ಕ್ರೀಡಾಕೂಟದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ವಿಕಲಾಂಗಚೇತನDisabled man dies after collapsing during sports event

 SUDDILIVE || SHIVAMOGGA

ಕ್ರೀಡಾಕೂಟದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ವಿಕಲಾಂಗಚೇತನ-Disabled man dies after collapsing during sports event

Disabled, collapsing


ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಅಂಗವಿಕಲರ ಸ್ಪರ್ಧಾಕೂಟದ ವೇಳೆ ವಿಕಲಾಂಗ ಚೇತನದವರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 

ಇಂದು ಬೆಳಗ್ಗೆಯಿಂದ ನೆಹರೂ ಕ್ರೀಡಾಂಗಣದಲ್ಲಿ ವಿಕಲಾಂಗ ಚೇತನರ ಜಿಲ್ಲಾಮಟ್ಟದ ಕ್ರೀಡಾ ಕೂಟ ನಡೆಯುತ್ತಿರುವ ವೇಳೆ ಹೊಸನಗರದಿಂದ ಬಂದಿದ್ದ ಶ್ರೀಕಾಂತ್ (45) ಕುಸಿದು ಬಿದ್ದು ಒದ್ದಾಡಿ ಸಾವನ್ನಪ್ಪಿದ್ದಾರೆ. 


ಸ್ಥಳಕ್ಕೆ ಜಯನಗರ ಪೊಲೀಸರು ಸ್ಥಳಕ್ಕೆ ದಾವಿಸಿ ಸಿಸಿ ಟಿವಿ ಫೂಟೇಜ್ ಗಳನ್ನ ಪರಿಶೀಲಿಸುತ್ತಿದ್ದಾರೆ. ಮೃತನ ಗಲ್ಲಕ್ಕೆ ಹೊಡೆತಬಿದ್ದು ನಾಲಿಗೆ ಕಚ್ಚಿಕೊಂಡಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಜಿಲ್ಲಾ ವಿಕಲಚೇತನ ಮತ್ತು ಹಿರಿಯನಾಗರೀಕರ ಸಬಲೀಕರಣ ಇಲಾಖೆಯಲ್ಲಿ ಶ್ರೀಕಾಂತ್ ಸಿಬ್ಬಂದಿಯಿರುವುದಾಗಿ ಹೇಳಲಾಗುತ್ತಿದೆ. 

ಯುಆರ್ ಡಬ್ಲೂ ( ಅರ್ಬನ್ ರಿಹಾಬಿಲಿಟೇಷನ್ ವರ್ಕರ್) ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಶ್ರೀಕಾಂತ್ ಎಂಆರ್ ಡಬ್ಲೂ ಅವರಿಗೆ ಹೇಳದೆ ಕಟ್ಟೆ ಮೇಲೆ ಕುಳಿತಾಗ ಈ ಘಟನೆ ನಡೆದಿದೆ. ಸಾವಿಗೆ ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 12-30 ರ ಸಮಯದಲ್ಲಿ ಈ ಘಟನೆ ನಡೆದಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close