ಬೆಳೆ ವಿಮೆ ಆದಷ್ಟು ಬೇಗ ಬಿಡುಗಡೆಯಾಗಲಿದೆ-ಸಂಸದರ ಭರವಸೆ-Crop insurance will be released as soon as possible - MP assures

SUDDILIVE || SHIVAMOGGA

ಬೆಳೆ ವಿಮೆ ಆದಷ್ಟು ಬೇಗ ಬಿಡುಗಡೆಯಾಗಲಿದೆ-ಸಂಸದರ ಭರವಸೆ-Crop insurance will be released as soon as possible - MP assures    

Insurence, crop


ಶಿವಮೊಗ್ಗದಲ್ಲಿ ಈ ತಿಂಗಳ ಕೊನೆಯಲ್ಲಿ ಹವಮಾನ ಆಧಾರಿತ ಬೆಳೆ ವಿಮೆ ಹಣ ಬಿಡುಗಡೆಯಾಗಲಿದೆ. ರಾಜ್ಯ ಸರ್ಕಾರ ಮೆಕ್ಕೆ ಮತ್ತು ಮುಸುಕಿನ ಜೋಳದ ಖರೀದಿ ಕೇಂದ್ರವನ್ನ ಆದಷ್ಟು ಬೇಗ ಆರಂಭಿಸಬೇಕು ಎಂದು ಬಿಜೆಪಿ ಸಂಸದರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಅವಲಂಭಿತ ದೇಶವಾದ ನಮ್ಮ ಭಾರತದಲ್ಲಿ ಹವಮಾನದ ಮೇಲೆ ಅವಲಂಭಿತವಾಗಿದ್ದು, ಹವಮಾನ ಬದಲಾದರೆ ಫಸಲು ಕೈಸೇರುತ್ತಿಲ್ಲ. ಪ್ರಧಾನಿ ಮೋದಿ ಇದನ್ನ‌ ಮನಗೊಂಡು ಕೃಷಿಯಲ್ಲಿ ಮರುಹೂಡಿಕೆ, ಆತ್ಮಹತ್ತೆ ತಡೆಯಲು, ಸಾಲದ ಬಗ್ಗೆ ಮೊದಲಾದ ಸಾಮಾಜಿಕ ಮತ್ತು ಆರ್ಥಿಕಕ್ಕೆ ಒತ್ತುಕೊಟ್ಟು ಅನೇಕ ಯೋಜನೆಯನ್ನ ತಂದಿರುವುದಾಗಿ ಬಿಜೆಪಿ ಸಂಸದರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿಎಂ ಕಿಸಾನ್ ಯೋಜನೆಯಲ್ಲಿ 20 ಕಂತುವಿನ ಹಣವನ್ನ ರೈತರಿಗೆ ತಲುಪಿಸಲಾಗಿದೆ. ಅದರ ಪ್ರಕಾರ ಜಿಲ್ಲೆಗೆ 1,64,913 ರೈತರ ಖಾತೆಗೆ 540 ಕೋಟಿ ಹಣ ಜಮಾವಾಗಿದೆ. ವರ್ಷಕ್ಕೆ 6000 ಸಾವಿರದಂತೆ 20 ಕಂತು ತಲುಪಿದೆ. ಫಸಲು ಭೀಮಾ ಯೋಜನೆಯಲ್ಲಿ ಅಗ್ರಕಲ್ಚರ್ ಕ್ರಾಪ್ ಗೆ ಬರುವ ಕಾರಗಯಕ್ರಮದಲ್ಲಿ 1,93,570 ರೈತರಿಗೆ 230 ಕೋಟಿ ಹಣ ಜಮವಾಗಿದೆ. ತೋಟಗಾರಿಕೆ ಬೆಳೆಗಳಿಗೆ ಹವಮಾನ ಬೆಳೆ ಯೋಜನೆಅಡಿಕೆ ಮಾವು ಶುಂಠಿ ಕಾಳು ಮೆಣಸು ಇವಕ್ಕೆ ಸಂಬಂಧಿಸಿದಂತೆ 2050 ಲಕ್ಷ ರೈತರಿಗೆ ಬೆಳೆ ಪರಿಹಾರ ನೀಡಲಾಗಿದೆ. 2016-17 ರಿಂದ 2024 ರವರೆಗೆ 618.16 ಲಕ್ಷ ರೂ. ಹಣ ಜಮವಾಗಿದೆ ಎಂದರು. 

