ಪಾರ್ಕ್ ಬಡಾವಣೆಯಲ್ಲಿ 21 ಕನ್ಸರ್ವೆನ್ಸಿಗಳಲ್ಲಿ ವಾಹನಗಳ ಪಾರ್ಕಿಂಗ್-ಎಸ್ಪಿಯವರಿಂದ ಪರಿಶೀಲನೆ- SP inspects parking of vehicles in 21 conservancies in Park Layout

SUDDILIVE || SHIVAMOGGA

ಪಾರ್ಕ್ ಬಡಾವಣೆಯಲ್ಲಿ 21 ಕನ್ಸರ್ವೆನ್ಸಿಗಳಲ್ಲಿ ವಾಹನಗಳ ಪಾರ್ಕಿಂಗ್-ಎಸ್ಪಿಯವರಿಂದ ಪರಿಶೀಲನೆ- SP inspects parking of vehicles in 21 conservancies in Park Layout       

Sp, inspects

ಪಾರ್ಕ್ ಬಡಾವಣೆಯಲ್ಲಿ ಕನ್ಸರ್ ವೆನ್ಸಿಗಳನ್ನ ಗುರುತಿಸಿ ಪಾರ್ಕಿಂಗ್ ವ್ಯವಸ್ಥೆಮಾಡುವ ಕುರಿತು ಈ ಹಿಂದೆ ಎಸ್ಪಿ ಮಿಥುನ್ ಕುಮಾರ್ ನೆಹರೂ ರಸ್ತೆಯ ಅಂಗಡಿಗಳ ಜೊತೆಯ ಸಭೆಯಲ್ಲಿ ತಿಳಿಸಿದ ಬೆನ್ನಲ್ಲೇ ಇಂದು ಎಸ್ಪಿ ಮಿಥುನ್ ಕುಮಾರ್ ಪಾಲಿಕೆ ಅಧಿಕಾರಿಗಳ ಜೊತೆ ಭೇಟಿ ಮಾಡಿ ಪರಿಶೀಲಿಸಿದ್ದಾರೆ. 

ಶಿವಮೊಗ್ಗ ಸ್ಮಾರ್ಟ ಸಿಟಿಯಿಂದ ವಾಹನ ನಿಲುಗಡೆಗಾಗಿ ಅಭಿವೃದ್ಧಿ ಪಡಿಸಿರುವ ಕನ್ಸರ್ವೆನ್ಸಿ ಸ್ಥಳಗಳಾದ, ಪಾರ್ಕ ಬಡಾವಣೆ ಮುಖ್ಯ ರಸ್ತೆ, ನೆಹರು ರಸ್ತೆಗೆ ಭೇಟಿ ನೀಡಿ  ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಹಾಜರಿದ್ದ ಸಾರ್ವಜನಿಕರು, ವರ್ತಕರು, ಆಸ್ಪತ್ರೆಯ ಮುಖ್ಯಸ್ಥರನ್ನು  ಉದ್ದೇಶಿಸಿ ಕನ್ಸರ್ವೆನ್ಸಿ ರಸ್ತೆಗಳನ್ನು ವಾಹನಗಳ ಪಾರ್ಕಿಂಗ್ ಗೆ ಬಳಸಿಕೊಳ್ಳುವ ಸಲುವಾಗಿ ಕೆಳಕಂಡಂತೆ ಸೂಚನೆಗಳನ್ನು ನೀಡಿರುತ್ತಾರೆ. 


1. ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗಧಿಪಡಿಸುವ ಕನ್ಸರ್ ವೆನ್ಸಿ ನಿಲುಗಡೆ ಸ್ಥಳದಲ್ಲಿಯೇ ನಿಲುಗಡೆ ಮಾಡುವುದು. 

2. ಆಸ್ಪತ್ರೆಗಳಿಗೆ ಬೇರೆ ಬೇರೆ ಕಡೆಗಳಿಂದ ಬರುವ ವಾಹನ ಸವಾರರು ನಿಗಧಿಪಡಿಸಿದ ಕನ್ಸರ್ವೆನ್ಸಿ  ವಾಹನ ನಿಲುಗಡೆ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು. 

