appeared on the children's train moving in Gandhi Park, passengers panicked, driver fled, abandoning the engine



ಗಾಂಧಿಪಾರ್ಕ್ ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡ  ಪರಿಣಾಮ ಚಾಲಕ ಪಲಾಯನವಾಗಿದ್ದು, ಗ್ರಾಹಕರು ಗಾಬರಿಯಾಗಿರುವ ಘಟನೆ ವರದಿಯಾಗಿದೆ. 

ನಗರದ ಗಾಂಧಿ ಪಾರ್ಕ್ ನಲ್ಲಿ ಮಕ್ಕಳಿಗಾಗಿ ಚಲಿಸುವ ರೈಲಿನಲ್ಲಿ ದಿಡೀರ್ ಎಂದು ಚಲಿಸುತ್ತಿದ್ದ ರೈಲಿನ ಇಂಜಿನಿನಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡು ಕೆಲಕಾಲ ಪ್ರಯಾಣಿಕರನ್ನ ಗಾಬರಿಗೊಳಿಸಿದೆ. ಇಂಜಿನ್ ಜ್ಯಾಮ್ ಆಗಿ ದಟ್ಟ ಹೊಗೆಯಿಂದ ಹಿಮ್ಮುಖ ಚಲಿಸಿದೆ. 

ಇದೇ ವೇಳೆ ಚಾಲಕ ಪ್ರಜ್ವಲ್ ಎಂಬಾತ ದಟ್ಟವಾದ ಹೊಗೆ ಕಾಣಿಸಿಕೊಂಡ ಪರಿಣಾಮ ಇಂಜಿನ್ ಚಾಲನೆ ಬಿಟ್ಟು ಪರಾರಿಯಾಗಿದ್ದಾನೆ. ಚಾಲಕನೆ ಪರಾರಿಯಾದ ಪರಿಣಾಮ ರೈಲಿನಲ್ಲಿದ್ದ 10 ಜನ ಪ್ರಯಾಣಿಕರು ಗಾಬರಿಯಾಗಿದ್ದಾರೆ. 


ಹೆಂಗಸರು ಮಕ್ಕಳನ್ನ ಕೂರಿಸಿಕೊಂಡು ಪ್ರಯಾಣಿಕರು ಒಂದು ಸುತ್ತು ಬರುವಷ್ಟರಲ್ಲಿ ಈ ಘಟನೆ ನಡೆದಿದೆ. ಇದರಿಂದ ಪ್ರಯಾಣಿಕರು ಗಾಬರಿಯಾಗಿದ್ದಾರೆ. ಇದರ ಗುತ್ತಿಗೆ ಪಡೆದ ವ್ಯಕ್ತಿಯೊಂದಿಗೆ ಗ್ರಾಹಕರು ಆತಂಕದಿಂದ  ಜಗಳಕ್ಕಿಳಿದಿದ್ದಾರೆ. ಚಾಲಕ ಪ್ರಜ್ವಲ್ ಯಾಕೆ ಚಾಲನೆ ಬಿಟ್ಟು ಹೋದ ಎಂಬುದು ಮತ್ತು ಗ್ರಾಹಕರ ಪ್ರಶ್ನೆಯಾಗಿದೆ. ಒಂದು ವೇಳೆ ಬೆಂಕಿ ಹೊತ್ತುಕೊಂಡರೆ ಯಾರು ಹೊಣೆ ಎಂಬುದು ಗ್ರಾಹಕರ ಪ್ರಶ್ನೆಯಾಗಿದೆ. 

ಪಾಲಿಕೆಯ ವತಿಯಿಂದ ಟೆಂಡರ್ ಮೂಲಕ ಮಕ್ಕಳ ರೈಲು ನಡೆಸಲಾಗುತ್ತಿತ್ತು. ಗ್ರಾಹಕರು ನಮ್ಮನ್ನ ಅರ್ಧಕ್ಕೆ ಬಿಟ್ಟು ಹೋಗಿದ್ದಕ್ಕೆ ಅಕ್ಷರಶಃ ಕೋಪಗೊಂಡಿದ್ದಾರೆ. ಯಾವತ್ತೂ ಸಂಭವಿಸಿದ ಅವಘಡ ಇಂದು ಸಂಬಂಧಿಸಿದೆ. 

Thick smoke suddenly appeared on the children's train

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close