ಮೆಗ್ಗಾನ್ ನಲ್ಲಿ ಸಂಚಲನ ಮೂಡಿಸಿದ ಡಾ.ನಾಗಲಕ್ಷ್ಮಿ ಚೌಧರಿ-Dr. Nagalakshmi Chaudhary created a stir in Meggan

 SUDDILIVE || SHIVAMOGGA

ಮೆಗ್ಗಾನ್ ನಲ್ಲಿ ಸಂಚಲನ ಮೂಡಿಸಿದ ಡಾ.ನಾಗಲಕ್ಷ್ಮಿ ಚೌಧರಿ-Dr. Nagalakshmi Chaudhary created a stir in Meggan     

Dr.Nagalakshmi, stir

ನಗರದ ಮೆಗ್ಗಾನ್ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿದ್ದಾರೆ. ತಾಯಿ ಮತ್ತು ಮಗುವಿನ ಆಸ್ಪತ್ರೆ ಮಗುವನ್ನ ಎತ್ತುಕೊಂಡು ತಾಯಿತನವನ್ನ  ಪ್ರದರ್ಶಿಸಿದ ಅಧ್ಯಕ್ಷೆ ಗೌಪ್ಯವಾಗಿಯೇ ಭ್ರಷ್ಠಾಚಾರದ ಆರೋಪದ ಬಗ್ಗೆ ವೈದ್ಯರು ಮತ್ತು ಸಿಬ್ಬಂದಿಗಳನ್ನ ವಿಚಾರಣೆ ನಡೆಸಿದ್ದಾರೆ. ಮೆಗ್ಗಾನ್ ನಲ್ಲಿ ಕೌಂಟರ್ ಗಳನ್ನ ಹೆಚ್ಚಿಸುವ ಸಲಹೆ ನೀಡಿದ್ದಾರೆ. 

ಮಹಿಳಾ  ವಾರ್ಡ್ ನಲ್ಲಿ ಹೆರಿಗೆಗೆ ಹಣಪಡೆಯಲಾಗುತ್ತಿದೆ. ಗಂಡು ಮಗುವಿಗೆ ಎರಡು ಸಾವಿರ ರೂ. ಹೆಣ್ಣುಮಗು ಹುಟ್ಟಿದರೆ ಒಂದು ಸಾವಿರ ರೂ. ಹಣ ಕೊಡಬೇಕಾದ ಸ್ಥಿತಿಯಿದೆ ಎಂಬ ಆರೋಪದ ಬೆನ್ನಲ್ಲೇ ಹೆರಿಗೆ ವಾರ್ಡ್ ಗೆ ಭೇಟಿ ನೀಡಿದ ಅಧ್ಯಕ್ಷೆ ಹೆರಿಗೆಯಲ್ಲಿ ಆಗತಾನೆ ಜನ್ಮ ಪಡೆದ ಮಗುವನ್ನ ಎತ್ತುಕೊಂಡು ರೋಗಿಯನ್ನೇ ಗುಪ್ತವಾಗಿ ವಿಚಾರಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಅಂತಹ ದೈರ್ಯವನ್ನ ಯಾವ ತಾಯಂದಿರು ಒಪ್ಪಿಕೊಳ್ಳದ ಹಿನ್ನಲೆಯಲ್ಲಿ ಈ ಆರೋಪ ಆರೋಪವಾಗಿಯೇ ಉಳಿದಿದೆ.


ನಂತರ ಮಾಧ್ಯಮಗಳಿಗೆ ಮಾತನಾಡಿದ ಡಾ.ನಾಗಲಕ್ಷ್ಮೀ ಚೌಧರಿ,  ವಾರ್ಡ್ ನಲ್ಲಿ ಹಣ ಪಡೆಯುವ  ಬಗ್ಗೆ ರೋಗಿಗಳನ್ನ ವಿಚಾರಿಸಿದೆ. ಯಾರೂ ಸಹ ಇದರ ಬಗ್ಗೆ ಒಪ್ಪಿಕೊಳ್ಳಲಿಲ್ಲ. ಸಿಸ್ಟರ್ ಗಳ ಜೊತೆನೂ ಈ ಬಗ್ಗೆ ಚರ್ಚಿಸಿದೆ ಯಾರೂ ಈ ಬಗ್ಗೆ ಮಾತನಾಡಲಿಲ್ಲ ಎಂದರು. 

ಹೆರಿಗೆ ವಾರ್ಡ್ ನಲ್ಲಿ ಮಹಿಳೆಯರ ಜೊತೆ ಬರುವ ಸಂಬಂಧಿಗಳಿಗೆ, ಪುರುಷರಿಗೆ ಶೌಚಾಲಯದ ಕೊರತೆಯಿದೆ. ಅದನ್ನ ಪೂರೈಸಬೇಕಿದೆ. ರಕ್ತ ಸಂಗ್ರಹದಲ್ಲಿ ಜನಜಂಗುಳಿಯಿದೆ, ನೀರಿನ ವ್ಯವಸ್ಥೆಯಿದೆ. ಕೊರತೆಯಿರುವ ಬಗ್ಗೆ ಪಟ್ಟಿ ಮಾಡಿದ್ದೇನೆ ಅದರ ಬಗ್ಗೆ ಡಿಸಿಗೆ ವರದಿಕೊಡಲು ಸೂಚಿಸಿರುವೆ ಎಂದರು. 

ಬಾಲಕಿಯರೆ ಗರ್ಭಾವತಿಯಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿದ ನಾಗಲಕ್ಷ್ಮೀ ಚೌಧರಿ ಮೂರು ತಿಂಗಳಿಗೆ ಹಾಸ್ಟೆಲ್ ವಿದ್ಯಾರ್ಥಿನಿಯರ ಹೆಲ್ತ್ ರಿಪೋರ್ಟ್ ಬಗ್ಗೆ ವರದಿ ನೀಡಲು ಸಮಾಜಕಲ್ಯಾಣ ಇಲಾಖೆಗೆ ಸೂಚಿಸುತ್ತಿರುವೆ. ಕೆಲ ಮಕ್ಕಳಿಗೆ ಮಿಲನವಾದರೆ ಗರ್ಭಿಣಿಯಾಗುತ್ತೇನೆ ಎಂಬ ಪ್ರಾಥಮಿಕ ಮಾಹಿತಿಯೂ ಇರುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು. 

ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಒಂದು ಎಫ್ಐಆರ್ ದಾಖಲಾಗಲು ಲಂಚಪಡೆಯುವ ಬಗ್ಗೆ ಆಧಾರ, ಸಾಕ್ಷಿ ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಡಿಸಿದರು. 

Dr. Nagalakshmi Chaudhary created a stir in Meggan

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close