ರೈತರು ಹವಮಾನ ಆಧಾರಿತ ಬೆಳೆ ವಿಮೆ ಬಿಡುಗಡೆಯಾಗಿಲ್ಲ ಎಂದು ಕರೆ ಮಾಡುತ್ತಿದ್ದಾರೆ. ಅತಿವೃಷ್ಠಿ ಮತ್ತು ಬೆಳೆ ವಿಮೆ ಹಣ ಬಂದಿಲ್ಲ ಎಂದಿದ್ದಾರೆ. ಅತಿವೃಷ್ಠಿ ಪರಿಹಾದಲ್ಲಿ ಕೇಂದ್ರದಿಂದ 75-80% ಹಣ ಕೊಡಲಿದೆ ರಾಜ್ಯ 10-20% ಕೊಡಲಿದೆ. 2025 ರ ಮುಂಗಾರುವಿನ ಹಣ ಮುಂದಿನ ವಾರದಲ್ಲಿ ರೈತರಿಗೆ ಜಮವಾಗಲಿದೆ. ಒಟ್ಟು 7500 ಎಕರೆಗೆ 5.5 ಕೋಟಿ ರೂ.ಹಣವನ್ನ 9366 ರೈತರಿಗೆ ಅಕೌಂಟ್ ಗೆ ಜಮವಾಗಲಿದೆ ಎಂದರು. 

2024-25 ರ ಸಾಲಿನ ಫಸಲು ಭೀಮ ಯೋಜನೆ ಕೃಷಿಗೆ ಸಂಬಂಧಿಸಿದಂತೆ ಹಣ 13 ಕೋಟಿ 53 ಲಕ್ಷ ರೈತರ ಖಾತೆಗೆ ಜಮವಾಗಿದೆ. ಹಿಂದಿನ ವರ್ಷದ ವಿನೆ ಹಣ ಜವಾಗಿಲ್ಲ ಎಂದು ಹೇಳುತ್ತಿದ್ದಾರೆ.  ಈ ತಿಂಗಳ ಕೊನೆಯಲ್ಲಿ 2024-25 ಸಾಲಿನ ಹವಮಾನ ಆಧಾರಿತ ಅಡಿಯಲ್ಲಿ 80-90 ಸಾವಿರ ರೈತರಿಗೆ 150-180 ಕೋಟಿ ಹಣ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆಯಿದೆ ಎಂದರು. 

60 ಸಾವಿರ ರೈತರಿಗೆ 99,145 ಎಕರೆ ಅಡಿಕೆ ಬೆಳೆಗಾರರಿಗೆ 2500 ಎಕರೆ ಶುಂಠಿ, ಮಾವು ಮೊದಲಾದ ಬೆಳೆಗಾರರಿಗೆ ವಿಮೆ 180 ಕೋಟಿ ಹಣ ಜಮವಾಗಲಿದೆ ಎಂದು ಭರವಸೆ ನೀಡಿದರು. 2018-19 30 ಕೋಟಿ ಇತ್ತು ನಂತರ ಮುಂದಿನ ವರ್ಷದಲ್ಲಿ 60 ‌ಕೋಟಿ ಹಣ ಬಂದಿತ್ತು. 2024-25 ರಲ್ಲಿ  ಡಬ್ಬಲ್ ಹಣ ಸಿಗಲಿದೆ. ಸೆಕ್ರೇಟರಿ ಶಾರದಾ ಇಕ್ಬಾಲ್ ಜೊತೆ ಮಾತನಾಡಿದ್ದೇನೆ. ರೈತರ ಅಡಿಕೆ ಕೊಯ್ಲು ಮಿಷನ್ ಆದ ತೋಟಿಗೆ ಸಬ್ಸಿಡಿ ಹಣವಾಗಿ 4000 ಪರಿಹಾರ ಇತ್ತು ಇದನ್ನ 36 ಸಾವಿರ ಕ್ಕೆ ಹೆಚ್ಚಿಸಲಾಗಿತ್ತು. ಈ ಹಣ ಯಾವುದೇ ರೈತರಿಗೆ ತಲುಪತ್ತಿರಲಿಲ್ಲ. ತೋಟಿಯನ್ನ ಪೇಟೆಂಟ್ ವಿಷಯವಾಗಿ ನ್ಯಾಯಾಲಯಕ್ಕೆ ಹೋಗಿದ್ದರು. ಸಮಸ್ಯೆ ಬಗೆಹರಿಸಲು ಕೋರಿದ್ದೆ ರೈತನ ಮನವೊಲಿಸಲಿ ಅಥವಾ ನ್ಯಾಯಾಯದಲ್ಲಿ ಆದಷ್ಟು ಬೇಗ ಬಗೆಹರಿಸಲಿ ಎಂದು ತಿಳಿಸಿದರು.

