ad

ಹಸುಗಳ ಅಪಹರಣ, ಸಿಸಿ ಟಿವಿಯಲ್ಲಿ ಸೆರೆ, ಪ್ರಾಣಿಪ್ರಿಯರ ಮೌನ- Cow kidnapping, captured on CCTV, silence from animal lovers

 SUDDILIVE || SAGARA

ಹಸುಗಳ ಅಪಹರಣ, ಸಿಸಿ ಟಿವಿಯಲ್ಲಿ ಸೆರೆ, ಪ್ರಾಣಿಪ್ರಿಯರ ಮೌನ- Cow kidnapping, captured on CCTV, silence from animal lovers     

Cow, captured


ಸಾಗರದಲ್ಲಿ ಬೀದಿಯಲ್ಲಿದ್ದ ಹಸುವನ್ನ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಎತ್ತಾಕಿಕೊಂಡು ಹೋಗಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಂತಹ ಘಟನೆಗಳು ಮೊದಲೇನು ದಾಖಲಾಗುತ್ತಿಲ್ಲ. ಆದರೆ ಗೋವುಗಳ ಅಪಹರಣಗಳಂತಹ ಘಟನೆ ಬಗ್ಗೆ ಪ್ರಾಣಿಪ್ರಿಯರ ಬಾಯಿಮುಚ್ಚುವಂತೆ ಮಾಡಿರುವುದು ದುರಂತ.


ಸಾಗರದ ಅಣಲೇಕೊಪ್ಪ ಪೋಸ್ಟ್ ಆಫೀಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಫಾರ್ಚ್ಯೂನರ್ ಕಾರಿನಲ್ಲಿ ಇಬ್ಬರು ಇಳಿದು ಬಂದು ಹಸುವಿಗೆ ತಿನ್ನಲು ಏನೋ ಕೊಡಲು ಮುಂದಾಗಿ ಎತ್ತಾಕಿಕೊಂಡು ಹೋಗಿದ್ದಾರೆ. ಅಪರಿಚಿತರಿಂದ ಈ ಘಟನೆ ನಡೆದಿದೆ ಎಂದು ಹಿಂದೂ ಜಾಗರಣೆಯ ಸದಸ್ಯರೊಬ್ಬರು ನೀಡಿದ ದೂರಿನ ಅನ್ವಯ ಸಾಗರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. 

ಇಂತಹ ಅಪಹರಣವಾದ ಗೋವುಗಳು ಕಸಾಯಿಖಾನೆಗೆ ಹೋಗುವುದೇ ಹೆಚ್ಚು. ಗೋವುಗಳ ಅಪಹರಣದಲ್ಲೂ ಲಾಭಿಗಳು ನಡೆದಿರುವ ಉದಾಹರಣೆಗಳಿವೆ. ಬೀದಿ ನಾಯಿಗಳನ್ನ ಈ ರೀತಿ ಎತ್ತಾಕಿಕೊಂಡು ಹೋದಾಗ ಪ್ರಾಣಿಪ್ರಿಯರ ಕರಳು ಕಿವುಚಿ ಬರುತ್ತದೆ. ಆದರೆ ಸಾಕು ಪ್ರಾಣಿ ಹಸುಗಳು ಹೀಗೆ ಅಪಹರಣವಾದರೆ ಮೌನಕ್ಕೆ ಜಾರುವುದು ದುರಂತ. 

Cow kidnapping, captured on CCTV, silence from animal lovers 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close