ಯಾವ ಡ್ರಗ್ಸ್ ನಲ್ಲಿ ಧರ್ಮನ ಕೇಳಿ ಹಲ್ಲೆ ನಡೆಸುವ ನಿಶೆ ಇದೆ-ಎಷ್ಟು ಹಿಂದೂಗಳ ಹತ್ಯೆಯಾದಾಗ SDPI ಖಂಡಿಸಿದೆ-ಶಾಸಕ ಚೆನ್ನಿ ಗರಂ-Which drugs have the intention to attack people on the basis of religion

SUDDILIVE || SHIVAMOGGA

ಯಾವ ಡ್ರಗ್ಸ್ ನಲ್ಲಿ ಧರ್ಮನ ಕೇಳಿ ಹಲ್ಲೆ ನಡೆಸುವ ನಿಶೆ ಇದೆ-ಎಷ್ಟು ಹಿಂದೂಗಳ ಹತ್ಯೆಯಾದಾಗ SDPI ಖಂಡಿಸಿದೆ-ಶಾಸಕ ಚೆನ್ನಿ ಗರಂ-Which drugs have the intention to attack people on the basis of religion? SDPI condemned the killing of so many Hindus - MLA Chenni Garam

Drugs, sdpi


ಮಾರ್ನಮಿ ಬೈಲಿನಲ್ಲಿ ಹರೀಶ್ ಎಂಬುವರ ಮೇಲೆ ನಡೆದ ಹಲ್ಲೆ ವಿಚಾರದಲ್ಲಿ ಶಾಸಕ ಚೆನ್ನಬಸಪ್ಪ ನಿನ್ನೆ ಗೃಹ ಸಚಿವ ಮತ್ತು ಡಿಜಿ ಸಲೀಂ, ಎಡಿಜಿಪಿ ಹಿತೇಂದ್ರ ಕುಮಾರ್ ರನ್ನ‌ಭೇಟಿ ಮಾಡಿ ದುಷ್ಕರ್ಮಿಗಳನ್ನ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ವಿಷಯವನ್ನ ರವಾನಿಸಿ ಬಂದ ಶಾಸಕ ಚೆನ್ನಿಯ ಮನವಿ ಮೇರೆಗೆ ಡಿಜಿ ಅವರ ಆದೇಶದ ಮೇರೆಗೆ ನಗರಕ್ಕೆ ಇಂದು ಐಜಿಪಿ ರವಿಕಾಂತೇಗೌಡರು ನಗರಕ್ಕೆ ಆಗಮಿಸಿದ್ದರು. 

ಐಜಿಪಿ ರವಿಕಾಂತೇಗೌಡರನ್ನು ಭೇಟಿಯಾದ ಶಿವಮೊಗ್ಗದ ಶಾಸಕ ಚೆನ್ನಬಸಪ್ಪ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಡಿವೈಎಸ್ಪಿ ಬಾಬು‌ಅಂಜನಪ್ಪ ನವರ ಕಚೇರಿಯಲ್ಲಿ ಐಜಿಪಿಯ ಮುಂದೆ ಪೊಲೀಸ್ ಇಲಾಖೆಯ ವೈಫಲ್ಯವನ್ನ ಎತ್ತಿಹಿಡಿದಿದ್ದಾರೆ. ಐಜಿಪಿ ಅವರೊಂದಿಗೆ ಮಾತನಾಡಿದ ನಂತರ ಶಿವಮೊಗ್ಗದ ಶಾಸಕ ಚೆನ್ನಬಸಪ್ಪ ಮಾಧ್ಯಮಗಳೊಂದಿಗೂ ಮಾತನಾಡಿದ್ದಾರೆ. 

ಕಾಶ್ಮೀರದಲ್ಲಿ ಧರ್ಮ ಕೇಳಿ ಹತ್ಯೆ ಮಾಡಿದ್ದನ್ನು ನೋಡಿದ್ದೆವು, ಶಿವಮೊಗ್ಗದಲ್ಲೂ ಅದೇ ಮಾದರಿಯಲ್ಲಿ ಹಿಂದೂನಾ? ಮುಸ್ಲಿಮ್ ?ಎಂದು ಕೇಳಿ ಹಲ್ಲೆ ನಡೆಸಿದ್ದಾರೆ. ಹಿಂದೂ ಎಂದ ಮೇಲೆ ಹಲ್ಲೆ ನಡೆಸಿದ್ದಾರೆ ಈ ಬಗ್ಗೆ ಐಜಿಪಿಗೆ ಮಾಹಿತಿ ನೀಡಿದ್ದೇನೆ ಎಂದರು. 

