SUDDILIVE || SHIVAMOGGA
ಲಾಟರಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಂದ ಸಂಸದರು-MP calls Rahul Gandhi, leader of opposition, a lottery
ನಗರದ ಮೈಲಾರೇಶ್ವರ ದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಬಿಎಲ್ಎ-2 ಕಾರ್ಯಾಗಾರ ನಡೆದಿದೆ.
ಕಾರ್ಯಗಾರದಲ್ಲಿ ವಿನೋಬ ನಗರ ಶಕ್ತಿಕೇಂದ್ರ 50 ಬೂತ್ ನಲ್ಲಿ 48 ಬೂತ್, ಎರಡನೇ ಶಕ್ತಿ ಕೇಂದ್ರವಾದ ದೀನ್ ದಯಾಳ್ ಮಹಾಶಕ್ತಿ ಕೇಂದ್ರದಿಂದ 35-26 ಜನ, ಅಂಬೇಡ್ಕರ್ ಮಹಾಶಕ್ತಿಕೇಂದ್ರದಿಂದ 45 ಕ್ಕೆ 38 ಜನ, ಸಹ್ಯಾದ್ರಿ ಮಹಾಶಕ್ತಿ ಕೇಂದ್ರ 23 ಕ್ಕೆ 19 ಜನ, ಚೆನ್ನಬಸವೇಶ್ವರ ಶಕ್ತಿಕೇಂದ್ರ 17 ಕ್ಕೆ 17 ಶಿವಪ್ಪ ನಾಯಕ ಮಹಾಶಕ್ತಿಕೇಂದ್ರದ 48 ಕ್ಕೆ 45 ಜನ, ಛತ್ರಪತಿ ಶಿವಾಜಿ ಮಹಾಶಕ್ತಿ ಕೇಂದ್ರ 35-31, ರಾಣಪ್ರತಾಪ್ ಮಹಾಶಕ್ತಿ ಕೇಂದ್ರದಿಂದ 39-31 ಜನ ಬೂತ್ ನ ಬಿಎಲ್ ಎ ಗಳು ಹಾಜರಾಗಿದ್ದರು. 6 ಜನ ಬಿಎಲ್ ಎ ಪ್ರಮುಖರು ಗೈರಾಗಿದ್ದರು.
ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಸಂಸದರು, SIR ಮತದಾರ ಪಟ್ಟಿ ಪರಿಷ್ಕರಣೆ ಜವಬ್ದಾರಿಯನ್ನ ಹೊತ್ತಿದ್ದೇವೆ. ಸದೃಡ ಆರೋಗ್ಯ ಸಮಾಜ ಕಟ್ಟಲು ಸಹಾಯವಾಗಲಿದೆ. ವಿಶೇಷ ಗಮನಕೊಟ್ಟು ವ್ಯಕ್ತಿಯನ್ನ ಗುಣಮುಖ ಮಾಡಲು ಆಸ್ಪತ್ರೆಯಲ್ಲಿ ಸ್ಪೆಷಲ್ ಇನ್ಟೆನ್ಸಿವ್ ಕೇರ್ ಇರುವ ರೀತಿಯಲ್ಲಿ ಈ ಎಸ್ಐಆರ್ ಕೆಲಸ ಮಾಡಲಿದೆ ಎಂದರು
ಅದೇ ರೀತಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶಕ್ಕೆ 2047 ಕ್ಕೆ ಬಡತನ ನಿವಾರಣೆ, ಮೂಲಬೂತ ಸೌಕರ್ಯ ಮುಗಿಸಬೇಕು ಎಂದು ಪ್ರಧಾನಿಗಳು ಹೆಜ್ಜೆ ಇಡುವ ಸಂದರ್ಭದಲ್ಲಿ ಮತದಾರ ಪಟ್ಟಿಯ ಪರಿಷ್ಕರಣೆಯಲ್ಲಿ ಕೊರತೆ ಇರುವುದು ಸತ್ಯ ಆದರೆ, ಅದನ್ನ ಲಾಭವನ್ನ ಮಾಡಿಕೊಳ್ಳಲು ಕಾಂಗ್ರೆಸ್ ಹೊರಟಿವೆ ಎಂದು ದೂರಿದರು.
