SUDDILIVE || SHIVAMOGGA
ಹಸುಗೂಸು ಬಿಟ್ಟು ವಿಷ ಸೇವಿಸಿ ತಾಯಿ ಆ*ತ್ಮಹ*ತ್ಯೆ-Mother commits suicide by consuming poison after leaving her baby
ಐದು ತಿಂಗಳ ಹಸುಗೂಸು ಬಿಟ್ಟು ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕುಡುಮಲ್ಲಿಗೆ ಸಮೀಪದ ಅಕ್ಸಲ್ ಕೊಪ್ಪದಲ್ಲಿ ನಡೆದಿದೆ. ಮೃತ ಮಹಿಳೆ ರಮ್ಯಾ (28) ಎಂಬುವರು ವಿಷ ಸೇವಿಸಿದ್ದು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿದರು. ಪ್ರಯೋಜನವಾಗದೆ ಸಾವಿಗೀಡಾದರು ಎನ್ನಲಾಗಿದೆ.
ತುಂಬಾ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತಿದ್ದ ರಮ್ಯಾ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದುಈ ಪ್ರಕರಣ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mother commits suicide by consuming poison after leaving her baby