ಶಿವಮೊಗ್ಗದ ಕೆಲ ಏರಿಯಾಗಳಲ್ಲಿ ಭಯದ ವಾತಾವರಣ ಇದೆ. ಭಯದ ವಾತಾವರಣ ಹತ್ತಿಕ್ಕುವ ಕೆಲಸವನ್ನು ರಕ್ಷಣೆ ಇಲಾಖೆ ಮಾಡಬೇಕು. ಆರ್ ಎಂ ಎಲ್ ನಗರ ಮಿಲ್ಲಘಟ್ಟ ಬುದ್ಧನಗರ ಮಾರ್ಗಮಿಬೈಲು ಬಾಪೂಜಿನಗರ ರಾಗಿಗುಡ್ಡ ಬಡಾವಣೆಗಳಲ್ಲಿ ನಾಗರಿಕರು ದೂರ ನೀಡದ ಭಯದ ವಾತಾವರಣ ಇದ್ದಾರೆ. ಈ ಪ್ರಕರಣವನ್ನು ಡೈಲ್ಯೂಟ್ ಮಾಡಲು ಬಿಡುವುದಿಲ್ಲ ಎಂದು ಗುಟರ್ ಹಾಕಿದರು.

ಶಿವಮೊಗ್ಗದಲ್ಲಿ ಡ್ರಗ್ ಮಾಫಿಯಾ ಮಟ್ಟ ಹಾಕಬೇಕು. ನಿಶಾದಲ್ಲಿ ಹಿಂದೂನ ಎಂದು ಕೇಳಿ ಹೊಡೆಯುವ ವಾತಾವರಣ ಇದೆ. ಯಾವ ಡ್ರಗ್ಸ್ ನಲ್ಲಿ ಹಿಂದೂನಾ ಮುಸ್ಲಾಂ ಎಂದು ಕೇಳಿ ಹೊಡೆಯುವ ನಿಶಾ ಸಿಗುತ್ತದೆ. ಸಾಮಾನ್ಯ ಜನರಿಗೆ ರಕ್ಷಣೆ ಸಿಗದ ಇಲಾಖೆ ನಮಗೆ ಬೇಡ ಎಂದು ಹೇಳಿದ್ದೇನೆ.  ಪೊಲೀಸ್ ಇಲಾಖೆಗೆ ಗೊತ್ತಿರುವ ಸಂಗತಿಗಳನ್ನು ನಿರ್ಲಕ್ಷ ಮಾಡಿದರೆ ಏನೆಲ್ಲಾ ಆಗಿದೆ ಎಂಬುದನ್ನು ವಿವರಿಸಿದ್ದೇವೆ.  ಹರೀಶ ಜನ್ಮದಲ್ಲಿ ಮದ್ಯ ಸೇವಿಸಿಲ್ಲ ಆತ ಕುಡಿದು ಬಂದಿದ್ದ ಎಂದು ನರೆಟಿವ್ ಫಿಕ್ಸ್ ಮಾಡುವ ಯತ್ನ ನಡೆದಿದೆ. 

ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ ಅದರಲ್ಲಿ ಹಿಂದೂ ಇದ್ದರೆ ಆತ ಡ್ರಗಿಸ್ಟ್ ಆಗಿದ್ದರೆ ಮುಲಾಜೆ ಇಲ್ಲ. ಹಿಂದೂಗಳ ಹೆಸರಿಟ್ಟುಕೊಂಡು ದಂಧೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಅಮಾಯಕರನ್ನು ಬಲಿಪಶು ಮಾಡಬಾರದು. ಸಂತ್ರಸ್ತ ಹರೀಶ್ ನನ್ನು ಬಲಿಪಶು ಮಾಡಲು ಹೊರಟಿದ್ದರು.

ಅಮಾಯಕರಿಗೆ ಶಕ್ತಿ ನೀಡಬೇಕಿದೆ ಯಾರು ಮಾಡಬಾರದು ಮಾಡುತ್ತಿದ್ದಾರೆ ಅವರನ್ನು ಮಟ್ಟ ಹಾಕಬೇಕಿದೆ. ಡ್ರಗ್ ಮಾಫಿಯಾದಲ್ಲಿ ಹಿಂದೂ ಇದ್ದರೆ ಆತನ ಮೇಲೂ ಕಠಿಣ ಕ್ರಮ ಕೈಗೊಳ್ಳಿ ನಾವು ರಕ್ಷಣೆ ಮಾಡಲ್ಲ. ನಾಗರಿಕರ ಸಹಕಾರದಿಂದ ಘಟನೆ ನಡೆದ ಏರಿಯಾದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದ್ದೇವೆ

ಹಿಂದೂ ಮತ್ತು ಮುಸ್ಲಿಂ ಎಂದು ಶಾಸಕರು ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಎಸ್ ಡಿ ಪಿ ಐ ಹೇಳಿಕೆ ವಿಚಾರದಲ್ಲಿ ಶಾಸಕರು ಕೆಂಡಮಂಡಲರಾಗಿದ್ದಾರೆ. 