ಈ ಬಾರಿ ಲಾಟರಿ ಹೊಡೆದು ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಮತದಾನಕ್ಕಿಂತ ಮತದಾರಪಟ್ಟಿಯ ಬಗ್ಗೆ ಮಾತನಾಡಲು ಆರಂಭಿಸಿದರು. ಬಿಹಾರ್ ನಲ್ಲಿ ಎಸ್ಐಆರ್ ನಿಂದ ದಕ್ಕೆಯಾದ ಕಾರಣ ಹೆಚ್ಚಿನ ಮತನಾಡಲು ಆರಂಭಿಸಿದರು. ಬ್ರೆಜಿಲ್ ಮಹಿಳೆಯ ಫೊಟೊ ಇರುವ ಮತಗುರುತಿನ ಚೀಟಿಯಲ್ಲಿ ದುರುಪಯೋಗವಾಗಿದೆ ಎಂದು ದೂರಿದರು. ಫೊಟೊ ಇರುವ ಬ್ರೆಜಿಲ್ ಮಹಿಳೆ ಮತ್ತು ಮತದಾರರ ಪಟ್ಟಿಯಲ್ಲಿರುವ ಮಹಿಳೆಯೂ ಸಹ ಮಾಧ್ಯಮದ ಮುಂದೆ ಬಂದು ನನ್ನ ಮತಕಳವಾಗಿಲ್ಲ ಎಂದಿದ್ದಾರೆ. ಅವರ ಹೋರಾಟದ ಬಗ್ಗೆ ದೇಶದ ಜನತೆಗೆ ತಿಳಿದಿದೆ ಎಂದರು.
ಡಿಕೆಶಿಗೆ ನಾಚಿಕೆ ಆಗಬೇಕು. 1 ಮುಕ್ಕಾಲು ಕೋಟಿ ಸಹಿಸಂಗ್ರಹಿಸಿ ವಿಮಾನದಲ್ಲಿ ಹೋಗಿ ರಾಷ್ಟ್ತಪತಿಗಳಿಗೆ ನೀಡುವುದಾಗಿ ಹೇಳಿದ್ದಾರೆ. ಇವರಿಗೆ ರಸ್ತೆಯ ಗುಂಡಿ ಮುಚ್ಚಲು ಹಣವಿಲ್ಲದ ಸರ್ಕಾರವಾಗಿದೆ ಎಂದು ದೂರಿದ ಸಂಸದರು, ಬಿಎಲ್ ಒ ನಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಇರುವ ಜನರನ್ನ ಹೇಗೆ ಸೇರಿಸಬೇಕು. ಹೇಗೆ ಯಾರನ್ನ ಡಿಲೀಟ್ ಮಾಡಬೇಕು ಎಂಬುದನ್ನ ಈ ಕಾರ್ಯಗಾರ ತಿಳಿಸಲಿದೆ ಎಂದರು.
ಲೋಕಸಭಾ, ವಿಧಾನಸಭಾ ಮತ್ತು ಗ್ರಾಪಂ ಚುನಾವಣೆಗೂ ಈ ಪರಿಷ್ಕೃತ ಮತದಾರ ಪಟ್ಟಿ ಅಮೂಲ್ಯ ಹಾಗೂ ಒಂದು ಮತವೂ ಪಕ್ಷಕ್ಕೆ ಅಮೂಲ್ಯವೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಎಂಎಲ್ ಎ ಚೆನ್ನಬಸಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಮೊಹನ್ ರೆಡ್ಡಿ, ಜ್ಞಾನೇಶ್ವರ್, ಮಾಲ್ತೇಶ್, ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.
Rahul Gandhi, leader of opposition, a lottery
