ದ್ವಿತೀಯ ವರ್ಷದ ಪದವಿ ಓದುತ್ತಿದ್ದ ವಿದ್ಯಾರ್ಥಿನಿ ನಾಪತ್ತೆ-Second-year degree student goes missing

SUDDILIVE || SHIVAMOGGA

ದ್ವಿತೀಯ ವರ್ಷದ ಪದವಿ ಓದುತ್ತಿದ್ದ ವಿದ್ಯಾರ್ಥಿನಿ ನಾಪತ್ತೆ-Second-year degree student goes missing     

Student, Missing


ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಗ್ಗೊಡಿಗೆ ಗ್ರಾಮದ ಕೊರೊಡಿ ಆನಂದ್ ಹೆಚ್.ಎಸ್. ಎಂಬುವವರ ಮಗಳು ಈಶಾನ್ಯ ಎಂಬ 19 ವರ್ಷದ ಯುವತಿ ಶಿವಮೊಗ್ಗದ ವಸುಂಧರ ಹಾಸ್ಟೆಲ್‌ನಲ್ಲಿದ್ದುಕೊಂಡು ಸ.ಪ್ರ.ದ.ಕಾಲೇಜಿನಲ್ಲಿ 2ನೇ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದು, ಮನೆಯಿಂದ ಕಾಲೇಜ್‌ಗೆ ಹೋಗುವುದಾಗಿ ನ. 10 ರಂದು ಹೊರಟವಳು ಕಾಣೆಯಾಗಿದ್ದಾಳೆ.

ಈಕೆಯ ಚಹರೆ 5 ಅಡಿ ಎತ್ತರ, ದೃಢವಾದ ಮೈಕಟ್ಟು, ದುಂಡುಮುಖ,ಎಣ್ಣೆ ಕಪ್ಪು ಮೈ ಬಣ್ಣ, ತಲೆಯಲ್ಲಿ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿದ್ದು, ಎಡ ತುಟಿಯ ಮೇಲ್ಭಾಗ ರಾಗಿ ಕಾಳು ಗಾತ್ರದ ಕಪ್ಪುಮಚ್ಚೆ ಇರುತ್ತದೆ. ಕನ್ನಡ ಮಾತನಾಡಲು, ಓದಲು ಬರೆಯಲು ತಿಳಿದಿದ್ದು, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ್ ಬಿಳಿ ಬಣ್ಣದ ವೇಲ್ ಧರಿಸಿರುತ್ತಾಳೆ ಹಾಗೂ ಒಂದು ಕಪ್ಪು ಬಣ್ಣದ ಸ್ಕೂಲ್ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾಳೆ. 

ಈ ಯುವತಿಯ ಪತ್ತೆಯಾದಲ್ಲಿ ಎಸ್.ಪಿ. ಶಿವಮೊಗ್ಗ -08182-261400, ಡಿವೈಎಸ್‌ಪಿ ತೀರ್ಥಹಳ್ಳಿ 08181 – 220388, ಸಿಪಿಐ ಮಾಳೂರುವೃತ್ತ :- 9480803333/ಪಿಎಸ್‌ಐ ಆಗುಂಬೆ ರವರಿಗೆ :- 9480803314, ಕಂಟ್ರೋಲ್ ರೂ ಶಿವಮೊಗ್ಗ – 9480803300, ಇವರುಗಳನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

Second-year degree student goes missing

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close