ನಿಷೇಧಿತ ಪಿಎಫ್ಐ ಸಂಘಟನೆ ಜೊತೆಗಿರುವ ಎಸ್‌ಡಿಪಿಐ ನಿಂದ ನಾವು ಪಾಠ ಕಲಿಯಬೇಕಿಲ್ಲ ನಿಷೇಧಿತ ಸಂಘಟನೆ ಜೊತೆಗೆ ಎಸ್ ಡಿಪಿಪಿ ಇರುವ ಕಾರಣದಿಂದಲೇ ಸೂಕ್ಷ್ಮವಾಗಿ ಗಮನಿಸಲು ಇಲಾಖೆಗೆ ಹೇಳಿದ್ದೇವೆ. ತುಂಗಾ ನದಿ ತೀರದಲ್ಲಿ ಟ್ರಯಲ್ ಬಾಂಬ್ ಬ್ಲಾಸ್ಟ್ ಮಾಡಿದ್ದರು. ಹಿಂದುಗಳಿಗೆ ಅನ್ಯಾಯವಾದರೆ ಅವರೊಂದಿಗೆ ನಿಂತು ಕೊಳ್ಳುತ್ತೇವೆ 

ಶಿವಮೊಗ್ಗದಲ್ಲಿ ನಡೆದ ಗಲಭೆಗಳ ಮೇಲೆ ಹಿಂದುಗಳ ಹತ್ಯೆ ನಡೆದಿತ್ತು. ಪಿ ಎಫ್ಐ ಗಲಾಟೆಯಲ್ಲಿ ವಿಶ್ವನಾಥ ಶೆಟ್ಟಿ ಹತ್ಯೆಯಾದಾಗ ಎಸ್ ಡಿಪಿಐ ಘಟನೆ ಖಂಡಿಸಿತ್ತಾ? ಹಿಂದುಗಳ ಪರ ಹೋರಾಟಕ್ಕೆ ಎಸ್ಡಿಪಿಐ ಬರುವ ನಿರೀಕ್ಷೆ ಮಾಡಲು ಸಾಧ್ಯವೇ? ಹಿಂದುಗಳ ಪರ ಹೋರಾಟ ನಾವೇ ಮಾಡಬೇಕಾಗಿದೆ.  ಇದರಲ್ಲಿ ರಾಜಕಾರಣ ಮಾಡುವ ತೆವಲು ಬಿಜೆಪಿಗೆ ಇಲ್ಲ. ವೈಚಾರಿಕ ನೆಲಗಟ್ಟಿನಲ್ಲಿ ಬಿಜೆಪಿ ಕೆಲಸ ಮಾಡುತ್ತೆ 

ಶಾಸಕನಾಗಿರುವುದು ಈ ರೀತಿಯ ಕೆಲಸ ಮಾಡಿ ಅಲ್ಲ ಹಿಂದೂ ಸಮಾಜಕ್ಕೆ ಸಂರಕ್ಷಣೆ ಮಾಡಿರುವುದಕ್ಕೆ ಶಾಸಕ ಆಗಿದ್ದೇನೆ. ಎಸ್ ಡಿ ಪಿಐಗೆ ಹೇಗೆ ಬುದ್ಧಿ ಕಲಿಸಬೇಕು ಗೊತ್ತಿದೆ ಪಿಎಫ್ ಐ ನಿಷೇಧ ಆಗಿದ್ದರು ಕೆಲಸ ಮಾಡುತ್ತಿಲ್ಲವೇ?ಹಿಂದುತ್ವದ ಬಗ್ಗೆ ಕೆಲಸ ಮಾಡುವ ಕಾರ್ಯಕರ್ತರನ್ನು ಗಡಿಪಾರು ಮಾಡುತ್ತೀರಾ? ನಿಷೇಧಿತ ಪಿ ಎಫ್ ಐ ಸಂಘಟನೆ ಚಟುವಟಿಕೆ ನಡೆಸುವವರನ್ನು ಶಿವಮೊಗ್ಗದಲ್ಲಿ ಗಡಿಪಾರು ಮಾಡಿ ಎಂದರು. 

Which drugs have the intention to attack people on the basis of religion    


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close