3. ಕನ್ಸರ್ವೆನ್ಸಿ ಗಳಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸರ್ಜಿ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ನಂಜಪ್ಪ ಆಸ್ಪತ್ರೆ, ವಾತ್ಸಲ್ಯ ಆಸ್ಪತ್ರೆ, ಮಲ್ನಾಡ್ ಆಸ್ಪತ್ರೆ ಹಾಗು ಮೆಟ್ರೋ ಆಸ್ಪತ್ರೆ ಗಳಿಗೆ ಬರುವ  ವಾಹನ ಸವಾರರಿಗೆ ಹಾಗು ಸ್ಥಳೀಯ ನಾಗರೀಕರಿಗೆ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ. ಸಾರ್ವಜನಿಕರು ಇದನ್ನು ಬಳಸಿಕೊಂಡು ನಗರದ ಪ್ರಮುಖ ರಸ್ತೆಗಳಾದ ಪಾರ್ಕ ಬಡಾವಣೆ, ದುರ್ಗಿಗುಡಿ, ರಾಘವೇಂಧ್ರ ಸ್ವಾಮಿ ಮಠ ರಸ್ತೆ, ಭಾಗದಲ್ಲಿ ಸುಗಮ ಸಂಚಾರಕ್ಕೆ  ಅನುವು ಮಾಡಿಕೊಡಲು ಸೂಚಿಸಿರುತ್ತಾರೆ.

 ಎಸ್.ಪಿ. ರವರ ಮಾರ್ಗದರ್ಶನದಲ್ಲಿ ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ  ಶ್ರೀ. ದೇವರಾಜ್ ರವರ ನೇತೃತ್ವದಲ್ಲಿ ಸುಮಾರು 20 ಜನ ಟ್ರಾಪಿಕ್ ಸಿಬ್ಬಂದಿಗಳು ಹಾಗು ಮಹಾನಗರ ಪಾಲಿಕೆ ಸಿಬ್ಬಂದಿ ಜಂಟಿ ಕಾರ್ಯಚರಣೆ  ನಡೆಸಿ, ಫುಟ್ ಫಾತ್ ಒತ್ತುವರಿ ತೆರವು ಕಾರ್ಯಚರಣೆ, ವಾಹನಗಳನ್ನು ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡುವಂತೆ ಮತ್ತು ಕನ್ಸರ್ವೆನ್ಸಿ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಮುಂದಿನ ದಿನಗಳಲ್ಲಿ ಸದರಿ ಪಾರ್ಕ ಬಡಾವಣೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 

ಈ ಸಂದರ್ಭದಲ್ಲಿ ಶ್ರೀ. ಕಾರಿಯಪ್ಪ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ. ದೇವರಾಜ್ ಟಿ.ವಿ. ಸಿಪಿಐ  ಸಂಚಾರ ವೃತ್ತ, ಶ್ರೀಮತಿ ಸ್ವಪ್ನ ಪಿ.ಎಸ್.ಐ.-1 & ಶ್ರೀಮತಿ ಭಾರತಿ ಬಿ.ಹೆಚ್.  ಪಿ.ಎಸ್.ಐ.-2 ಪಶ್ಚಿಮ ಸಂಚಾರ ಠಾಣೆ, ಶ್ರೀ. ಅಕ್ಬರ್ ಮುಲ್ಲಾ ಪಿ.ಎಸ್.ಐ. -1  & ಶ್ರೀ. ಶಿವಣ್ಣನವರ್ ಪಿ.ಎಸ್.ಐ-2 ಪೂರ್ವ ಸಂಚಾರ ಠಾಣೆ ಮತ್ತು  ಶಿವಮೊಗ್ಗ ನಗರ ಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

SP inspects parking of vehicles in 21 conservancies in Park Layout

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close