ಮೆಕ್ಕೆ ಮತ್ತು ಮುಸುಕಿನ‌ಜೋಳ ಮಾರುಕಟ್ಟೆಗೆ ಬಂದಿದೆ 1600-1700 ಇತ್ತು ನಿನ್ನೆ 1800-1900 ರೂ. ಇದೆ. ಸಾಕಷ್ಟು ಸಮಸ್ಯೆಯಿದೆ. ಕೇಂದ್ರ ಸರ್ಕಾರ ಎಂಎಸ್ಪಿಯನ್ನ ಭತ್ತದಿಂದ ಹಿಡಿದು, ಸೂರ್ಯಕಾಂತಿಗೆ ಜೂನ್ ನಲ್ಲೇ ಬೆಂಬಲ ಬೆಲೆ ಇತ್ತು 2400 ಕ್ವಿಂಟಾಲ್ ಗೆ ಎಂಎಸ್ಪಿ ಘೋಷಿಸಲಾಗಿದೆ ಇದುವರೆಗೂ ಭತ್ತಕ್ಕದ ಮಾತ್ ಖರೀದಿ ಕೇಂದ್ರ ಆರಂಭಿಸಿದರೂ ಮೆಕ್ಕೆ ಮತ್ತು ಮುಸುಕಿನ ಜೋಳಕ್ಕೆ ಖರೀದಿ ಕೇಂದ್ರ ಆರಂಭಿಸಿಲ್ಲ. ರಾಜ್ಯ ಸರ್ಕಾರ ಆದಷ್ಟು ಬೇಗ ಆರಂಭಿಸಬೇಕು ಎಂದು ಆಗ್ರಹಿಸಿದರು. 

ಈಗಾಗಲೇ ಬಿಜೆಪಿ ವತಿಯಿಂದ ಡಿಸಿಗೆ ಖರೀದಿಕೇಂದ್ರ ಆರಂಭಿಸಲು ಮನವಿ ನೀಡಲಾಗಿದೆ. ಭತ್ತ 50 ಕೆಜಿ ಮಾತ್ರ ಇದ್ದರೆ ಖರೀದಿ ಕೇಂದ್ರದಲ್ಲಿ ಖರೀದಿಯಾಗಲಿದೆ. ಬ್ಯಾಗ್ ಗೆ  ಚೀಲಕ್ಕೆ 20 ರೂ. ಇದೆ ಖರೀದಿ ಕೇಂದ್ರದಲ್ಲಿ  ಚೀಲವನ್ನ 3 ರೂ. ನಿಗದಿಯಾಗುತ್ತಿದೆ. ಇದನ್ನ ಬದಲಿಸಬೇಕು. ಕೇಂದ್ರ ಸರ್ಕಾರ ಕಬ್ಬಿಗೆ ಎಫ್ಆರ್ ಪಿ ನಿಗದಿಯಾಗಿದೆ. ನಿನ್ನೆ ಬಾಗಲಕೋಟೆಯಲ್ಲಿ ನಡೆದ ರೈತರ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ. ಯಾವ ರಾಜ್ಯದಲ್ಲಿಯೂ ಇಲ್ಲದ ಸಮಸ್ಯೆ ನಮ್ಮ ರಾಜ್ಯದಲ್ಲಿ ಏಕೆ ಎಂದು ಪ್ರಶ್ನಿಸಿದರು.

ಕ್ಲಿಯರೆನ್ಸ್ ಸಿಗಲ್ಲ

500 ಗಿಗಾ ವ್ಯಾಟ್ ಗ್ರೀನ ಎನೆರ್ಜಿ ಪ್ರಡಕ್ಷನ್ ಮಾಡಲು ಗುರಿ ಹೊಂದಿದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ಪರಿಸರ ಮತ್ತು ಜನರ ಜೀವನದ ಮೇಲೆ ಪರಿಣಾಮ ಬೀರದಂತೆ ಸೂಚನೆ ನೀಡಿತ್ತು. ರಾಜ್ಯ ಸರ್ಕಾರ ಇದನ್ನ ಯೋಚಿಸಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ತರಲಾಗಿತ್ತು. ಈಗ ಪರಿಸರ ಕ್ಲಿಯರೆನ್ಸ್ ಕೇಳಿ ಕೇಂದ್ರ ರಾಜ್ಯಕ್ಕೆ ಪತ್ರ ಬರೆದಿದೆ. ಪರಿಸರದಲ್ಲಿ 12 ಸಾವಿರ ಮರಗಳ ಮಾರಣ ಹೋಮವಾಗಲಿದೆ ಎಂಬ ಕಾರಣಕ್ಕೆ ಬಹುತೇಕ ತಡೆಯಾಗಲಿದೆ ಎಂದರು. 

ಎಲ್ಲವೂ ನ್ಯಾಯಾಲಯಕ್ಕೆ ಹೋಗಿದೆ

ಸಾಗರ ಮತ್ತು ಶಿವಮೊಗ್ಗ ಹೈವೆ ರಸ್ತೆ ಶೀಘ್ರದಲ್ಲಿ ಆರಂಭವಾಗಲಿದೆ. ಬೆಕ್ಕೋಡಿಯಲ್ಲಿ ಎರಡು ಸೇತುವೆ ಬರಲಿದೆ ಅಪ್ರೋಚ್ ರಸ್ತೆ ಕೊಡಲಾಗುತ್ತಿಲ್ಲ. ನ್ಯಾಯಾಲಯಕ್ಕೆ ಎಳೆಯಲಾಗಿದೆ. ಈಗ ನ್ಯಾಯಾಲಯದಲ್ಲಿ ಸ್ಪಷ್ಟೀಕರಣ ಕೊಡಲಾಗಿದೆ. ಕೊಡಚಾದ್ರಿ ಕೇಬಲ್ ಕಾರಿಗೆ ಭೂಮಿ ಬೇಕಾಗಿದೆ. ಭೂಮಿ ಹೋಗುವುದರಿಂದ ಇದಕ್ಕೆ ಬದಲೀ ಭೂಮಿಯಾಗಿ ಬೇರೆ ಜಿಲ್ಲೆಯನ್ನ ಗುರುತಿಸಿ ಕೊಡಲಾಗಿತ್ತು. ಪುಣ್ಯಾತ್ಮರೊಬ್ಬರು ನ್ಯಾಯಾಲಯಕ್ಕೆ ಹೋಗಿದ್ದಾರೆ. ನೆಕ್ಸ್ಟ್ ಬಜೆಟ್ ನಲ್ಲಿ ಅಧಿಕೃತವಾಗಿ ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಘೋಷಿಸಲಿದೆ ಎಂದರು. 

ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಾಲ್ತೇಶ್, ಶಿವರಾಜ್ ಮಹಿಳ ಘಟಕದ ಅಧ್ಯಕ್ಷೆ ಗಾಯಿತ್ರಿ, ಸಂತೋಷ್ ಬಳ್ಳೇಕೆರೆ, ಅಣ್ಣಪ್ಪ, ಚಂದ್ರಶೇಖರ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Crop insurance will be released as soon as possible - MP assures    


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close